ಕರಾವಳಿ

ಬೆಡ್‌ಶೀಟ್ ವ್ಯಾಪಾರಿಗಳ ಸೋಗಿನಲ್ಲಿ ಬಂದು ‘ಕಟೀಲು ದೇವಿ’ ಹೆಸರಲ್ಲಿ ಹಣ ವಂಚನೆ

Pinterest LinkedIn Tumblr

ಉಡುಪಿ: ಜಿಲ್ಲೆಯ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿಯಲ್ಲಿ ಬೆಡ್ ಶೀಟ್ ವ್ಯಾಪಾರಿಗಳ ಸೋಗಿನಲ್ಲಿ ಬಂದು ವಯೋವೃದ್ಧ ದಂಪತಿಗಳನ್ನು ವಂಚಿಸಿದ ಘಟನೆ ಅ.೧೭ರಂದು ನಡೆದಿದ್ದೂ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮಾಲಾಡಿ ನಿವಾಸಿ ನಿವೃತ್ತ ಶಿಕ್ಷಕ ಗುರುರಾಜ್ ಭಟ್(89) ಹಾಗೂ ಪತ್ನಿ ಶಾಂತಾ(3) ಇವರು ಅ.17ರಂದು ಮನೆಯಲ್ಲಿರುವಾಗ ಬೆಡ್‌ಶೀಟ್ ವ್ಯಾಪಾರ ಮಾಡುವ ನೆಪದಲ್ಲಿ 3 ಯುವಕರ ತಂಡ ಕಾರಿನಲ್ಲಿ ಬಂದು ಮನೆಯೊಳಗೆ ಪ್ರವೇಶಿಸಿದೆ. ಈ ಸಂದರ್ಭ ಮನೆಯ ಮಾಲಿಕರು ಯಾವುದೇ ವಸ್ತುಗಳು ನಮಗೆ ಬೇಡವೆಂದರೂ ಕೇಳದೆ ನಾವು ಕಟೀಲು ದೇವಳದ ದುರ್ಗಾಪರಮೇಶ್ವರಿ ನೇಕಾರರ ಸಂಘದಿಂದ ಬಂದಿದ್ದು, ಇದರಲ್ಲಿ ನೀವು ಖರೀದಿಸುವ ಈ ಬೆಡ್ ಶೀಟ್‌ನಿಂದ ದೇವಳಕ್ಕೂ ಹಾಗೂ ಸಂಘಟನೆಗೂ ಸಹಾಯ ಮಾಡಿದಂತಾಗುತ್ತದೆ ಎಂದು ನಂಬಿಸಿ, ಮಾಲಿಕರನ್ನು ಸಂಪೂರ್ಣ ವಿಶ್ವಾಸಕ್ಕೆ ತೆಗೆದುಕೊಂಡು 1 ಸಾವಿರ ವಸ್ತುಗಳ ಖರೀದಿಗೆ, ಯಾವ ರಶೀದಿ ನೀಡದೇ 14 ಸಾವಿರ ಹಣ ಪಡೆದು ವಂಚಿಸಿ ಪರಾರಿಯಾಗಿದ್ದಾರೆ.

ಈಗಾಗಲೇ ಈ ಗುಂಪು ಕೊಮೆ, ಕೊರವಡಿ ಪರಿಸರದಲ್ಲಿ ಇದೇ ರೀತಿ ಮಾಡಲು ಹೋಗಿದ್ದು ಈ ವಿಷಯವು ತೆಕ್ಕಟ್ಟೆ ಗ್ರಾಮಪಂಚಾಯತ್ ಗಮನಕ್ಕೆ ಬಂದಿದೆ. ಅಧ್ಯಕ್ಷ ಶೇಖರ ಕಾಂಚನ್ ಸ್ಥಳಕ್ಕೆ ಬೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದು ದೂರದ ಊರಿನಲ್ಲಿರುವ ಮಕ್ಕಳಿಂದ ಪೊಲೀಸ್ ಇಲಾಖೆಗೆ ವಿಷಯವನ್ನು ತಿಳಿಸಿದ್ದಾರೆ. ಸ್ಥಳಕ್ಕೆ ಕೋಟ ಪೊಲೀಸರು ಬೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.

Comments are closed.