ಕರಾವಳಿ

ಪೊಡವಿಗೊಡೆಯನ ನಾಡಲ್ಲಿ ‘ಶ್ರೀ ಕೃಷ್ಣ ಜನ್ಮಾಷ್ಟಮಿ’ ಸಂಭ್ರಮ

Pinterest LinkedIn Tumblr

ಉಡುಪಿ: ಇಂದು ನಡೆಯಲಿರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ನಾಳೆ ನಡೆಯುವ ಮೊಸರು ಕುಡಿಕೆ ಉತ್ಸವಕ್ಕೆ ಶ್ರೀಕೃಷ್ಣ ಮಠದಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ಈಗಾಗಲೆ ಹಲವಾರು ಮಂದಿ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಬಣ್ಣಬಣ್ಣದ ಹೂಗಳಿಂದ ತುಂಬಿತುಳುಕುತ್ತಿರುವ ರಥಬೀದಿ ಪರಿಸರ ರಂಗೇರಿದೆ.

ಕಾರ್ಯಕ್ರಮ ವಿವರ: ಆ.22ರಂದು ಸಾರ್ವಜನಿಕರಿಗಾಗಿ ಹತ್ತಿ ಮಾಡುವ ಸ್ಪರ್ಧೆ ಆಯೋಜಿಸಲಾಗಿತ್ತು. ಆ. 23ರ ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಮಧ್ವಮಂಟಪದಲ್ಲಿ ಪ್ರಸಿದ್ಧ ಭಜನ ತಂಡಗಳಿಂದ ನಡೆಯಲಿರುವ ಭಜನ ಕಾರ್ಯಕ್ರಮಕ್ಕೆ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಚಾಲನೆ ನೀಡಲಿದ್ದಾರೆ. ಬಳಿಕ ಮುದ್ದುಕೃಷ್ಣ ವೇಷ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 12ರಿಂದ ಓಲಗ ಮಂಟಪದಲ್ಲಿ ಪುತ್ತಿಗೆ ಚಂದ್ರಶೇಖರ್‌ ಬಳಗದಿಂದ ಸ್ಯಾಕೊÕàಫೋನ್‌ ವಾದನ ನಡೆಯಲಿದೆ. ಆ. 24ರ ಬೆಳಗ್ಗೆ 9ರಿಂದ 12ರ ವರೆಗೆ ಓಲಗ ಮಂಟಪದಲ್ಲಿ ಪವನ ಬಿ. ಆಚಾರ್‌ ನಿರ್ದೇಶನ ದಲ್ಲಿ ಪಂಚ ವೀಣಾವಾದನ, ಬೆಳಗ್ಗೆ 10ಕ್ಕೆ ರಾಜಾಂಗಣದಲ್ಲಿ ಭಜನ ಕಾರ್ಯಕ್ರಮ, ಮಾನವ ನಿರ್ಮಿತ ಪಿರಮಿಡ್‌ “ಆಲಾರೆ ಗೋವಿಂದ’ ತಂಡದ ಪ್ರದರ್ಶನಕ್ಕೆ ಶ್ರೀಗಳು ಚಾಲನೆ ನೀಡಲಿದ್ದಾರೆ. ಅಷ್ಟಮಿಯಂದು ಪರ್ಯಾಯ ಶ್ರೀಗಳು ತರಕಾರಿ, ಗುಂಡಿಟ್ಟು ಲಡ್ಡು ಮುಹೂರ್ತ ನೆರವೇರಿಸಲಿದ್ದಾರೆ. ವಿಟ್ಲಪಿಂಡಿಯಂದು ಬೆಳಗ್ಗೆ 10ಕ್ಕೆ ಪಲಿಮಾರು ಶ್ರೀಪಾದರು ಪಲ್ಲಪೂಜೆ ನಡೆಸಿ, ರಾಜಾಂಗಣದಲ್ಲಿ ನಡೆಯುವ ಸಾರ್ವಜನಿಕ ಅನ್ನಸಂತರ್ಪಣೆಗೆ ಚಾಲನೆ ನೀಡುವರು. ಇದೇ ಸಂದರ್ಭ ತಾಲೂಕಿನ ನಾಲ್ಕು ವಿಶೇಷ ಚೇತನ ಆಶ್ರಮಗಳಿಗೆ ಅನ್ನಪ್ರಸಾದ ತಲುಪಿಸುವ ವ್ಯವಸ್ಥೆ ಕೈಗೊಳ್ಳಲಾಗಿದೆ. ಸಮಿತಿ ವತಿಯಿಂದ ಶ್ರೀಕೃಷ್ಣ ಮಠ ಮತ್ತು ಮುಖ್ಯಪ್ರಾಣ ದೇವರಿಗೆ ವಿಶೇಷ ಹೂವಿನ ಅಲಂಕಾರ ನಡೆಯಲಿದೆ. ಆ. 24ರ ಸಂಜೆ ಕಿದಿಯೂರು ಹೊಟೇಲ್‌ ಮುಂಭಾಗದಲ್ಲಿ ಮಾನವ ನಿರ್ಮಿತ ಪಿರಾಮಿಡ್‌ ಅಲಾರೆ ಗೋವಿಂದ ಕಾರ್ಯಕ್ರಮ ಮತ್ತು ನೃತ್ಯ ಪ್ರದರ್ಶನ ಜರಗಲಿದೆ.

ಅಲ್ಪಸ್ವಲ್ಪ ಮಳೆಯಿದ್ದರೂ ರಥಬೀದಿಯಲ್ಲಿ ಹಣ್ಣು-ಹಂಪಲು, ಹೂವಿನ ವ್ಯಾಪರ ಬಲು ಭರ್ಜರಿಯಿಂದಲೇ ನಡೆಯುತ್ತಲಿದ್ದವು. ಕೇದಗೆ ಎಲೆ, ಹಲಸಿನ ಎಲೆ, ಪೇಟ್ಲಕಾಯಿಗೆ ಭಾರೀ ಬೇಡಿಕೆ ಇತ್ತು.ಮೂಡೆಯ ಎಲೆಗೆ 100 ರೂ.ಗೆ 5ರಿಂದ 6 ಸಿಗುತ್ತಿತ್ತು.

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣನಿಗೆ ಸಮರ್ಪಣೆಗೊಂಡು ಬಳಿಕ ಭಕ್ತರ ಸಂತರ್ಪಣೆಗಾಗಿ ವಿವಿಧ ಬಗೆಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಪರ್ಯಾಯ ಶ್ರೀ ಪಲಿಮಾರು ಮಠದ ವತಿಯಿಂದ ಚಿಣ್ಣರ ಸಂತರ್ಪಣಾ ಶಾಲಾ ಮಕ್ಕಳಿಗೆ ಹಾಗೂ ಭಕ್ತರಿಗೆ ಪ್ರಸಾದ ರೂಪವಾಗಿ ವಿತರಿಸಲು ಉಂಡೆ ಚಕ್ಕುಲಿ ಖಾದ್ಯಗಳನ್ನು ತಯಾರಿಸಲಾಗಿತ್ತು.

Comments are closed.