ಕರಾವಳಿ

ಬುಲ್ ಟ್ರಾಲಿಂಗ್, ಪೇರ್ ಟ್ರಾಲಿಂಗ್ ಮೀನುಗಾರಿಕೆ ಪದ್ಧತಿ ನಿಷೇಧ

Pinterest LinkedIn Tumblr

ಉಡುಪಿ: ರಾಜ್ಯ ಸರ್ಕಾರವು ಸಮುದ್ರದಲ್ಲಿ ಕೆಲವೊಂದು ತರಹದ ಹಾನಿಕಾರಕ ಮೀನುಗಾರಿಕಾ ಪದ್ಧತಿಗಳನ್ನು ನಿಷೇಧಿಸಿದೆ. ಆದಾಗ್ಯೂ ಸಹ ಇತ್ತೀಚಿನ ದಿನಗಳಲ್ಲಿ ಸಮುದ್ರದಲ್ಲಿ ನಿಷೇಧಿತ ಮೀನುಗಾರಿಕೆ ಪ್ರಮುಖವಾಗಿ ಬುಲ್ಟ್ರಾಲ್ ಅಥವಾ ಫೇರ್ಟ್ರಾಲ್ ಮಾಡುತ್ತಿರುವುದಾಗಿ ದೂರುಗಳು ಸ್ವೀಕೃತವಾಗಿರುತ್ತದೆ.

(ಸಾಂದರ್ಭಿಕ ಚಿತ್ರ)

ಈ ಬಗ್ಗೆ ಇಲಾಖಾಧಿಕಾರಿಗಳು ಗುರುವಾರ ಸಂಜೆ ಕರಾವಳಿ ಕಾವಲು ಪಡೆಯ ದೋಣಿಯಲ್ಲಿ, ಸಿಬ್ಬಂದಿಗಳೊಂದಿಗೆ ಖುದ್ದು ಪರಿಶೀಲನೆ ನಡೆಸಿದಾಗ ತಿರುಮಲ, ನೋಂದಣಿ ಸಂಖ್ಯೆ:IND-KA-02-MM-3060 ಮತ್ತು ನೋಂದಣಿ ಸಂಖ್ಯೆ ಗೋಚರವಾಗದ ಇನ್ನೊಂದು ಬೋಟ್ ಬುಲ್ಟ್ರಾಲಿಂಗ್ನಲ್ಲಿ ತೊಡಗಿರುತ್ತದೆ. ವಾಯುಪುತ್ರ ಮತ್ತು ಕೃಷ್ಣ ಪಾರಿಜಾತ ಬೋಟುಗಳು ಬುಲ್ಟ್ರಾಲಿಂಗ್ನಲ್ಲಿ ತೊಡಗಿರುವ ಬಗ್ಗೆ ವೀಡಿಯೋ ದಾಖಲೆ ಸ್ವೀಕೃತವಾಗಿರುತ್ತದೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಬುಲ್ಟ್ರಾಲಿಂಗ್, ಫೇರ್ಟ್ರಾಲಿಂಗ್ ಇತ್ಯಾದಿ ನಿಷೇಧಿತ ಮೀನುಗಾರಿಕಾ ಪದ್ಧತಿ ಅನುಸರಿಸುತ್ತಿರುವ ಬೋಟುಗಳ ಮೇಲೆ ಮೀನುಗಾರಿಕೆ ಇಲಾಖೆಯಿಂದ ಕಟ್ಟುನಿಟ್ಟಾಗಿ ಕ್ರಮ ಜರುಗಿಸಲಾಗುವುದೆಂದು ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Comments are closed.