ಕರಾವಳಿ

ಪೌರತ್ವ ಕಾಯಿದೆ ವಿರೋಧಿಸಿ ಕುಂದಾಪುರದಲ್ಲಿ ಬ್ರಹತ್ ಪ್ರತಿಭಟನೆ

Pinterest LinkedIn Tumblr

ಕುಂದಾಪುರ: ಪೌರತ್ವ ಕಾಯಿದೆ ಜಾರಿಗೆ ತರುವ ನಿಟ್ಟಿನಲ್ಲಿ ಜನರ ತಪ್ಪುದಾರಿಗೆ ಎಳೆಯಲಾಗುತ್ತಿದೆ. ಸಿ‌ಎ‌ಎ ಜನರ ಮೇಲೆ ಹೇರುವ ಮೂಲಕ ದೇಶವನ್ನು ತುಂಡುತುಂಡಾಗಿ ವಿಭಾಜಿಸಲಾಗುತ್ತದೆ. ಮುಸ್ಲೀಮರಿಗೆ ಪೌರತ್ವ ನಿರಾಕರಣೆ ಮಾಡಿ ಮುಸ್ಲೀಮೇತರಿಗೆ ಪೌರತ್ವ ನೀಡುವ ಮೂಲಕ ದೇಶದ ಸೌಹಾರ್ದತೆಗೆ ಧಕ್ಕೆ ತರಲಾಗುತ್ತಿದೆ. ಸಿ‌ಎ‌ಎ, ಎನ್‌ಆರ್‌ಸಿ ಜಾರಿಗೆ ತರುವ ಮೂಲಕ ಮುಸ್ಲೀಮರಿಗೆ ಅನ್ಯಾಯ ಆಗುತ್ತದೆ ಎಂದು ಅಂಕಣಕಾರ ಶಿವಸುಂದರ್ ಆರೋಪಿಸಿದ್ದಾರೆ.

ಸಿ‌ಎ‌ಎ ಮತ್ತು ಎನ್‌ಆರ್‌ಸಿ ವಿರೋಧ ಹೋರಾಟ ಸಮಿತಿ ಆಶ್ರಯದಲ್ಲಿ ಕುಂದಾಪುರ ತಾಲೂಕು ಪಂಚಾಯಿತಿ ಕಚೇರಿ ಎದುರು ಸೋಮವಾರ ಸಂಜೆ ನಡೆದ ಪೌರತ್ವ ಕಾಯಿದೆ ವಿರೋಧಿ ಸಭೆಯಲ್ಲಿ ಮಾತನಾಡಿ, ಧಾರ್ಮಿಕ ಧಮನಕ್ಕೆ ಒಳಗಾಗಿ ದೇಶಕ್ಕೆ ಬರುವ ಎಲ್ಲಾ ಧರ್ಮದವರಿಗೂ ಭಾರತೀಯ ಪೌರತ್ವ ನೀಡಬೇಕು ಎಂದು ಒತ್ತಾಯಿಸಿದರು.

ಪೌರತ್ವ ಕಾಯಿದೆ ಕೇವಲ ಮುಸ್ಲೀಮರಿಗೆ ಮಾತ್ರ ಸಮಸ್ಯೆ ಆಗಿರದೆ, ಎಲ್ಲಾ ವರ್ಗದ ಜನರಿಗೂ ಕಬ್ಬಿಣದ ಕಡಲೆಯಾಗಿತ್ತದೆ. ಪಾಕಿಸ್ತಾನ, ಬಾಂಗ್ಲಾ, ಅಪಘಾನಿಸ್ತಾನದಿಂದ ಧಾರ್ಮಿಕ ಧಮನತೆ, ಶೋಷಣೆಗೆ ಒಳಗಾಗಿ ಬರುವ ಮುಸ್ಲೀಮರಿಗೆ ಪೌರತ್ವ ನಿರಾಕರಣ ಸಾಧುವಲ್ಲ. ಭಾರತ ಜ್ಯಾತ್ಯಾತೀತ ದೋರಣೆಗೆ ಇದು ವಿರೊಧವಾಗಿದೆ. ಪೌರತ್ವ ಕಾಯಿದೆ ವಿರುದ್ಧ ನಡೆಯುತ್ತಿರುವ ಹೋರಾಟ ಇದಕ್ಕೆ ಸಾಕ್ಷಿ ಎಂದರು.

