ಕರಾವಳಿ

ಕೊಲ್ಯ ಶ್ರೀ ಮೂಕಾಂಬಿಕ ಕ್ಷೇತ್ರದಲ್ಲಿ ಲೋಕಕಲ್ಯಾಣಕ್ಕಾಗಿ ಚಂಡಿಕಾಹೋಮ

Pinterest LinkedIn Tumblr

 ಮಂಗಳೂರು : ಕೊಲ್ಯ ಶ್ರೀ ಮೂಕಾಂಬಿಕ ಕ್ಷೇತ್ರ, ಕೊಲ್ಯ ಮಠದಲ್ಲಿ ಲಲಿತ ಪಂಚಮಿಯ ಶುಭದಿನದಂದು ಸಾನಿಧ್ಯ ವೃದ್ಧಿಗಾಗಿ ಹಾಗೂ ಲೋಕಕಲ್ಯಾಣಕ್ಕಾಗಿ ಚಂಡಿಕಾಹೋಮ ನೆರವೇರಿತು.

ರಾಜರಾಜೇಶ್ವರಿ ದೇವಸ್ಥಾನ ಕುತ್ತಾರು ಇದರ ತಂತ್ರಿ ವರ್ಯರಾದ ಶ್ರೀ ರಾಘವೇಂದ್ರ ಹೊಳ್ಳರು ಮಾರ್ಗದರ್ಶನ ನೀಡಿದರು. ವ್ಯವಸ್ಥಾಪನ ಸಮಿತಿಯ ಮಧುಸೂದನ್ ಆಯರ್ ದಂಪತಿಗಳು ಹೋಮದಲ್ಲಿ ಪಾಲ್ಗೊಂಡರು.

ಅಧ್ಯಕ್ಷರಾದ ಶ್ರೀ ಕೂಡ್ಲು ಮಹಾಬಲ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬಿಎನ್ ನಾರಾಯಣ ಕುಂಪಲ, ಸದಸ್ಯರಾದ ವಾಸುದೇವ ಗೌಡ, ಶರಣ್ ಪಂಪ್ ವೆಲ್, ಶಿವಾನಂದ ಮೆಂಡನ್, ಗೋಪಾಲ್ ಕುತ್ತಾರ್, ಗುಣವತಿ ಆಚಾರ್, ಕೊಲ್ಯ, ಮೋಹನ್ ಗೋರಿಗುಡ್ಡ, ಕೃಷ್ಣ ಮೂರ್ತಿ ಮಾತೃ ಮಂಡಳಿಯ ಅಧ್ಯಕ್ಷರಾದ ಜಾನಕಿ ವೆಂಕಪ್ಪ, ಉಪಾಧ್ಯಕ್ಷರಾದ ಸುಲೋಚನಿ, ಖಜಾಂಜಿ ಸುಶೀಲಾ ಕೊಲ್ಯ, ಜೊತೆ ಕಾರ್ಯದರ್ಶಿ ಮಾಲತಿ ಮತ್ತು ಅಪಾರ ಸಂಖ್ಯೆಯ ಭಕ್ತ ಸಮೂಹ ಚಂಡಿಕಾ ಹೋಮದಲ್ಲಿ ಪಾಲ್ಗೊಂಡರು.

ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ದಲ್ಲಿ ಶ್ರೀಮತಿ ವಿನುತ ಮತ್ತು ಬಳಗದವರು ಭಕ್ತಿ ಗಾನ ಸುಧೆ ನಡೆಸಿಕೊಟ್ಟರು ಮತ್ತು ಪುಷ್ಕಲ್ ಕುಮಾರ್ ಅವರು ಹರಿಕಥ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Comments are closed.