ಕರಾವಳಿ

ಟೆಂಡರ್ ಬಾಕಿಯಿರುವ ಬ್ಲಾಕ್’ಗಳಲ್ಲಿ ಮರಳು ತೆಗೆಯಲು ಶಾಸಕ ಹಾಲಾಡಿ ಒತ್ತಾಯ

Pinterest LinkedIn Tumblr

ಕುಂದಾಪುರ: ಮರಳು ದಿಬ್ಬ ತೆರವು ಮಾಡಲು ಹೊಸ ಮರಳು ನೀತಿಗೆ ಕಾಯಿದೆ ವಾರಾಹಿ ನದಿಯಲ್ಲಿ ಬಾಕಿಯಾದ ಮರಳು ದಿಬ್ಬ ನಿರ್ಧಿಷ್ಟ ಕಾಲಾವಕಾಶದಲ್ಲಿ ತೆರವು ಮಾಡಿ. ಜಿಲ್ಲೆಯಲ್ಲಿ ಮರಳು ಗಣಿಗೆ ಬಳ್ಳಾರಿ ಗಣಿಗಿಂತ ಭೀಕರವಾಗಿದೆ ಎಂಬ ಆರೋಪದಿಂದ ಜಿಲ್ಲೆ ಮುಕ್ತವಾಗಬೇಕು. ಹೊಸ ಮರಳು ನೀತಿಗೆ ಜೋತುಬಿದ್ದರೆ, ಮತ್ತೆ ಮಳೆಗಾಲ ಆರಂಭವಾಗುತ್ತದೆ. ಬಡವರಿಗೆ ಮರಳು ಅವಶ್ಯವಿದ್ದು, ಮರಳು ಎಲ್ಲರಿಗೂ ಸುಲಭ ಬೆಲೆಯಲ್ಲಿ ಸುಗಬೇಕು…ಹೀಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದವರು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ.

ಕುಂದಾಪುರ ತಾಲೂಕು ಪಂಚಾಯಿತಿ ಅಧ್ಯಕ್ಷರ ಕಚೇರಿಯಲ್ಲಿ ಬುಧವಾರ ನಡೆದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಮರಳು ವಿತರಣೆ ಸಮರ್ಪಕವಾಗಿ ನಡೆಯಬೇಕು. ವಾರಾಹಿ ಹಾಲಾಡಿ ನದಿಯಲ್ಲಿ ಮರಳು ದಿಬ್ಬಗುರುತಿಸಿದ್ದು, ಟೆಂಡರ್ ಬಾಕಿ ಇದ್ದ ದಿಬ್ಬತೆರವು ಟೆಂಡರ್ ನಿರ್ಧಿಷ್ಠ ಸಮಯದಲ್ಲಿ ತೆರೆವು ಮಾಡಲು ಟೆಂಡರ್ ಕರೆಯುವಂತೆ ಸೂಚಿಸಿದರು.

ಉತ್ತರಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಹಾಯಕ ನಿರ್ದೇಶಕ ರಾಮ್‌ಜಿ ನಾಯ್ಕ್ ಮಾತನಾಡಿ, ವಾರಾಹಿ ಹಾಗೂ ಹಾಲಾಡಿ ನದಿಯಲ್ಲಿ ಮರಳು ತೆಗೆಯುವ 9 ದಿಬ್ಬ ಗುರುತಿಸಿದ್ದು, ಜಿಲ್ಲಾಧಿಕಾರಿ ಜೊತೆ ಮಾತನಾಡಿ ಟೆಂಡರ್ ಪ್ರಕ್ರಿಯೆಗೆ ಚಾಲನ ನೀಡಲಾಗುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಮರಳು ವಿತರಣೆ ಹಾಗೂ ಯುನಿಟ್ಟಿಗೆ ಬೆಲೆ ಫಿಕ್ಸ್ ಮಾಡಿದ್ದು, ಮರಳು ವಾಹನಕ್ಕೆ ಲೋಡ್ ಮಾಡುವುದು ಯಾರೂ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಮರಳು ಲೋಡ್ ಲಾರಿಯವರೇ ಮಾಡಿಕೊಳ್ಳಬೇಕಾ? ಮರಳು ಗುತ್ತ್ತಿಗೆ ಪಡೆದವರೇ ಲೋಡ್ ಮಾಡಬೇಕು. ಲಾರಿಗೆ ಲೋಡ್ ಮಾಡಿದರೆ ಅದಕ್ಕೆ ಎಷ್ಟು ಹಣ ಎನ್ನುವ ಗೊಂದಲವಿದ್ದು, ಮುಂದೆ ಟೆಂಡರ್ ಪ್ರಕ್ರಿಯೆಯಲ್ಲಿ ಮರಳು ಲೋಡ್ ಮಾಡುವುದ ಸೇರಿಸಿ ಟೆಂಡರ್ ಕರೆಯುವಂತೆ ಹಾಲಾಡಿ ಸಲಹೆ ಮಾಡಿದ್ದು, ಗಣಿಗಾರಿಕೆ ಅಧಿಕಾರಿಗಳು ಶಾಸಕರ ಸಲಹೆಗೆ ಸಮ್ಮಿತಿ ಸೂಚಿಸಿದರು.

ಮರಳು ವಿತರಣೆ ಕೇಂದ್ರದಲ್ಲಿ ಸರತಿ ಸಾಲು ಹೆಚ್ಚಿದ್ದು, ಮರಳು ಸಾಗಾಟ ಲಾಡಿಗಳು ಮರಳಿಗಾಗಿ ಎರಡು ಮೂರು ದಿನ ಕಾಯಬೇಕಾಗುತ್ತದೆ. ಮರಳು ಸರಾಗ ಎಲ್ಲರಿಗೂ ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದು ಹಾಲಾಡಿ ಒತ್ತಾಯಿಸಿದರು.
ಕುಂದಾಪುರ ತಾಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್, ಉಪಾದ್ಯಕ್ಷ ರಾಮ್‌ಕಿಶನ್ ಹೆಗ್ಡೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಹಾಯಕ ನಿರ್ದೇಶಕ ರಾಮ್‌ಜಿ ನಾಯ್ಕ್, ಹಿರಿಯ ಭೂ ವಿಜ್ಞಾನಿ ಮಹೇಶ್ ಮುಂತಾದವರು ಇದ್ದರು.

Comments are closed.