ಕರಾವಳಿ

ಉತ್ತರ ಕನ್ನಡದಲ್ಲಿ ಭಾರೀ ಗಾಳಿ ಸಹಿತ ಮಳೆಗೆ ಕಾರವಾರ ಜಲಾವೃತ

Pinterest LinkedIn Tumblr


ಕಾರವಾರ: ಕ್ಯಾರ್ ಚಂಡಮಾರುತದ ಪರಿಣಾಮ ಕರಾವಳಿಯಲ್ಲಿ ಭಾರಿ ಗಾಳಿ ಮಳೆಯಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಗಾಳಿ ಸಹಿತ ಮಳೆ ಬೀಳುತ್ತಿದ್ದು ಕಾರವಾರ ನಗರ ಜಲಮಯವಾಗಿದೆ.

ಧಾರಕಾರ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿವೆ. ಅಲ್ಲಲ್ಲಿ ಮರಗಳು ಉರುಳಿವೆ. ಸತತ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಎಡೆಬಿಡದೆ ಮಳೆ ಸುರಿಯುತ್ತಿರುವ ಕಾರಣದಿಂದ ಜನ ಮನೆಯಿಂದ ಹೊರಗೆ ಬರುತ್ತಿಲ್ಲ.

ಹಳಗಾ ಗೋಪಿಶಿಟ್ಟಾ ಗ್ರಾಮಗಳಗೆ ನದಿಯ ನೀರು ರಸ್ತೆಗೆ ಬಂದಿದೆ. ನದಿಗಳು ತುಂಬಿ ಹರಿಯುತ್ತಿವೆ. ಕಡಲು ಅಬ್ಬರಿಸುತ್ತಿದೆ. ಹೀಗಾಗಿ ಕಡಲ ದಂಡೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

Comments are closed.