ಕರಾವಳಿ

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವಿದ್ಯಾರ್ಥಿಗಳಿಗೆ ವನ್ಯಜೀವಿಗಳ ಬಗ್ಗೆ ಚಿತ್ರಕಲಾ ಮತ್ತು ಛದ್ಮವೇಶ ಸ್ಪರ್ಧೆ

Pinterest LinkedIn Tumblr

ಮಂಗಳೂರು ಅಕ್ಟೋಬರ್, 10: ಪಿಲಿಕುಳ ಜೈವಿಕ ಉದ್ಯಾನದಲ್ಲಿ ವನ್ಯಜೀವಿ ಸಪ್ತಾಹವನ್ನು ಆಚರಿಸಲಾಯಿತು. ಹಿರಿಯ, ಕಿರಿಯ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ವನ್ಯಜೀವಿಗಳ ಬಗ್ಗೆ ಚಿತ್ರಕಲಾ ಮತ್ತು ಛದ್ಮವೇಶ ಸ್ಪರ್ಧೆಯನ್ನು ಏರ್ಪಡಿಸಲಾಯಿತು.

ಕಾರ್ಕಳ ವನ್ಯಜೀವಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ರುತ್ರನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಹೆಚ್. ಜಯಪ್ರಕಾಶ್ ಭಂಡಾರಿ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತವನಾ ಭಾಷಣಗೈದರು.

ಮುಖ್ಯ ಅಥಿತಿಗಳಾಗಿ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕಿ ಮೇಘನಾ, ಡೀನ್ ಡಾ. ಅಖ್ತರ್ ಹುಸೈನ್, ಡಾ. ಕೆ.ವಿ.ರಾವ್, ಟಿ. ಸುಬ್ಬಯ ಶೆಟ್ಟಿ, ಎನ್.ಜಿ. ಮೊಹನ್, ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಶಾಂತರಾಮ್ ಶೆಟ್ಟಿ, ಪ್ರಸಾದ್ ಆರ್ಟ್ ಗ್ಯಾಲರಿಯ ಕೋಟಿಪ್ರಸಾದ್ ಆಳ್ವ ಭಾಗವಹಿಸಿದರು.

ಹಿರಿಯ ಕಲಾಕಾರ ಗಣೇಶ್ ಸೋಮಯಾಜಿ ಹುಲಿಯ ಚಿತ್ರ ಬಿಡಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಲಾವಿದರಾದ ಶರತ್ ಹೊಳ್ಳ, ಕಮಲ್ ಮತ್ತು ಸಹೋದ್ಯೋಗಿಗಳು ಚಿತ್ರಕಲಾ ಸ್ಪರ್ಧೆಯ ಮೇಲುಸ್ತುವಾರಿಯನ್ನು ನಡೆಸಿದರು. ವನ್ಯಜೀವಿ ಛಾಯಚಿತ್ರ ಸ್ಪರ್ಧೆಯಲ್ಲಿ ಮಡಿಕೇರಿಯ ವಿನೋದ್ ಪ್ರಥಮ ಬಹುಮಾನ, ಮೈಸೂರಿನ ಕರಣ್ ಸತೀಷ್ ದ್ವಿತೀಯ ಮತ್ತು ತುಮುಕೂರಿನ ವರದನಾಯಕ ಟಿ.ಪಿ ತೃತೀಯ ಬಹುಮಾನ ಪಡೆದರು ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Comments are closed.