ಕರಾವಳಿ

ದೇರಬೈಲ್ 24 ವಾರ್ಡಿನ ಅಭ್ಯರ್ಥಿ ಎಂ.ಶಶಿಧರ ಹೆಗ್ಡೆಯವರಿಗೆ ಸತತ ಐದನೇ ಭಾರಿ ಗೆಲುವು

Pinterest LinkedIn Tumblr

ಮಂಗಳೂರು, ನವೆಂಬರ್.14 : ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್‌ಗಳಿಗೆ ನವೆಂಬರ್ 12ರಂದು ನಡೆದ ಚುನಾಚಣೆಯ ಸುಮಾರು 55 ವಾರ್ಡ್‌ಗಳ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಪಕ್ಷದ ಘಟಾನುಗಟಿ ಅಭ್ಯರ್ಥಿಗಳ ಸೋಲಿನ ನಡುವೆ ಮಂಗಳೂರು ಮಹಾನಗರ ಪಾಲಿಕೆಯ ದೇರಬೈಲ್ 24 ವಾರ್ಡಿನ ಅಭ್ಯರ್ಥಿ ಎಂ. ಶಶಿಧರ ಹೆಗ್ಡೆ ಯವರು ಗೆಲುವು ಸಾಧಿಸಿದ್ದಾರೆ. ತನ್ನ ಪ್ರತಿಸ್ಪರ್ದಿ ಬಿ.ಜೆಪಿಯ ಚರಿತ್ ಕುಮಾರ್ ಅವರು ಅಲ್ಪ ಮತದಿಂದ ಅಂತರದಿಂದ ಪರಾಭವಗೊಂಡಿದ್ದಾರೆ.

ಎಂ ಶಶಿಧರ ಹೆಗ್ಡೆ ಯವರು 2235 ಮತಗಳನ್ನು ಪಡೆದು ಗೆಲುವು ಪಡೆದರೆ, ಅವರ ಪ್ರತಿಸ್ಪರ್ದಿ ಬಿ.ಜೆಪಿಯ ಚರಿತ್ ಕುಮಾರ್ 1908 ಪಡೆದು ಪರಭವಗೊಂಡಿದ್ದಾರೆ.

ಕಾಂಗ್ರೆಸ್ ಪಕ್ಷದ ಸರಳ ಸಜ್ಜನಿಕೆಯ ಜನಸ್ನೇಹಿ ರಾಜಕಾರಣಿಯಾದ ಎಂ. ಶಶಿಧರ ಹೆಗ್ಡೆಯವರು ಅಭಿವೃದ್ಧಿಪರ ಚಟುವಟಿಕೆಗಳಿಂದ ಮಂಗಳೂರಿನಲ್ಲಿ ಹೆಸರುಗಳಿಸಿದವರು. ತನ್ನ ವಿಧ್ಯಾರ್ಥಿ ಜೀವನದಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಗಳಿಂದ ಆಕರ್ಷಿತ ಗೊಂಡು ಆಲ್ ಕಾಲೇಜ್ ಸ್ಟೂಡೆಂಟ್ ಯೂನಿಯನ್ ನಲ್ಲಿ ವಿಧ್ಯಾರ್ಥಿ ನಾಯಕನಾಗಿ ಬೆಳೆದು ಯುವ ಕಾಂಗ್ರೆಸ್ ನ ನಾಯಕನಾಗಿ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ರಾಗಿ ಮಂಗಳೂರಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ ಇವರು ಲೇಡಿಹಿಲ್ ಕೊಡಿಯಾಲ್ ಬೈಲ್ ರಸ್ತೆ ಅಭಿವೃದ್ಧಿ ಯ ರುವಾರಿ ಕೂಡ ಆಗಿದ್ದರೆ.

ಮಹಾನಗರ ಪಾಲಿಕೆಯ ಆಡಳಿತ ದಲ್ಲಿ ಹೆಚ್ಚು ಅನುಭವ ಹೊಂದಿರುವ ಮಂಗಳೂರು ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿರುವ ಎಂ ಶಶಿಧರ ಹೆಗ್ಡೆಯವರ ಗೆಲುವು ನಿರೀಕ್ಷಿತವಾಗಿತ್ತು.

ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಯಲ್ಲಿ ಇವರು ಸತತವಾಗಿ 5 ನೇ ಭಾರಿಗೆ ಗೆಲುವು ಸಾಧಿಸಿದ್ದಾರೆ. ಪ್ರಾರಂಭದ 2 ಅವಧಿ ಯ 10 ವರ್ಷಗಳಲ್ಲಿ ದೇರಬೈಲ್ 24 ವಾರ್ಡನ್ನು ಪ್ರತಿನಿಧಿಸಿದ್ದ ಶಶಿಧರ ಹೆಗ್ಡೆಯವರು ಮೀಸಲಾತಿ ಯ ಕಾರಣದಿಂದ ಬೇರೆ ಕ್ಷೇತ್ರವನ್ನು ಆರಿಸಿಕೊಳ್ಳಬೇಕಾಯಿತು, ಪುನಃ 5 ನೇ ಬಾರಿಗೆ ತಾನು ಈ ಹಿಂದೆ ಪ್ರತಿನಿಧಿಸಿದ್ದ ವಾರ್ಡಿನಲ್ಲಿ ಮತ್ತೊಮ್ಮೆ ಗೆಲುವಿನ ನಗ ಬೀರಿದ್ದಾರೆ.

Comments are closed.