ಕರಾವಳಿ

ಅನಧಿಕೃತ ಮರಳು ದಾಸ್ತಾನು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆ!

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದ(ಸಿ.ಆರ್.ಝಡ್) ಹಾಗೂ ಕರಾವಳಿ ನಿಯಂತ್ರಣ ವಲಯ ಹೊರತು ಪಡಿಸಿದ (ನಾನ್ ಸಿ.ಆರ್.ಝಡ್) ನದಿ ಪಾತ್ರಗಳಲ್ಲಿ ಮರಳು ದಿಬ್ಬ ತೆರವುಗೊಳಿಸುವ ಪರವಾನಿಗೆ ನೀಡಲಾಗಿದ್ದು, ಅದರಂತೆ ಮರಳು ದಿಬ್ಬ ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದ್ದು ಜಿಲ್ಲಾಡಳಿತ ಎಚ್ಚರಿಕೆಯೊಂದನ್ನು ನೀಡಿದೆ.

(ಸಾಂದರ್ಭಿಕ ಚಿತ್ರ)

ಉಡುಪಿ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ಮಾಲೀಕರು, ಗುತ್ತಿಗೆದಾರರು ಹಾಗೂ ಮಂಜೂರಾದ ಕಟ್ಟಡದ ಕಾಮಗಾರಿಗಳ ಅವಶ್ಯಕತೆಗನುಗುಣವಾಗಿ ಮರಳನ್ನು ಸಾಗಾಟ ಪರವಾನಿಗೆಯೊಂದಿಗೆ ಉಪಯೋಗಿಸತಕ್ಕದ್ದು, ಇದನ್ನು ಹೊರತುಪಡಿಸಿ ಮರಳಿನ ದಾಸ್ತಾನು ಹಾಗೂ ಅನಧಿಕೃತ ಮರಳಿನ ದಾಸ್ತಾನು ಕಂಡುಬಂದಲ್ಲಿ ಆ ದಾಸ್ತಾನುಗಳ ಹಾಗೂ ಸಂಬಂಧಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಜಿಲ್ಲಾಡಳಿತವು ತೀರ್ಮಾನಿಸಿರುತ್ತದೆ.

ಆದ್ದರಿಂದ ಕಟ್ಟಡ ನಿರ್ಮಾಣ ಮಾಲೀಕರು, ಗುತ್ತಿಗೆದಾರರು ಹಾಗೂ ಸಾರ್ವಜನಿಕರು ಮರಳು ದಾಸ್ತಾನು ಹಾಗೂ ಅನಧಿಕೃತ ಮರಳು ದಾಸ್ತಾನು ಮಾಡುವುದು ಹಾಗೂ ಮಾಡಿರುವುದು ಕಂಡುಬಂದಲ್ಲಿ ನಿಯಾಮಾನುಸಾರ ನಿರ್ದಾಕ್ಷಿಣ್ಯವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಮಿತಿಯ ಹಿರಿಯ ಭೂ ವಿಜ್ಞಾನಿ ಹಾಗೂ ಸದಸ್ಯ ಕಾರ್ಯದರ್ಶಿ ಅವರ ಪ್ರಕಟಣೆ ತಿಳಿಸಿದೆ.

Comments are closed.