ಕರಾವಳಿ

ವಕೀಲ ವೃತ್ತಿ ಜಗತ್ತಿನ ಶ್ರೇಷ್ಟ ವೃತ್ತಿ: ಜೆಸಿಐ ಕುಂದಾಪುರ ಸಿಟಿಯ ಸನ್ಮಾನ ಸ್ವೀಕರಿಸಿ ರವಿಕಿರಣ್ ಮುರ್ಡೇಶ್ವರ್‌ ಅಭಿಮತ

Pinterest LinkedIn Tumblr

ಕುಂದಾಪುರ: ವಕೀಲರ ದಿನಾಚರಣೆಯಂದು‌ ಜೆಸಿಐ ಕುಂದಾಪುರ ಸಿಟಿ‌ ವತಿಯಿಂದ ಕುಂದಾಪುರದ ಖ್ಯಾತ ನ್ಯಾಯವಾದಿ‌ ರವಿಕಿರಣ್ ಮುರ್ಡೇಶ್ವರ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಅವರು,‌ ಕಾನೂನು ಯಾ ನ್ಯಾಯ ಶಾಸ್ತ್ರದ ಪದವಿ ವಕೀಲರ ಪರಿಷತ್ತಿನ ನೋಂದಾವಣೆಯೊಂದಿಗೆ ಜಗತ್ತಿನ ಎಲ್ಲಾ ಆಗು ಹೋಗು ವ್ಯವಹಾರದ ಕುರಿತು ಗಟ್ಟಿಯಾದ ಸಾಮಾನ್ಯ ಜ್ಞಾನವನ್ನು ಹೊಂದಿ ನಿರಂತರ ವಿದ್ಯಾರ್ಥಿಗಳಂತೆ ಕಲಿಕೆ ಮಾಡುತ್ತಿರಬೇಕು. ಅಧ್ಯಯನ ಮಾಡುತ್ತ ನ್ಯಾಯಾಲಯದ ಅಧಿಕಾರಿಗಳೆಂದು ಗುರುತಿಸಿಕೊಂಡು ನ್ಯಾಯದಾನದ ವ್ಯಾಪ್ತಿಯೊಳಗೆ ಬರುವ ಯಾವದೇ ವ್ಯಕ್ತಿಯ ಪರವಾಗಿ ನ್ಯಾಯಾಲಯದೊಳಗೆ ಯಾ ಹೊರಗೆ ನ್ಯಾಯಸಮ್ಮತ ಕಾನೂನು ಯಾ ನ್ಯಾಯಶಾಸ್ತ್ರದ ಮಾರ್ಗದರ್ಶನ ನೀಡುವ ತನ್ನ ಕಕ್ಷಿದಾರರಿಗೆ ರಕ್ಷೆ, ಪ್ರತಿರಕ್ಷೆ ಕೊಡಿಸುವ ಜಗತ್ತಿನ ಸಾರ್ವಕಾಲಿಕ ಶ್ರೇಷ್ಟ‌ ಹಾಗೂ ಜವಾಬ್ದಾರಿಯುತ ವೃತ್ತಿ ಎಂದು ಕರೆಸಿಕೊಂಡಿರುದು ವಕೀಲ ವೃತ್ತಿ ಸೇವೆ ಎಂದು ಅಭಿಪ್ರಾಯಪಟ್ಟರು.

ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ನಾಗೇಶ್ ನಾವಡ, ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಹವಾಲ್ದಾರ್, ಪೂರ್ವ ಅಧ್ಯಕ್ಷರಾದ ರಾಘವೇಂದ್ರ ಚರಣ್ ನಾವಡ, ನಾಗೇಂದ್ರ ಪೈ, ಚಂದ್ರಕಾಂತ್, ಜಯಚಂದ್ರ ಶೆಟ್ಟಿ, ಮಂಜುನಾಥ್ ಕಾಮತ್, ಸದ್ಯಸ್ಯರಾದ ವಿಜಯ್ ಭಂಡಾರಿ, ಮಹೇಶ್ ಶೇಟ್, ಗುರುರಾಜ್ ಕೊತ್ವಾಲ್, ವಿಠಲ್ ಹೆಬ್ಬಾರ್, ಉಮೇಶ್ ಪೈ, ರಾಘವೇಂದ್ರ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಅಭಿಲಾಷ್ ವಂದಿಸಿದರು.

Comments are closed.