ಕರಾವಳಿ

ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಮೋಹನ್ ಆಳ್ವಾರಿಗೆ ಬಸ್ರೂರು ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ

Pinterest LinkedIn Tumblr

ಕುಂದಾಪುರ: ಜೀವನ ಸಂಕೀರ್ಣ, ಬದುಕು ಸಂಕೋಲೆ..ಬದುಕಲ್ಲಿ ಸರಳೆತೆಯ ಸಂಕೀರ್ಣ ಇರಬೇಕು. ಮನುಷ್ಯರ ಹುಟ್ಟಿಗೆ ಯಾರೋ ಕಾರಣರಾಗುತ್ತಾರೆ.. ಆದರೆ ನಮ್ಮ ಬದಕು ನಾವೇ ಮಾದರಿಯಾಗಿ ರೂಪಿಸಿಕೊಳ್ಳಬೇಕು. ಮನುಷ್ಯ ವಿಶ್ವ ಮಾನವನಾಗಿ ಹುಟ್ಟಿ ಬೆಳಿತಾ ಬೆಳಿತಾ ಸಂಕುಚಿತರಾಗಿ ಅಲ್ಪ ಮಾನವರಾಗಿ ಬದಲಾಗುತ್ತಾರೆ.. ವಿಶ್ವ ಮಾನವ ಕನಸುಕಂಡು ಅದನ್ನು ಉಳಿಸಿ ಬೆಳೆಸಿಕೊಂಡು ವಿಶ್ವ ಮಾನವ ಅರ್ಥಕ್ಕೆ ಹೊಸ ಭಾಹ್ಯ ಬರೆದ ಬಸ್ರೂರು ಅಪ್ಪಣ್ಣ ಹೆಗ್ಡೆ ಆಗೋದಕ್ಕೆ ಸಾಧ್ಯವಿಲ್ಲ..  ..ಹೀಗೆ ಬಣ್ಣಿಸಿದವರು ಹೊರನಾಡು ಶ್ರೀ ಅನ್ನಪೂರ್ಣೇಶ್ವರ ದೇವಸ್ಥಾನ ಧರ್ಮಕರ್ತೃ ಡಾ.ಜಿ. ಭೀಮೇಶ್ವರ ಜೋಶಿ

ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ಆಶ್ರಯದಲ್ಲಿ ಇಲ್ಲಿನ ಶ್ರೀ ಶಾರದಾ ಕಾಲೇಜ್ ಆವಣದಲ್ಲಿ ಮಂಗಳವಾರ ನಡೆದ ದತ್ತಿನಿಧಿ ವಿತರಣೆ, ಬಸ್ರೂರು ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ ಪ್ರದಾನ ಹಾಗೂ ಅಪ್ಪಣ್ಣ ಹೆಗ್ಡೆ ಹುಟ್ಟುಹಬ್ಬದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದರು.

ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಪ್ಪಣ್ಣ ಹೆಗ್ಡೆ ಜನ್ಮದಿನದ ನಿಮಿತ್ತ ಆರ್ಥಿಕ ಸಹಕಾರ, ಅನಾರೋಗ್ಯ ಪೀಡಿತರಿಗೆ ಸಹಾಯ ಧನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ನಿಜಕ್ಕೂ ಅರ್ಥಪೂರ್ಣ. ಸಮಾಜಕ್ಕೆ ಸಂದೇಶ ನೀಡುವ ಹುಟ್ಟುಹಬ್ಬ ಅರ್ಥ ಪೂರ್ಣ ಎಂದು ಬಣ್ಣಿಸಿದ ಅವರು, ರಾಗ ದ್ವೇಷ ಅಸೂಯೆ ಮುಕ್ತ ಇನ್ನೊಬ್ಬರ ಸಾಧನೆಯ ಪ್ರಶಂಸಿವ ಮೂಲಕ ಅಪ್ಪಣ್ಣ ಹೆಗ್ಡೆ ಜನರ ವಿಸ್ವಾಸ ಗಳಿಸಿದ್ದಾರೆ ಎಂದು ಹೇಳಿ, ಅಪ್ಪಣ್ಣ ಹೆಗ್ಡೆ ದಂಪತಿಗೆ ಹೊರನಾಡು ಪ್ರಸಾದ ನೀಡಿ ಆಶೀರ್ವಚಿಸಿದರು.

