ಕರಾವಳಿ

ಕೋಸ್ಟಲ್‌ವುಡ್ ಕಲಾವಿದರ, ತಂತ್ರಜ್ಞರ ಒಕ್ಕೂಟದ ಅಧ್ಯಕ್ಷರಾಗಿ ಮೋಹನ್ ಕೊಪ್ಪಳ

Pinterest LinkedIn Tumblr

ಮಂಗಳೂರು: ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟದ ನೂತನ ಅಧ್ಯಕ್ಷರಾಗಿ ಮೋಹನ್ ಕೊಪ್ಪಳ ಕದ್ರಿ ಅವಿ ರೋಧವಾಗಿ ಆಯ್ಕೆಗೊಂಡರು.

ನೂತನ ಪದಾಧಿಕಾರಿಗಳ ಆಯ್ಕೆ ಕದ್ರಿ ಗೋಕುಲ್ ಹಾಲ್‌ನಲ್ಲಿ ಪಮ್ಮಿ ಕೊಡಿಯಾಲ್‌ಬೈಲ್ ಅಧ್ಯಕ್ಷತೆಯಲ್ಲಿ ಜರಗಿತು. 2019-20ನೇ ನೂತನ ಪದಾಧಿಕಾರಿಗಳ ಆಯ್ಕೆ ಮಹಾ ಸಭೆಯಲ್ಲಿ ನಡೆಯಿತು.

ಗೌರವಾಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ, ಗೌರವ ಸಲಹೆಗಾರರಾಗಿ ಪಮ್ಮಿ ಕೊಡಿಯಾಲ್‌ಬೈಲ್, ಕಾನೂನು ಸಲಹೆಗಾರರಾಗಿ ಮೋಹನ್‌ದಾಸ್ ರೈ ಆಯ್ಕೆಯಾದರು.

ಅಧಿಕಾರ ಸ್ವೀಕರಿಸಿದ ಮೋಹನ್ ಕೊಪ್ಪಳ ಮಾತನಾಡಿ, ಮುಂದಿನ ದಿನಗಳಲ್ಲಿ ಸರ್ವ ಸದಸ್ಯರ ಬೆಂಬಲ ದೊಂದಿಗೆ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುವುದು ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.

ಉಪಾಧ್ಯಕ್ಷರಾಗಿ ಧನರಾಜ್ ಆರ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ಶೆಟ್ಟಿ, ಕೋಶಾಧಿಕಾರಿಯಾಗಿ ವಿಶ್ವಾಸ್ ಗುರುಪುರ, ಜೊತೆ ಕಾರ್ಯ ದರ್ಶಿಯಾಗಿ ಜೀವನ್ ಉಳ್ಳಾಲ್, ಕ್ರೀಡಾ ಕಾರ್ಯದರ್ಶಿಯಾಗಿ ಶರತ್ ಪೂಜಾರಿ, ಧನರಾಜ್ ಕದ್ರಿ, ಮಹಿಳಾ ಕ್ರೀಡಾ ಕಾರ್ಯದರ್ಶಿಯಾಗಿ ವಿದ್ಯಾಶ್ರೀ ಕೈಕಂಬ, ಸಂಘಟನಾ ಕಾರ್ಯದರ್ಶಿಯಾಗಿ ಲಕ್ಷ್ಮೀಶ್ ಸುವರ್ಣ, ಪ್ರಜ್ವಲ್ ಅತ್ತಾವರ, ಮಹಿಳಾ ಸಂಘಟನಾ ಕಾರ್ಯದರ್ಶಿ ಯಾಗಿ ಅಶ್ವಿನಿ ಕೋಟ್ಯಾನ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶರಣ್ ಕೈಕಂಬ, ರಾಜೇಶ್ ಅಳಪೆ, ರಾಜೇಶ್ ಕಣ್ಣೂರು ಆಯ್ಕೆಯಾದರು.

ಕಾರ್ಯಕಾರಿ ಸಮಿತಿಗೆ ಅರುಣ್ ಶೆಟ್ಟಿ ಕಡಂದಲೆ, ಪ್ರಶಾಂತ್ ಕಂಕನಾಡಿ, ಸುರೇಶ್ ವಿಟ್ಲ, ಸಚಿನ್ ಅಡ್ಯಾರ್, ಯಶವಂತ ಶೆಟ್ಟಿ ಕೃಷ್ಣಾಪುರ, ಜಿತೇಶ್ ಉಳಿಯ, ಗೌರವ್ ಕದ್ರಿ ಭರತ್ ಆಳ್ವಾ, ವಿಕ್ರಮ್ ಶೆಟ್ಟಿ, ದಿನೇಶ್ ಧರ್ಮಸ್ಥಳ, ರಂಜನ್ ಬೋಳೂರು, ದಯಾನಂದ ಬುಡ್ರಿಯಾ, ವೈಷ್ಣವಿ ಕದ್ರಿ ಆಯ್ಕೆಯಾದರು.  ರಾಜೇಶ್ ಅಳಪೆ ಸ್ವಾಗತಿಸಿದರು, ಪ್ರಕಾಶ್ ಧರ್ಮನಗರ ವಂದಿಸಿದರು.

Comments are closed.