ಕರಾವಳಿ

ರಾಜ್ಯದ 11 ಕಡೆ ‘ಮತ್ಸ್ಯ ದರ್ಶಿನಿ’- ಕಮ್ಮಿ ಬೆಲೆಯಲ್ಲಿ ಪುಷ್ಕಳ ಮೀನೂಟ- ಸಚಿವ ಕೋಟ

Pinterest LinkedIn Tumblr

ಕುಂದಾಪುರ: ಮೀನುಗಾರರ ಸಾಲ ಮನ್ನಾ ಬಗ್ಗೆ ಸರ್ಕಾರ ಸುತ್ತೋಲೆ ಹೊರಡಿಸಿದ್ದರಿಂದ ಫಲಾನುಭವಗಳಿಗೆ ಹಣ ಕಟ್ಟುವಂತೆ ಹಾಗೂ ಮತ್ತೆ ಸಾಲ ಸಿಗೋದಿಲ್ಲ ಎಂಬ ಒತ್ತಡ ಹಾಕ ಬಾರದು. ಯಾರೆಲ್ಲಾ ಮೀನುಗಾರರ ಸಾಲಾ ಮನ್ನಾದ ಪಟ್ಟಿಯಲ್ಲಿ ಇದ್ದಾರೋ ಅವರೆಲ್ಲರ ಸಾಲದ ಹಣ ಬ್ಯಾಂಕಿಗೆ ಸರ್ಕಾರ ತುಂಬಲಿದೆ. ಇನ್ನೊಂದು ವಾರದಲ್ಲಿ ಭೂಮಿ ತಂತ್ರಾಂಷದ ಮೂಲಕ ಹಣ ಬಿಡುಗಡೆ ಮಾಡಲಾಗುತ್ತದೆ. ಮೀನುಗಾರಿಕೆ ಅಭಿವೃದ್ಧಿ ದೃಷ್ಟಿಯಲ್ಲಿ ಸಮಗ್ರ ಸಮುದ್ರ ಮೀನಗಾರಿಕಾ ನೀತಿ ರೂಪಿಸಲಾಗುತ್ತದೆ. ..ಹೀಗೆ ಭರವಸೆ ನೀಡಿದವರು ಬಂದರು ಹಾಗೂ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ.

ಉಡುಪಿ ಜಿಲ್ಲಾ ಪಂಚಾಯಿತಿ ಮೀನುಗಾರಿಕಾ ಇಲಾಖೆ ಆಶ್ರಯದಲ್ಲಿ ಕುಂದಾಪುರ ತಾಲೂಕು ಪಂಚಾಯಿತಿ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಸೋಮವಾರ ನಡೆದ ಮೀನುಗಾರಿಕಾ ಮಾಹಿತಿ ಮತ್ತು ಸವಲತ್ತು ವಿತರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು.

ರೈತರಿಗೆ ಹೇಗೆ ಕಿಸಾನ್ ಕಾರ್ಡ್ ಕೊಡಲಾಗುತ್ತಿತ್ತೋ ಹಾಗೆ ಮೀನುಗಾರರಿಗೆ ಕಿಸಾನ್ ಕಾರ್ಡ್ ನೀಡುವ ಹೊಸ ಕಲ್ಪನೆ ಜಾರಿ ಮಾಡಲಾಗಿದ್ದು ಇದರಿಂದ ಮೀನುಗಾರರಿಗೆ ಸಹಾಯ ಆಗಲಿದೆ ಎಂಬ ವಿಶ್ವಾಸವಿದೆ. ಗುತ್ತೆಗೆದಾರರಿಗಾಗಿ, ಕಾಮಗಾರಿಗೋಸ್ಕರ ಕಾಮಗಾರಿ ಮಾಡದೆ, ಮೀನುಗಾರರ ಅಭಿವೃದ್ಧಿ ದೃಷ್ಟಿಯಲ್ಲಿ ಕೆಲಸ ಮಾಡಲಾಗುತ್ತಿದ್ದು, ಎಷ್ಟೇ ಅನುದಾನ ಖರ್ಚಾದರೂ ತೊಂದರೆಯಿಲ್ಲ.ನಮ್ಮ ನೆರವಿಗೆ ಕೇಂದ್ರ ಸರ್ಕಾರ ಬರುತ್ತದೆ ಎಂಬ ನಂಬಿಕೆ ಇದೆ ಎಂದರು.

