ಕರಾವಳಿ

ಕುಕ್ಕೆ ಸುಬ್ರಮಣ್ಯಕ್ಕಾಗಿ ಕೋಟೇಶ್ವರದಲ್ಲಿ ತಯಾರಾದ 2 ಕೋಟಿಯ ರಥದ ಕಾಣಿಕೆ ಯಾರದ್ದು ಗೊತ್ತಾ?

Pinterest LinkedIn Tumblr

ಉಡುಪಿ: ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಹಾಗೂ ಉದ್ಯಮಿ ಅಜಿತ್ ಶೆಟ್ಟಿ ಅವರು ಕರ್ನಾಟಕದ ಪ್ರಸಿದ್ಧ ತೀರ್ಥ ಕ್ಷೇತ್ರದಲ್ಲಿ ಒಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಾಣಿಕೆ ರೂಪದಲ್ಲಿ ಸಮರ್ಪಿಸಲಿರುವ ಬ್ರಹ್ಮ ರಥದ ಕಾರ್ಯ ಪರಿಪೂರ್ಣಗೊಂಡಿದ್ದು 400 ವರ್ಷಗಳಷ್ಟು ಹಳೆಯದಾದ ರಥದ ಮಾದರಿಯಲ್ಲೇ ನೂತನ ರಥವನ್ನು ರಥಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯ ಕೈಚಳಕದಲ್ಲಿ ವೈಶಿಷ್ಟ್ಯಪೂರ್ಣವಾಗಿ ಮೂಡಿಬಂದಿದೆ. ಕೋಟೇಶ್ವರದಿಂದ ರಥವು ಸೆ.30 ಸೋಮವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ಭವ್ಯ ಮೆರವಣಿಗೆ ಮೂಲಕ ಹೊರಡಲಿದೆ ಎಂದು ಉಡುಪಿ ಜಿಲ್ಲಾ ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಬ್ರಹ್ಮರಥವು ಉಡುಪಿ- ಪಡುಬಿದ್ರೆ ಮಾರ್ಗವಾಗಿ ಕದ್ರಿ- ಬಿ.ಸಿ.ರೋಡ್- ಉಪ್ಪಿನಂಗಡಿ, ಕಡಬ ಮೂಲಕ ಅ.2ರಂದು ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ತಲುಪಲಿದ್ದು ಅಲ್ಲಿ ದೇವಳದ ಆಡಳಿತವು ಭವ್ಯ ಮೆರವಣಿಗೆಯಲ್ಲಿ ರಥವನ್ನು ಬರಮಾಡಿಕೊಂಡು ದೇವಳಕ್ಕೆ ಸಮರ್ಪಣೆಗೊಳ್ಳಲಿದೆ.
ಈ ಸಂದರ್ಭದಲ್ಲಿ ಸ್ಥಳೀಯ ಮಾನ್ಯ ಶಾಸಕರುಗಳು, ಸಚಿವರು, ಜನಪ್ರತಿನಿಧಿಗಳು, ಜಯಕರ್ನಾಟಕ ಸಂಘಟನೆಯ ರಾಜ್ಯಾದ್ಯಕ್ಷರು, ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಸತೀಶ್ ಪೂಜಾರಿ ತಿಳಿಸಿದರು.

ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಶ್ರೀನಿವಾಸ ಶೆಟ್ಟಿಗಾರ್ , ಗೌರವ ಸಲಹೆಗಾರ ಸುಧಾಕರ ರಾವ್‌ , ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಅಮೀನ್ ಉಡುಪಿ , ಹೋರಾಟ ಸಮಿತಿ ಅಧ್ಯಕ್ಷ ಕರುಣಾಕರ ಪೂಜಾರಿ, ಕಾರ್ಯಾಧ್ಯಕ್ಷ ಶರತ್ ಕುಂದಾಪುರ, ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.