ಕರಾವಳಿ

ಹೆದ್ದಾರಿ ಮದ್ಯೆ ನಿಂತ ಕಾರು; ಹಿಂಬದಿಯಿಂದ ಡಿಕ್ಕಿಯಾದ ಟಿಪ್ಪರ್: ಚಾಲಕರು ಪಾರು

Pinterest LinkedIn Tumblr

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಟಿಪ್ಪರ್ ಒಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ನುಜ್ಜುಗುಜ್ಜಾದ ಘಟನೆ ಕೋಟೇಶ್ವರ ಸಮೀಪದ ಕೆ.ಕೆ. ಮಾರ್ಬಲ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.

ಕುಂಭಾಸಿ ಕಡೆಯಿಂದ ಬರುತ್ತಿದ್ದ ಕಾರು ಹೆದ್ದಾರಿ ಮಧ್ಯದಲ್ಲಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆಗೆ ಅಡ್ಡವಾಗಿ ನಿಂತಿದ್ದು ಇದೇ ಸಂದರ್ಭ ಹಿಂಬದಿಯಿಂದ ಬಂದ ಟಿಪ್ಪರ್ ಕಾರಿಗೆ ಡಿಕ್ಕಿ ಹೊಡೆದಿದೆ. ಎನ್ನಲಾಗಿದೆ. ಅದ್ರಷ್ಟವಶಾತ್ ಅವಘಡದಲ್ಲಿ ಚಾಲಕರು ಪಾರಾಗಿದ್ದಾರೆ.

ಅಪಘಾತದಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

Comments are closed.