ಕರಾವಳಿ

ಗಾನ ನಿಲ್ಲಿಸಿದ ಕುಂದಾಪುರದ ರಾಕ್ ಸ್ಟಾರ್ ವೈಕುಂಟ

Pinterest LinkedIn Tumblr

ಕುಂದಾಪುರ: ಕುಂದಾಪುರದ ರಾಕ್ ಸ್ಟಾರ್ ಎಂದೇ ಖ್ಯಾತಿ ಹೊಂದಿ ಜನರನ್ನು ತನ್ನದೇ ಶೈಲಿಯ ಹಾಡುಗಳಿಂದ ಮನರಂಜಿಸುತ್ತಿದ್ಧ ವೈಕುಂಟ ಯಾನೆ ರಾಕ್ ಸ್ಟಾರ್ ವೈಕುಂಟ ಇಹಲೋಕ ತ್ಯಜಿಸಿದ್ದಾರೆ.

ಬಹು ಅಂಗಾಗ ವೈಪಲ್ಯದಿಂದ ಬಳಲುತ್ತಿದ್ದ ವೈಕುಂಟ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾರೆ.

ಸಿನೆಮಾ, ಜಾನಪದ ಗೀತೆಗಳು ಸೇರಿದಂತೆ ವೈಕುಂಟ ಹಾಡುವ ಹಾಡುಗಳಿಗೆ ತುಂಬಾ ಬೇಡಿಕೆಯಿತ್ತು. ಹಾಡುವ ಹಾಡಿನ ನಡುವೆ ಕೈಗೆ ಸಿಕ್ಕ ವಸ್ತುಗಳನ್ನು ಕೈಯಲ್ಲಿ ಬಡಿಯುತ್ತಾ ವಿಭಿನ್ನ ರೀತಿಯ ಮ್ಯುಸಿಕ್ ನುಡಿಸುತ್ತಿದ್ದ ಇದು ಜನರ ಆಕರ್ಷಣೆಗೂ ಕಾರಣವಾಗಿತ್ತು. ಕಳೆದ ಕೆಲವು ವರ್ಷಗಳೀಂದೀಚೆಗೆ ಕುಂದಾಪುರದ ಕೆಲವು ಟ್ರೋಲ್ ಪೇಜಿನಲ್ಲಿ ವೈಕುಂಟ ಬಯಸದೇ ಒಬ್ಬ ಸೆಲಬ್ರೆಟಿ ಆಗಿದ್ದ. ಕೆಲವು ಅತೀಮುಖ್ಯ ಕಾರ್ಯಕ್ರಮಗಳ ವೇಳೆ ವೈಕುಂಟನನ್ನು ಬಳಸಿಕೊಂಡು ಕಾರ್ಯಕ್ರಮ ಆಹ್ವಾನದ ವಿಡಿಯೋ ಮಾಡಿಯೂ ಕೆಲವರು ಗ್ರೂಫ್ ಗಳಿಗೆ ಹರಿಯಬಿಡುತ್ತಿದ್ದು ಉಂಟು. ಇನ್ನು ಕೆಲ ಡಬ್ ಸ್ಮಾಶ್ ವಿಡಿಯೋ, ಕ್ರಿಕೇಟ್ ಕಾಮೆಂಟಿರಿಯಲ್ಲಿಯೂ ವೈಕುಂಟನನ್ನು ಬಳಸಿಕೊಳ್ಳಲಾಗಿತ್ತು.

ವೈಕುಂಟನಿಗೆ ಆಗಿದ್ದೇನು?
ಕುಂದಾಪುರ ಶಾಸ್ತ್ರೀ ವೃತ್ತ, ಗಾಂಧೀಮೈದಾನ ಆಸುಪಾಸಿನಲ್ಲಿ ಕಾಣಸಿಗುತ್ತಿದ್ದ ವೈಕುಂಟನ್ನು ಕೆಲವು ಮಂದಿ ತಮ್ಮ ಸಮಯ ಕಳೆಯಲು ಉಪಯೋಗಿಸಿಕೊಂಡಿದ್ದೇ ಜಾಸ್ತಿ. ಮದ್ಯಪಾನದ ಚಟ ಹೊಂದಿದ್ದ ಆತನಿಗೆ ಮದ್ಯ ಕುಡಿಯಲು ಹಣ ನೀಡಿ ವಿಡಿಯೋ ಮಾಡಿಸಿಕೊಳ್ಳುವ ಬಹುತೇಕರು ಇದ್ದರು.

ಹೀಗೆ ಯಾರೊಬ್ಬರಿಗೂ ಕೇಡು ಬಯಸದೇ ಮನೋರಂಜಿಸುತ್ತಿದ್ದ ವೈಕುಂಟ ಕಳೆದ ಕೆಲವು ಸಮಯಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ. ವಾರಗಳ ಹಿಂದೆ ಕುಂದಾಪುರ ಬಳಿ ಅನ್ನ-ನೀರು ಇಲ್ಲದೆ ಬಿದ್ದಿದ್ದ ಆತನ ಬಗ್ಗೆ ಪ್ರಸಾದ್ ಬೈಂದೂರು ಎನ್ನುವರು ಸಾಮಾಜಿಕ ತಾಣದಲ್ಲಿ ಬರೆದಿದ್ದು ಇದು ವೈರಲ್ ಆಗಿತ್ತು. ಮಾರನೇ ದಿನ ರಂಜಿತ್ ಹೆಂಗವಳ್ಳಿ ಮತ್ತವರ ತಂಡ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಅಷ್ಟರಲ್ಲಾಗಲೇ ವೈಕುಂಟ ಸ್ಥಿತಿ ಗಂಭೀರಗೊಂಡಿದ್ದು ಆತನ ದೇಹ ಸ್ಥಿತಿ ಚಿಕಿತ್ಸೆಗೆ ಸರಿಯಾಗಿ ಸ್ಪಂದನೆ ನೀಡಿರಲಿಲ್ಲ ಎಂದು ವೈದ್ಯ ಮೂಲಗಳು ತಿಳಿಸಿದೆ.

ಒಟ್ಟಿನಲ್ಲಿ ತನ್ನ ಜೀವನದ ಕೊನೆಯವರೆಗೂ ಇನ್ನೊಬ್ಬರನ್ನು ಮನೋರಂಜಿಸಿಯೇ ಇದೀಗಾ ಬಾರದ ಲೋಕಕ್ಕೆ ಪಯಣಿಸಿದ್ದು ಕುಂದಾಪುರ ಜನರ ಪಾಲಿಗೆ ನೆನಪು ಮಾತ್ರ.

(ವರದಿ- ಯೋಗೀಶ್ ಕುಂಭಾಸಿ)

Comments are closed.