ಜೀವನ ಎನ್ನೋದು ಏರಿಳಿತದ ಹಾದಿಯಾಗಿದ್ದು, ಏರಿಳಿತ ಸಮಾನವಾಗಿ ಸ್ವೀಕರಿಸಿ ಬದುಕುವುದೇ ಜೀವನ. ಏರಿಳಿತ ನಿಂತರ ಬದುಕು ನಿಲ್ಲುತ್ತದೆ ಎಂದು ಅವರು, ಅಪ್ಪಣ್ಣ ಹೆಗ್ಡೆ ನಡೆದು ಬಂದ ದಾರಿಯ ಉಳಿಸಕೊಳ್ಳಬೇಕಿದೆ. ಎಲ್ಲರೂ ವಿಶ್ವ ಮಾನವರಾಗಿ ಬದುಕುವ ಹಾದಿಯಲ್ಲಿ ಸಾಗಬೇಕು ಎಂದು ತಿಳಿಸಿದರು.

ಮಾಜಿ ಮುಜರಾಯಿ ಸಚಿವ ಕೆ.ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿ, ಬಸ್ರೂರು ಅಪ್ಪಣ್ಣ ಹೆಗ್ಡೆ ಜೀವನ ದರ್ಶನ ಪುಸ್ತಕ ಬಿಡುಗಡೆ ಮಾಡಿದರು. ಬಿ.ಅಪ್ಪಣ್ಣ ಹೆಗ್ಡೆ, ಜಯಶ್ರೀ ಅಮರನಾಥ ಶೆಟ್ಟಿ, ಅಪ್ಪಣ್ಣ ಹೆಗ್ಡೆ ಪತ್ನಿ ನಾಗರತ್ನಾ ಎ.ಹೆಗ್ಡೆ, ಅಪ್ಪಣ್ಣ ಹೆಗ್ಡೆ ಅಳಿಯ ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯಾ ಉಪಸ್ಥಿತರಿದ್ದರು.

ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಮೋಹನ್ ಆಳ್ವಾ ಅವರಿಗೆ ಭೀಮೇಶ್ವರ ಜೋಶಿ ಬಸ್ರೂರು ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಅಪ್ಪಣ್ಣ ಹೆಗ್ಡೆ ಮೊಮ್ಮಕ್ಕಳಾದ ಅಶ್ವಿನಿ ಎಸ್ ಶೆಟ್ಟಿ, ಶಿವಾನಿ ಎಸ್. ಶೆಟ್ಟಿ, ಶ್ರಾವ್ಯ, ಶ್ರೀಶಾ, ಶ್ಲೋಕ, ವೈಷ್ಣವಿ ೮೫ ನೇ ಹುಟ್ಟು ಹಬ್ಬವನ್ನು ೮೫ ಗುಲಾಬಿ ಹೂಗಳ ಮಾಲೆ ಅರ್ಪಿಸಿದರು.
೩ನೇ ಹಣಕಾಸು ಆಯೋಗದ ಅಧ್ಯಕ್ಷ ಎ.ಜಿ.ಕೊಡ್ಗಿ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ ಎಂ. ಶೆಟ್ಟಿ, ಶ್ರೀ ಕ್ಷೇತ್ರ ಕೊಲ್ಲೂರಿನ ಹಿರಿಯ ಅರ್ಚಕ ಡಾ.ಎನ್.ನರಸಿಂಹ ಅಡಿಗ, ಮಾಜಿ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಹಿರಿಯಣ್ಣ ಹಾಗೂ ಕಂಚಿ ಕಾಮಕೋಟಿ ಶಂಕರಾಚಾರ್ಯ ಮಠ ಪರವಾಗಿ ಅಪ್ಪಣ್ಣ ಹೆಗ್ಡೆ ಅವರ ಅಭಿನಂದಿಸಲಾಯಿತು.

