ಕರಾವಳಿ

ಕೊಲ್ಲೂರು ಬಳಿ ಕಂಟೈನರ್‌ನಲ್ಲಿ ಸಾಗಾಟ ಮಾಡುತ್ತಿದ್ದ 21 ಜಾನುವಾರು ರಕ್ಷಣೆ

Pinterest LinkedIn Tumblr

ಕುಂದಾಪುರ: ಕೊಲ್ಲೂರು ಸಮೀಪ ಜಡ್ಕಲ್ ನಾಯಿಕೊಡಿ ಚೆಕ್ ಪೋಸ್ಟ್‌ನಲ್ಲಿ ಬುಧವಾರ ಬೆಳಗಿನ ಜಾವ ಅಕ್ರಮವಾಗಿ ಕಂಟೈನರ್‌ನಲ್ಲಿ ಸಾಗಿಸುತ್ತಿದ್ದ ೨೧ ಕೋಟ ಹಾಗೂ ಎಮ್ಮೆಗಳ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಯಾವುದೇ ಪರವಾನಿಗೆ ಇಲ್ಲದೆ ಹಿಂಸಾತ್ಮಕವಾಗಿ ಜಾನುವಾರ ಸಾಗಾಟ ಮಾಡುತಿದ್ದ ವಾಹನ ಚಾಲಕ ದಾವಣಗೆರೆ ನಿಟವಳ್ಳಿ ನಗರ ತಲವಾರುಹಟ್ಟಿ ನಿವಾಸಿ ಇಮ್ರಾನ್ ಬಾಷಾ (27), ಹಳೇ ಹುಬ್ಬಳ್ಳಿ ನಿವಾಸಿ ತಬ್ರೇಜ್ ಬೇಫಾರಿ (22) ಎಂಬವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸ್ ಸಹಕಾರದಲ್ಲಿ ಬಂಧಿಸಿದ್ದಾರೆ.

ಈ ಇಬ್ಬರು ಆರೋಪಿಗಳು ಈಚರ್ ಕಂಟೈನರ್ ಲಾರಿಯಲ್ಲಿ ದಾವಣಗೆರೆಯಿಂದ ಮಂಜೇಶ್ವರ ಕಸಾಯಿಖಾನೆಗೆ ಜಾನುವಾರುಗಳ ಸಾಗಿಸುತ್ತಿದ್ದಾರೆಂದು ಹೇಳಲಾಗುತ್ತಿದ್ದು, ಉಪ ವಲಯ ಅರಣ್ಯಾಧಿಕಾರಿ ದಯಾನಂದ ಕೆ. ಹಾಗೂ ಅರಣ್ಯ ವೀಕ್ಷಕ ಜನಾರ್ಧನ ಪೂಜಾರಿ ಗಸ್ತಿನಲ್ಲಿದ್ದಾಗ ಚೆಕ್‌ಪೋಸ್ಟಿನಲ್ಲಿ ತಪಾಸಣೆ ವೇಳೆ ಕೊಲ್ಲೂರು ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಕಂಟೈನರ್ ವಾಹನ ತಡೆದು ಪರಿಶೀಲಿಸಿದ ವೇಳೆ ಸಾಗಾಟ ಘಟನೆ ಬೆಳಕಿಗೆ ಬಂದಿದೆ. 4.80 ಲಕ್ಷ ರೂ. ಮೌಲ್ಯದ 12 ಕೋಣ, ಹಾಗೂ 2.70 ಲಕ್ಷ ಮೌಲ್ಯದ 9 ಎಮ್ಮೆಗಳ ಸಾಗಾಟ ಮಾಡಲಾಗುತ್ತಿತ್ತು. ಕಾರ್ಯಾಚರಣೆ ಸಂದರ್ಭ ಕೊಲ್ಲೂರು ಹಾಗೂ ಜಡ್ಕಲ್ ಭಾಗದ ಹಿಂದೂಪರ ಸಂಘಟನೆ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಅಕ್ರಮ ಗೋ ಸಾಗಾಟದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.