ಮೀನುಗಾರರಿಗೆ ಸಂಕಷ್ಟ ಪರಿಹಾರ ನಿಧಿಯಿಂದ ಪರಿಹಾರ ಹಣ ಬಿಡುಗಡೆ ಆಗಿಲ್ಲ ಎನ್ನುವ ದೂರಿನ ಹಿನ್ನೆಲೆಯಲ್ಲಿ ತಕ್ಷಣ ಸಂಕಷ್ಟ ಪರಿಹಾರ ನಿಧಿ ಬಿಡುಗಡೆ ಮಾಡುವ ಜೊತೆ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುತ್ತದೆ. ಮಷ್ಯ ಸಂಪತ್ತು ಉಳಿಸಕೊಳ್ಳುವ ಹಾಗೂ ಮೀನಿಗಾರರ ಹಿತ ಕಾಯುವಲ್ಲಿ ರಾಜ್ಯ ಸರ್ಕಾರ ಬದ್ದವಾಗಿದೆ ಎಂದು ಭರವಸೆ ನೀಡಿದರು.

ತಾಪಂ ಅಧ್ಯಕ್ಷ ಶ್ಯಾಮಲಾ ಕುಂದಾರ್, ತಾಪಂ ಉಪಾಧ್ಯಕ್ಷ ರಾಮ್‌ಕಿಶನ್ ಹೆಗ್ಡೆ, ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶೋಭಾ ಜಿ.ಪುತ್ರನ್, ಜಿಪಂ ಸದಸ್ಯರಾದ ಬಾಬು ಶೆಟ್ಟಿ ತಗ್ಗರ್ಸೆ, ಲಕ್ಷ್ಮೀ ಮಂಜು ಬಿಲ್ಲವ, ಶ್ರೀಲತಾ ಸುರೇಶ್ ಶೆಟ್ಟಿ, ಗೌರಿ ದೇವಾಡಿಗ, ಜಿಲ್ಲಾ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಗಣೇಶ್ ಕೆ,, ತಾಪಂ ಇ‌ಒ ಕೇಶವ ಶೆಟ್ಟಿಗಾರ್ ಇದ್ದರು.

ಮೀನುಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಪ.ಪಾರ್ಶ್ವನಾಥ್ ಸ್ವಾಗತಿಸಿದರು. ಕುಂದಾಪುರ ಮೀನಗಾರಿಕಾ ಸಹಾಯಕ ನಿರ್ದೇಶಕ ಗ್ರೇಡ್ ಚಂದ್ರಶೇಖರ್ ನಿರೂಪಿಸಿ ವಂದಿಸಿದರು. ಉದ್ಘಾಟನೆ ನಂತರ ಸಚಿವ ಶ್ರೀನಿವಾಸ ಪೂಜರಿ ಜೊತೆ ಸಂವಾದ, ಹಾಗೂ ಮಾಹಿತಿ ಶಿಬಿರ ನಡೆಯತು.

ರಾಜ್ಯಾದ್ಯಂತ ಮತ್ಸ್ಯ ದರ್ಶಿನಿ- ಮೀನೂಟಕ್ಕೆ 90 ರೂ.
ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಮೂಲಕ ಕೇವಲ ಹತ್ತು ರೂ. ಊಟ ಸಿಗುತ್ತಿದ್ದರೆ, ಇನ್ನು ಮುಂದೆ ರಾಜ್ಯದಲ್ಲಿ ಕೇವಲ 90 ರೂ.ಪುಷ್ಕಳ ಮೀನೂಟ ದೊರೆಯಲಿದೆ. ಮೀನುಗಾರಿಕಾ ಇಲಾಖೆ ಮೂಲಕ ಕರಾವಳಿ ಬಂಗ್ಡೆಯಿಂದ ಹಿಡಿದು ಥರಹೇವಾರಿ ಸಮುದ್ರ ಮೀನುಗಳ ರುಚಿ ರಾಜ್ಯದ ಜನತೆಗೆ ಉಣಿಸಲು ದರ್ಶನಿ ಊಟದ ಹೋಟೆಲ್ ತಲೆ ಎತ್ತಲಿದೆ. ಮೊದಲ ಹಂತದಲ್ಲಿ ಮೈಸೂರು ಮಹಾನಗರ ಸೇರಿದಂತೆ ರಾಜ್ಯದ ೧೧ ಕಡೆ ಮತ್ಸ್ಯ ದರ್ಶನಿ ಹೋಟೆಲ್ ಕರಾವಳಿ ಮೀನೂಟದ ರುಚಿಯ ಉಣ ಬಡಿಸಲಿದೆ. ಈಗಾಗಲೇ ತಮಕೂರಲ್ಲಿ ದರ್ಶನ ಹೋಟೆಲ್ ಸಮುದ್ರ ಮೀನೂಟದ ರುಚಿ ಬಡಿಸುತ್ತಿದ್ದು, ಸ್ವತಹಾ ಬಂದರ ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಊಟ ಮಾಡುವ ಮೂಲಕ ಮೆಚ್ಚಿಗೆ ವ್ಯಕ್ತ ಪಡಿಸಿದ್ದಾರೆ. ದರ್ಶನಿ ಹೋಟೆಲ್ ನೀಡುವ ಮೀನುಟಕ್ಕೆ ಬೇರೆ ಹೋಟೆಲ್‌ನಲ್ಲಿ ನಾಲ್ಕಂಖೆ ವ್ಯಯವಾಗದಲಿದ್ದು, ದರ್ಶನ ಹೋಟೆಲ್ ಕೇವಲ 90 ರೂ.ಗೆ ಊಟ ನೀಡಲಿದೆ ಎಂಬ ಮಾಹಿತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೀಡಿದ್ದು, ರಾಜ್ಯಾದ್ಯಂತ ದರ್ಶನಿ ಹೋಟೆಲ್ ವಿಸ್ತರಿಸುವ ಯೋಜನೆ ಕೂಡಾ ಇದೆ ಎಂದು ಅವರು ಹೇಳಿದ್ದಾರೆ.

