ಕರಾವಳಿ

ಹಲವು ವರ್ಷದ ಹೋರಾಟಕ್ಕೆ ಸಂದ ಜಯ- ಬೀಜಾಡಿಯ ಶಿಥೀಲ ಟ್ಯಾಂಕ್’ಗೆ ಸದ್ಯವೇ ಮುಕ್ತಿ!

Pinterest LinkedIn Tumblr

ಕುಂದಾಪುರ: ಬೀಜಾಡಿಯಲ್ಲಿರುವ ಶಿಥಿಲಗೊಂಡ ಓವರ್ ಹೆಡ್ ನೀರಿನ ಟ್ಯಾಂಕ್ ಡೆಮಾಲಿಶ್ ಮಾಡಿಕೊಡುವ ಬಗೆಗಿನ ಕಳೆದ ಐದು ವರ್ಷದ ದಲಿತ ಸಂಘರ್ಷ ಸಮಿತಿಯ ಹೋರಾಟಕ್ಕೆ ಕೊನೆಗೂ ಸ್ಪಂದನೆ ಸಿಕ್ಕಿದ್ದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು ಶಿಥೀಲ ನೀರಿನ ಟ್ಯಾಖ್ ತೆರವು ಮಾಡಲು ಆದೇಶ ನೀಡಿದ್ದಾರೆ.

ಗೋಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸನಿಹವಿರುವ ನೀರಿನ ಟ್ಯಾಂಕ್ ಬಳಿ ವಾಸಿಮಾಡುತ್ತಿರುವ ಕುಟುಂಬಗಳು ಕಳೆದ ಐದು ವರ್ಷದಿಂದ ನೆಮ್ಮದಿಯ ನಿದ್ದೆ ಮಾಡಿಲ್ಲ. ರಾತ್ರಿ ಮಲಗಿದರೂ ಎಲ್ಲಿ ನೀರಿನ ಟ್ಯಾಂಕ್ ಬೀಳುತ್ತದೋ ಎಂಬ ಭಯ. ಪ್ರತೀದಿನ ಮಾನಸಿಕ ನೆಮ್ಮದಿ ಕಳೆದುಕೊಂಡು ಅಂಗೈಯಲ್ಲಿ ಜೀವ ಹಿಡಿದು ದಿನ ಕಳೆಯುತ್ತಿದ್ದು ಈ ಬಗ್ಗೆ ‘ಕನ್ನಡಿಗ ವರ್ಲ್ಡ್’ ವಿಸ್ತ್ರತ ವರದಿ ಮಾಡಿತ್ತು.

ದಲಿತ ಮುಖಂಡ ರಾಜು ಬೆಟ್ಟಿನ ಮನೆ ನೇತ್ರತ್ವದಲ್ಲಿ ದಲಿತ ಸಂಘರ್ಷ ಸಮಿತಿ ನಡೆಸುತ್ತಾ ಬಂದ ಹೋರಾಟಕ್ಕೆ ಜಿಲ್ಲಾಡಳಿತ ಸ್ಪಂದನೆ ನೀಡಿದೆ. ಅಲ್ಲದೇ ಗೋಪಾಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಸರಸ್ವತಿ ಪುತ್ರನ್ ಕೂಡ ಶಿಥೀಲ ಟ್ಯಾಂಕ್ ತೆರವು ವಿಚಾರದಲ್ಲಿ ಶಾಸಕರು, ಸಚಿವರು ಹಾಗೂ ಜಿಲ್ಲಾಡಳಿತದ ಗಮನಸೆಳೆದಿದ್ದರು. ಸದ್ಯ ಪ್ರಕ್ರತಿ ವಿಕೋಪದಡಿಯಲ್ಲಿ ಒಂದೂವರೆ ಲಕ್ಷ ಬಿಡುಗಡೆಗೊಳಿಸಿದ್ದು ಗೋಪಾಡಿ ಗ್ರಾಮಪಂಚಾಯತ್ 50 ಸಾವಿರ ಅನುದಾನವನ್ನು ಭರಿಸಲಿದೆ.

ಇದನ್ನೂ ಓದಿ- ಬೀಜಾಡಿ ಬೈಪಾಸ್ ಬಳಿ ಗಾಳಿಗೆ ತೂಗಾಡುವ ಅಪಾಯಕಾರಿ ವಾಟರ್ ಟ್ಯಾಂಕ್..!

Comments are closed.