ಮಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಹಾಗೂ ಕಾವೂರು ಸರಕಾರಿ ಪ್ರಥಮ ದರ್ಜೆ ಕಾಲೇಜು, ಮಂಗಳೂರು ಜಂಟಿ ಸಹಯೋಗದಲ್ಲಿ ಜಾಣ ಜಾಣೆಯರ ಬಳಗದ ವತಿಯಿಂದ ನನ್ನ ಮೆಚ್ಚಿದ ಪುಸ್ತಕ ವಿದ್ಯಾರ್ಥಿಗಳ ಅಭಿಪ್ರಾಯ ಮಂಡನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಹಾಗೂ ತೀರ್ಪುಗಾರರಾಗಿ ಪ್ರೊ. ಎಂ.ಡಿ ಮಂಚಿ, ಪ್ರೊ. ರೇಕಾ ಭಾಗವಹಿಸಿದ್ದರು. ಜಾಣ ಜಾಣೆಯರಬಳಗದ ಸಂಚಾಲಕರಾದ ಪ್ರೊ. ಮೋಹನಾ ಪ್ರಾಸ್ತಾವಿಕ ಭಾಷಣ ಮಾಡಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲರು ಡಾ. ಯು. ತಾರಾ ರಾವ್ ವಹಿಸಿದ್ದರು.
ಜಾಣ ಜಾಣೆಯರ ಬಳಗ 2019-20 ಪದಾಧಿಕಾರಿಗಳು, ಸದಸ್ಯರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Comments are closed.