ಗಂಗೊಳ್ಳಿ ಜಟ್ಟಿ ಕುಸಿತ ತನಿಖೆಗೆ ಸೂಚನೆ..
ಹೆಜಮಾಡಿ ಬಂದರು ಅಭಿವೃದ್ಧಿ ಮೊದಲ ಆಧ್ಯತೆ ಆಗಿದ್ದು, ಅದಕ್ಕಾಗಿ 35 ಎಕ್ರೆ ಸರ್ಕಾರಿ ಜಾಗ ಮಂಜೂರಾಗಿದ್ದು, ಸರ್ಕಾರಿ ಜಾನಗವಲ್ಲದೆ ಮತ್ತೆ 12 ಎಕ್ರೆ ಜಾಗದ ಅವಶ್ಯವಿದ್ದು, ಖಾಸಗಿ ಜಾಗದ ವಿಕ್ರಯಿಸಿ, ಸುಸಜ್ಜಿತ ಹೆಜಮಾಡಿ ಬಂದರು ನಿರ್ಮಾಣ ಗುರಿ ಮೀನುಗಾರಿಕಾ ಮತ್ತು ಬಂದರು ಇಲಾಖೆಯದ್ದಾಗಿದೆ. ಭೂಮಿ ಹಸ್ತಾಂತರ ಪ್ರಕ್ರಿಯೆ ಮುಗಿದ ನಂತರ ಪ್ರಧಾನಿ ನರೇಂದ್ರ ಮೋದಿ ಮೂಲಕ ಭೂಮಿ ಪೂಜೆ ಮಾಡಿಸುವ ಹುದ್ದೇಶದಿಂದ ಪ್ರಧಾನಿ ಕರೆತರುವ ಪ್ರಯತ್ನ ಮೂಡಾ ನಡೆಯುತ್ತಿದೆ. ಭೂಮಿ ಹಸ್ತಾಂತರದ ನಂತರ ಭೂಮಿ ಪೂಜೆ ಮುಗಿಸಿ ಹಲವು ವರ್ಷದ ಹೆಜಮಾಡಿ ಬಂದರು ಕೆಲಸ ಆರಂಭಿಸಲಾಗುತ್ತದೆ. ಈಗಾಗಲೇ ಹೆಜಮಾಡಿಯಿಂದ ಗಂಗೊಳ್ಳಿ ತನಕ ಮೀನುಗಾರಿಕೆ ಹಿನ್ನೆಲೆಯಲ್ಲಿ ಬಂದರು, ಜಟ್ಟಿಗಳ ವೀಕ್ಷಣೆ ಮಾಡಿದ್ದು, ಬಂದರು ಅಭಿವೃದ್ಧಿ ಜಟ್ಟಿಗಳ ನಿರ್ಮಾಣದ ಜರೂರತ್ತು ಮನದಟ್ಟಾಗಿದೆ. ಹೊಸತಾಗಿ ಜಟ್ಟಿಗಳ ನಿರ್ಮಾಣ ಬಂದರು ಅಭಿವೃದ್ಧಿ ಮಾಡಲಾಗುತ್ತದೆ. ಗಂಗೊಳ್ಳಿ ಜಟ್ಟಿ ಕುಸಿತ ವೀಕ್ಷಿಸಿದ್ದು, ತನಿಖೆಗೆ ಆದೇಶ ನೀಡಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೂಗೊಳ್ಳುವ ಜೊತೆ, ಹಿಸದಾಗಿ ಜಟ್ಟಿ ನಿರ್ಮಣಕ್ಕೆ ೮ ರಿಂದ ೧ ಕೋಟಿ ಬೇಕಿದ್ದು, ಅನುಧಾನದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಚಿವ ಶ್ರೀನಿವಾಸ ಪೂಜಾರಿ ಹೇಳಿದರು.