ಬಾಂಡ್ಯಾ ಎಜುಕೇಶನ್ ಟ್ರಸ್ಟ್ ಗುರುಕುಲ ಪಬ್ಲಿಕ್ ಸ್ಕೂಲ್ ಜಂಟಿ ಕಾರ್ಯನಿರ್ವಾಹಕ ನಿರ್ದೇಶಕಿ ಅನುಪಮಾ ಎಸ್.ಶೆಟ್ಟಿ ಸ್ವಾಗತಿಸಿದರು. ಕಂದಪ್ರಭ ಟಸ್ಟ್ ಅಧ್ಯಕ್ಷ ಯು.ಎಸ್.ಶೆಣೈ ಪ್ರಾಸ್ತಾವಿಕ ಮಾತನಾಡಿದರು. ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ಅಧ್ಯಕ್ಷ ರಾಮ್‌ಕಿಶನ್ ಹೆಗ್ಡೆ ವರದಿ ಮಂಡಿಸಿದರು. ನಿವೃತ್ತ ಪ್ರೊ.ಕೋ.ಶಿ.ಕಾರಂತ್ ಸನ್ಮಾನ ಪತ್ರ ವಾಚಿಸಿದರು. ಆರ್.ಜೆ.ನಯನ ನಿರೂಪಿಸಿದರು. ಶಿಕ್ಷಕ ದಿನಕರ ಶೆಟ್ಟಿ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆ ಸಂದೇಶ ವಾಚಿಸಿದರು. ನಿವೃತ್ತ ಪ್ರಾಂಶುಪಾಲ ರಾಧಾಕೃಷ್ಣ ಶೆಟ್ಟಿ ವಂದಿಸಿದರು. ಆಳ್ವಾಸ್ ವಿದ್ಯಾರ್ಥಿಗಳಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್‍ಯಕ್ರಮ ನಡೆಯಿತು.

ಪ್ರಶಸ್ತಿ ಬೇರೆಯವರಿಗೆ ನೀಡುವುದು ಸಂತೋಷದ ಕೆಲಸ ಆದರೆ ಪ್ರಶಸ್ತಿಗಳನ್ನು ಸ್ವೀಕರಿಸುವುದು ತುಂಬಾ ಕಷ್ಟದ ಕೆಲಸ. ಐಶ್ವರ್ಯ ಹಾಗೂ ಹೆಸರಿನ ಉದ್ದೇಶಗಳನ್ನು ಇಟ್ಟುಕೊಂಡು ಕೆಲಸ ಮಾಡಬಾರದು, ನಿಸ್ವಾರ್ಥ ಭಾವದಿಂದ ಕೆಲಸವನ್ನು ಮಾಡುವುದರಿಂದ ಐಶ್ವರ್ಯ ಹಾಗೂ ಹೆಸರು ಹುಡುಕಿಕೊಂಡು ಬರುತ್ತದೆ. ನಮ್ಮ ಹಿರಿಯರು ಸಮಾಜದ ಬೆಳವಣಿಗೆಯ ಉದ್ದೇಶದಿಂದ ಶಿಕ್ಷಣ ಸಂಸ್ಥೆ ಸ್ಥಾಪಿಸುತ್ತಿದ್ದರೇ, ಇಂದು ಇನ್ನಾವುದೋ ಉದ್ದೇಶಕ್ಕಾಗಿ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗುತ್ತಿದೆ. ವಿದ್ಯೆ ವ್ಯಾಪಾರೀಕರಣವಾಗುತ್ತಿದೆ. ಕೇರಳ, ಮಹಾರಾಷ್ಟ್ರ ಮುಂತಾದ ಹೊರ ರಾಜ್ಯಗಳಿಂದಲೂ ಬಂಡವಾಳಶಾಹಿಗಳು ನಮ್ಮ ರಾಜ್ಯದಲ್ಲಿ ದೊಡ್ಡ ಮೊತ್ತದ ವಿನಿಯೋಗವನ್ನು ಮಾಡುತ್ತಿದ್ದಾರೆ.
– ಡಾ.ಮೋಹನ ಆಳ್ವ, ಅಧ್ಯಕ್ಷ, ಮೂಡಬಿದಿರೆ ಆಳ್ವಾಸ್ ಪ್ರತಿಷ್ಠಾನ

Comments are closed.