ಕುಂದಾಪುರ: ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಇದರ 43ನೇ ವಾರದ ಸ್ವಚ್ಚತಾ ಅಭಿಯಾನಕ್ಕೆ ಕುಂದಾಪುರ ವಲಯ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಗವಹಿಸಿ ಪರಿಸರ ಕಾಳಜಿ ಮೆರೆದರು. ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್ ನೇತೃತ್ವದಲ್ಲಿ ಕುಂದಾಪುರ, ಹಾಲಾಡಿ, ನೇರಳಕಟ್ಟೆ, ಜಡ್ಕಲ್, ಆಲೂರು ಭಾಗದ ಸುಮಾರು 25ಕ್ಕೂ ಅಧಿಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ಸಮವಸ್ತ್ರ ಧರಿಸಿಯೇ ಕೋಡಿ ಸೀ ವಾಕ್ ಪ್ರದೇಶದಲ್ಲಿ ಫ್ಲಾಸ್ಟಿಕ್ ತ್ಯಾಜ್ಯ ಎತ್ತಿ ಸ್ವಚ್ಚತಾ ಕಾರ್ಯ ನಡೆಸಿದರು. ಇವರಿಗೆ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಸದಸ್ಯರು ಸಾತ್ ನೀಡಿದ್ರು.

ಈ ಸಂದರ್ಭ ಮಾತನಾಡಿದ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಫ್ಲಾಸ್ಟಿಕ್ ತ್ಯಾಜ್ಯಗಳು ಸಮೌದ್ರ ಸೇರುವುದರಿಂದ ಕಡಲಾಮೆ ಸಹಿತ ವಿವಿಧ ಜಲಚರಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಪ್ಲಾಸ್ಟಿಕ್ ಬಳಕೆ ಕಮ್ಮಿ ಮಾಡಬೇಕಿದೆ ಎಂದರು.
ಈ ಸಂದರ್ಭ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ರುವಾರಿಗಳಾದ ಭರತ್ ಬಂಗೇರ, ಡಾ. ರಶ್ಮೀ, ಅರುಣ್, ಶಶಿಧರ್, ಶ್ರದ್ಧಾ, ಶ್ರೇಯಾ, ರಕ್ಷಾ, ಅನಿಕೇತ, ಅಕ್ಷಯ, ದಿನೇಶ್, ಅಗ್ನಿಹೋತ್ರಿ, ಮಾಲತಿ ಬಂಗೇರ, ಆಶಾ ಶೆಟ್ಟಿ, ಶಂಕುತಲಾ, ಆದಿಥ್ಯನಾಥ್ ಸಮಾಜ ಸೇವಕ ಗಣೇಶ್ ಪುತ್ರನ್ ಮೊದಲಾದವರಿದ್ದರು
Comments are closed.