ಕುಂದಾಪುರ: ಮದುವೆಯಾಗುವುದಾಗಿ ನಂಬಿಸಿ ಕುಟುಂಬಿಕರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ವಂಚಿಸಿದ ಆರೋಪದ ಮೇಲೆ ಯುವಕನೂ ಸೇರಿದಂತೆ ಐವರ ವಿರುದ್ದ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ ನಿವಾಸಿ ಶಂಕರ ಎಂಬವರು ಹಿರಿಯರ ಸಮ್ಮುಖದಲ್ಲಿ ತಮ್ಮ ಮಗಳಿಗೆ ಬೆಂಗಳೂರು ಮೂಲದ ಶರತ್ ಭಟ್ ಎಂಬಾತನೊಂದಿಗೆ ಮದುವೆ ಮಾತುಕತೆ ನಡೆಸಿದ್ದರು. ಇದೀಗ ಮದುವೆಯಾಗದೆ ವಂಚಿಸಿದ ಆರೋಪದ ಮೇಲೆ ಹವನೂರು ಬಡಾವಣೆಯ ಮಹಾಲಸಾ ಕೃಪಾ ನಿವಾಸಿಗಳಾದ ಶರತ್ ಭಟ್, ನಾಗರಾಜ್ ಭಟ್, ಜ್ಯೋತಿ ಭಟ್, ಭರತ್ ಭಟ್, ಮೇಘನಾ ಯಾನೆ ದೀಪಾ ಭಟ್ ವಿರುದ್ದ ಸೆಕ್ಷನ್ ೪೧೭, ೪೨೦ ಜೊತೆಗೆ ೩೪ ಐಪಿಸಿಯಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡೂ ಕುಟುಂಬದವರ ಒಪ್ಪಿಗೆಯಂತೆ ಏಳು ತಿಂಗಳ ಹಿಂದೆ ಬೆಂಗಳೂರಿನ ವರನ ಮನೆ ಸಮೀಪದ ಬಸವನಗುಡಿಯಲ್ಲಿರುವ ದ್ವಾರಕನಾಥ ಭವನದ ನಂದಗೋಕುಲ ಹಾಲ್‌ನಲ್ಲಿ ನಿಶ್ಚಿತಾರ್ಥ ಕಾರ್ಯ ನಡೆದಿತ್ತು. ಅಂದೇ ಮದುವೆಯ ದಿನಾಂಕವನ್ನೂ ನಿಗಧಿಪಡಿಸಿದ್ದು, ಡಿಸೆಂಬರ್ ೧ರಂದು ಕುಂದಾಪುರದಲ್ಲಿ ವಿವಾಹ ನಡೆಸುವುದಾಗಿ ಎರಡೂ ಮನೆಯವರ ನಡುವೆ ಮಾತುಕತೆಯೂ ಕುದುರಿತ್ತು. ಅಂತೆಯೇ ಹುಡುಗಿಯ ಮನೆಯವರು ಮದುವೆ ತಯಾರಿ ನಡೆಸಿದ್ದು ಆಮಂತ್ರಣ ಪತ್ರಿಕೆಯನ್ನೂ ಹಂಚಿದ್ದರು. ಆದರೆ ಮದುವೆಯ ದಿನ ಮದುವೆ ಹಾಲ್‌ಗೆ ಬಾರದೆ ಮದುವೆಯಾಗದೆ ವಂಚಿಸಿದ ಆರೋಪದ ಮೇಲೆ ಯುವತಿಯ ತಂದೆ ಕುಂದಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.
Comments are closed.