320ಕೀಮಿ ಕಡಲ ತೀರದ ವಿಸ್ತೀರ್ಣ ಹೊಂದಿದ್ದು, ಮೀನುಗಾರರ ಅನುಕೂಲಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಡುವ ಉದ್ದೇಶ ಇಲಾಖೆಗೆ ಇದೆ. ಮೀನುಗಾರರ ಸಮಸ್ಯೆ ಪರಿಹಾರಕ್ಕೆ ಕಾರ್ಮಿಕ ಇಲಾಖೆಯಲ್ಲಿರುವ ೮ ಸಾವಿರ ಕೋಟಿ ಬಳಸಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ಕಿರು ಬಂದರುಗಳ ಅಭಿವೃದ್ಧಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ದೊಡ್ಡ ಬಂದರು ಅಭಿವೃದ್ದಿ ಮಾಡುವ ಉದ್ದೇಶ ಇದೆ. ಸಲೀಸಾಗಿ ಮೀನುಗಾರಿಕೆ ನಡೆಸಲು ಜಟ್ಟಿಗಳ ನಿರ್ಮಾಣ, ಹೋಳೆತ್ತುವುದು, ಮರು ಪೂರಣ ಹೋಳೆತ್ತುವ ಕೆಲಸ ಮಾಡಲಾಗುತ್ತದೆ. ಮೀನೇ ಇಲ್ಲದಿದ್ದರೆ ಮೀನುಗಾರಿಕೆ ಇಲ್ಲಾ ಎನ್ನೋದನ್ನು ಗಮನದಲ್ಲಿಟ್ಟು ಕೊಂಡು ಮೀನು ಸಂತತಿ ಉಳಿಸಿಕೊಳ್ಳುವ ಜೊತೆ ಸಮುದ್ರ, ನದಿ ನೀರಿಗೆ ತ್ಯಾಜ್ಯ ಪ್ಲಾಸ್ಟಿಕ್ ಬಿಸಾಕುವ ಮೂಲಕ ಮಲೀನ ಮಾಡುತ್ತಿರುವ ಬಗ್ಗೆ ಡಿಸಿ, ಎಸ್ಪಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುತ್ತದೆ. ಮೀನುಗಾರರ ಸಾಲಾ ಮನ್ನಾಕ್ಕೆ ಸರ್ಕಾರ ಬದ್ದವಾಗಿದ್ದು, ಮನ್ನಾ ಆದ ಸಾಲಾಗಾರರ ಎಕೌಂಟಿಗೆ ಹಣ ಜಮೆ ಆಗಲಿದ್ದು, ಸರ್ಕಾರವೇ ಸಾಲಾ ಮನ್ನಾ ಮಾಡಿದ್ದರಿಂದ ಸಾಲಗಾರರಿಗೆ ಹಣ ತುಂಬುವಂತೆ ಬಾಂಕ್ ಒತ್ತಡ ಹಾಕಬಾರದು. ಮೀನುಗಾರಿಕಾ ಅಭಿವೃದ್ಧಿಗೆ ಪೂರಕವಾಗಿ ರಾಜ್ಯದಲ್ಲಿ ಸಮುದ್ರ ಮೀನುಗಾರಿಕಾ ನೀತಿ ರೂಪಿಸಲಾಗುತ್ತದೆ.
– ಕೋಟ ಶ್ರೀನಿವಾಸ ಪೂಜಾರಿ, ಬಂದರು ಮತ್ತು ಮೀನುಗಾರಿಕಾ ಸಚಿವ

Comments are closed.