ಕರಾವಳಿ

ಫಾ. ಮಹೇಶ್ ಆತ್ಮಹತ್ಯೆ ಪ್ರಕರಣದಲ್ಲಿ ಡೇವಿಡ್ ಡಿಸೋಜಾ ವಿರುದ್ದ ಅವಹೇಳನ: ಇಬ್ಬರ ವಿರುದ್ದ ದೂರು

Pinterest LinkedIn Tumblr

ಉಡುಪಿ: ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾ. ಮಹೇಶ್‌ ಡಿಸೋಜಾ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಡೇವಿಡ್ ಡಿಸೋಜಾ ಅವರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಹರಡಿದ ಹಿನ್ನಲೆಯಲ್ಲಿ ಕುತ್ಯಾರ್ ನಿವಾಸಿ ಜೋಯಲ್ ಮಥಯಾಸ್ ಮತ್ತು ಪಿಲಾರ್ ನಿವಾಸಿ ಫ್ಲೇವಿಯಾ ಮಥಯಾಸ್ ಅವರ ಮೇಲೆ ಎಫ್‌ಐಆರ್‌ ದಾಖಲು ಮಾಡುವಂತೆ ಉಡುಪಿಯ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಪೊಲೀಸರಿಗೆ ಆದೇಶ ನೀಡಿದೆ.

ಶಿರ್ವ ಡಾನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಂ|ಮಹೇಶ್ ಡಿಸೋಜಾ ಅವರ ಸಾವಿನ ಕುರಿತು ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ ಡೇವಿಡ್ ಡಿಸೋಜಾ ಮತ್ತು ಅವರ ಮಗ ಡಾಯ್ಸನ್ ಡಿಸೋಜಾ ವಿರುದ್ದ ಜೊಯೇಲ್ ಮಥಾಯಸ್ ಮತ್ತು ಫ್ಲೇವಿಯಾ ಮಥಾಯಸ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿದ್ದಾರೆ. ಅಲ್ಲದೆ ಅವರ ವಿರುದ್ದ ಸುಳ್ಳು ಮಾಹಿತಿಗಳನ್ನು ಹರಿಯಬಿಟ್ಟಿದ್ದು ಇದರಿಂದ ತನ್ನ ಹಾಗೂ ಮಗನ ವ್ಯಕ್ತಿತ್ವಕ್ಕೆ ಧಕ್ಕೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ನ್ಯಾಯಾಲಯ ನಿವಾಸಿ ಜೊಯೇಲ್ ಮಥಾಯಸ್ ಮತ್ತು ಪಿಲಾರ್ ನಿವಾಸಿ ಫ್ಲೇವಿಯಾ ಮಥಾಯಾಸ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂಥೆ ಶಿರ್ವ ಪೊಲೀಸರಿಗೆ ಆದೇಶಿಸಿದ್ದಾರೆ.

Comments are closed.