ಪೌರತ್ವ ಕಾಯಿದೆ ಜಾರಿಗೆ ತರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸುಳ್ಳು ಹೇಳುವ ಮೂಲಕ ಜನರ ದಿಕ್ಕುತಪ್ಪಿಸುತ್ತಿದ್ದಾರೆ ಎಂದ ಅವರು, ವಾಜಪೇಯಿ ಕಾಲದಲ್ಲೇ ಎನ್‌ಆರ್‌ಸಿ ಕಾಯಿದೆ ತರುವ ಬಗ್ಗೆ ವಿಲ್ ಆಗಿದ್ದು, ಅದನ್ನು ವಿರೋಧ ಪಕ್ಷದವರು ವಿರೋಧಿಸಿದೆ ಇದ್ದಿರುವ ಪರಿಣಾಮ ಇಂದು ನಾವು ಪೌರತ್ವ ಕಾಯಿದೆ ಹೇರುವ ಮೂಲಕ ಅನುಭವಿಸುವಂತೆ ಆಗಿದೆ ಎಂದು ಹೇಳಿದರು.

ಬೇರೆ ಬೇರೆ ಕಡೆಯಿಂದ ಬರುವ ಭೌದ್ಧ, ಫಾರ್ಶಿ, ಕ್ರಿಶ್ಚನ್ ಜನಾಂಗದವರಿಗೆ ಪೌರತ್ವ ನೀಡಲಾಗುತ್ತಿದ್ದರೂ ಮುಸ್ಲೀಮರಿಗೆ ಬಾಗಿಲು ಮುಚ್ಚಿರುವುದು ಸರಿಯಲ್ಲ ಎಂದ ಅವರು, ಶ್ರೀಲಿಂಕಾದಿಂದ ಬಂದ ಲಕ್ಷಾಂತರ ತಮಿಳರಿಗೆ ಪೌರತ್ವ ನೀಡಲಾಗಿದೆ. ಹಾಗೇ ಬೇರೆ ಬೇರೆ ಕಡೆಯಿಂದ ಬಂದ ಬೇರೆ ಬೇರೆ ವರ್ಗದವರಿಗೆ ಪೌರತ್ವ ನೀಡಿದ್ದು, ಪಾಕಿಸ್ತಾನ, ಬಾಂಗ್ಲಾದಿಂದ ಧಾರ್ಮಿಕ ಧೌಜನ್ಯದಿಂದ ಬರುವ ಮುಸ್ಲೀಮ್ ಧರ್ಮದವರಿಗೂ ಪೌರತ್ವ ನೀಡಬೇಕು ಎಂದು ಒತ್ತಾಯಿಸಿದರು.

ಸಿ‌ಎ‌ಎ ಮತ್ತು ಎನ್‌ಆರ್‌ಸಿ ಹೋರಾಟ ಸಮಿತಿ ಅಧ್ಯಕ್ಷ ಶಶಿಧರ ಹೆಮ್ಮಾಡಿ ಅಧ್ಯಕ್ಷತೆ ವಹಿಸಿದ್ದರು. ಹೋರಾಟಗಾರ ಸುಧೀರ್ ಕುಮಾರ್ ಮುರೋಳಿ, ಸಾಮಾಜಿಕ ಹೋರಾಟಗಾರ ಮಹೇಂದ್ರ ಕುಮಾರ್, ಎಸ್‌ವೈ‌ಎಸ್ ಪ್ರಧಾನ ಕಾರ್‍ಯದರ್ಶಿ ಡಾ.ಎಂ.ಎಮ್‌ಎಸ್ಸೆ‌ಎಂ ಅಬ್ದುಲ್ ರಶೀದ್ ಸಖಾಫಿ, ಝೈನೀ ಕಾಮಿಲ್, ಪಿ‌ಎಫ್‌ಐ ರಾಜ್ಯ ಸಮಿತಿ ಸದಸ್ಯ ಎ.ಕೆ.ಅಶ್ರಫ್, ಡಿವೈ‌ಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಕ್ಯಾಥೋಲಿಕ್ ಸಭಾ ವಲಯಾಧ್ಯಕ್ಷ ಎರಿಕ್ ಗೊನ್ಸಾಲ್ವಿಸ್, ದಲಿತ ಮುಖಂಡ ಸುಂದರ ಮಾಸ್ತರ್, ಹೋರಾಟ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್‍ಯದರ್ಶಿ ಅಸಿಮ್ ಕುಂದಾಪುರ ಮುಂತಾದವರು ಇದ್ದರು.

Comments are closed.