ಕರಾವಳಿ

ವೆಬ್‌ಸೈಟ್ ಹೆಸರಲ್ಲಿ ಉಡುಪಿ ಮೂಲದ ಯುವತಿಗೆ ಹಣ ವಂಚನೆ

Pinterest LinkedIn Tumblr

ಉಡುಪಿ: ಉದ್ಯೋಗ ಕೊಡಿಸುವ ವೆಬ್‌ಸೈಟ್ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬ ಉಡುಪಿ ಮೂಲದ ಯುವತಿಗೆ ಹಣ ವಂಚಿಸಿದ ಘಟನೆ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಅಂಬಲಪಾಡಿ ನಿವಾಸಿ ಯುವತಿಯೊಬ್ಬರು ಉದ್ಯೋಗಕ್ಕಾಗಿ ಶೈನ್.ಕಾಮ್ ಹೆಸರಿನ ವೆಬ್‌ಸೈಟ್ ನಲ್ಲಿ ಅರ್ಜಿ ನೀಡಿದ್ದರು. ಇತ್ತೀಚೆಗೆ ಅವರ ಮೊಬೈಲಿಗೆ ವ್ಯಕ್ತಿಯೊಬ್ಬ ಕರೆ ಮಾಡಿ ತಾನು ಶೈನ್‌.ಕಾಮ್ ಕಂಪೆನಿಯವನೆಂದು ನಂಬಿಸಿ, ಇವರ ಮೊಬೈಲ್ ನಂಬ್ರಕ್ಕೆ ಲಿಂಕ್ ಕಳುಹಿಸಿ, ಅಪ್‌‌ಡೇಟ್ ಮಾಡುವುದಾಗಿ ತಿಳಿಸಿದ್ದು ಅದರಂತೆಯೇ ಯುವತಿಯು ಆ ಲಿಂಕ್ ಓಪನ್ ಮಾಡಿದ ಕೂಡಲೇ ಆರೋಪಿ ಮೋಸದಿಂದ ಯುವತಿಯ ಇಂಡಸ್ ಬ್ಯಾಂಕ್ ಅಂದೇರಿ ಈಸ್ಟ್ ಬ್ರಾಂಚ್ ಇಲ್ಲಿನ ಖಾತೆಯಿಂದ ಒಟ್ಟು ರೂಪಾಯಿ 33 ಸಾವಿರದ 897 ಹಣವನ್ನು ಮೋಸದಿಂದ ವಿದ್ ಡ್ರಾ ಮಾದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 128/2019 ಕಲಂ:66(c), 66(d) IT Act ಮತ್ತು ಕಲಂ: 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

Comments are closed.