ಕರಾವಳಿ

ವರದಕ್ಷಿಣೆಗೆ ಬೇಡಿಕೆ: ಮೊದಲು ಗರ್ಭಪಾತ, ಈಗ 4 ತಿಂಗಳ ಗರ್ಭಿಣಿ ಮನೆಯಿಂದ ಹೊರಕ್ಕೆ!

Pinterest LinkedIn Tumblr

ಉಡುಪಿ: ಮೂರು ಲಕ್ಷ ವರದಕ್ಷಿಣೆ ಹಾಗೂ 20 ಪವನ್ ಚಿನ್ನ ನೀಡಿ ಮದುವೆ ಮಾಡಿಕೊಟ್ಟರೂ ಕೂಡ ಇನ್ನಷ್ಟು ವರದಕ್ಷಿಣೆ ನೀಡುವಂತೆ ಪತಿ ಹಾಗೂ ಆತನ ಮನೆಯವರು ಹಿಂಸೆ ನೀಡಿ 4 ತಿಂಗಳ ಗರ್ಭಿಣಿಯನ್ನು ಮನೆಯಿಂದ ಹೊರಹಾಕಿದ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ನೊಂದ ಪತ್ನಿ ಗಂಡನ ಸಮೇತ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕಾರ್ಕಳ ಮೂಲದ ಹಾಜಿರಾ ಬಾನು(30) ಎನ್ನುವರು ಈ ದೂರು ನೀಡಿದ್ದು ಆಕೆ ಗಂಡ ಉಡುಪಿ ನಿವಾಸಿ ಇಬ್ರಾಹಿಂ, ಫಾತಿಮಾ, ನಜೀರ್, ಮಹಮ್ಮದ್ ಇಕ್ಬಾಲ್, ಸಾಹಿಲ್ ಹಮೀದ್, ಇಸ್ಮಾಯಿಲ್ ಎನ್ನುವರ ವಿರುದ್ಧ ಪ್ರಕರಣ ದಾಖಲಾಗಿದೆ.

ಹಾಜಿರಾ ಬಾನು ಅವರು ಇಬ್ರಾಹಿಂನನ್ನು ಮುಸ್ಲಿಂ ಸಂಪ್ರಾದಾಯದಂತೆ ಉದ್ಯಾವರದ ಆಡಿಟೋರಿಯಂ ಒಂದರಲ್ಲಿ ವಿವಾಹವಾಗಿದ್ದು, ವಿವಾಹ ಸಂದರ್ಭದಲ್ಲಿ ಹುಡುಗನ ಕಡೆಯವರ ಬೇಡಿಕೆಯಂತೆ 3 ಲಕ್ಷ ರೂಪಾಯಿ ವರದಕ್ಷಿಣೆ ಹಾಗೂ 20 ಪವನ್ ಚಿನ್ನ ಹಾಕಿ ವಿವಾಹ ನೆರೆವೇರಿಸಿದ್ದರು.

ಮದುವೆ ಬಳಿಕ ಮಹಿಳೆಯು ತನ್ನ ಗಂಡನ ಮನೆಯಾದ ಸಂತೋಷನಗರದ ಕರಂಬಳ್ಳಿಯಲ್ಲಿ ವಾಸವಾಗಿದ್ದು ಆಕೆ ಗಂಡ ಇಬ್ರಾಹಿಂ ಇತರ ಆರೋಪಿಗಳೊಂದಿಗೆ ಸೇರಿ ಇನ್ನೂ ಹೆಚ್ಚಿನ ವರದಕ್ಷಿಣೆ ತರುವಂತೆ ಬೇಡಿಕೆ ಇಟ್ಟು ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದಲ್ಲದೇ ನೊಂದ ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೆದರಿಕೆ ಹಾಕಿದ್ದಾರೆ. 2ನೇ ಬಾರಿಗೆ ಗರ್ಭವತಿಯಾದಾಗ ಬಲವಂತವಾಗಿ ಹೆದರಿಸಿ ಗರ್ಭಪಾತ ಮಾಡಿದ್ದು ಸದ್ಯ 4 ತಿಂಗಳ ಗರ್ಭಿಣಿಯಾಗಿರುವ ಮಹಿಳೆಯನ್ನು ಮನೆಯಿಂದ ಹೊರಗೆ ಹಾಕಿದ್ದಾರೆಂದು ನೊಂದ ಮಹಿಳೆ ಹಾಜಿರಾ ಬಾನು ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ 42/2019 ಕಲಂ: 498(ಎ), 313, 504, 506 ಜೊತೆಗೆ 34 ಐಪಿಸಿ ಮತ್ತುಕಲಂ: 3,4 ಡಿ.ಪಿ,.ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.

Comments are closed.