ಕರಾವಳಿ

ಮಂಗಳೂರು : ಕಾಂಗ್ರೆಸ್ ವತಿಯಿಂದ ಡೆಂಗ್ಯೂ ನಿಯಂತ್ರಣ ಜಾಗೃತಿ ಅಭಿಯಾನ

Pinterest LinkedIn Tumblr

ಮಂಗಳೂರು : ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರಾರಂಭಿಸಿರುವ ಡೆಂಗ್ಯೂ ನಿಯಂತ್ರಣ ಜಾಗೃತಿ ಅಭಿಯಾನಕ್ಕೆ ಮಾಜಿ ಶಾಸಕ  ಜೆ.ಆರ್. ಲೋಬೊ ಚಾಲನೆ ನೀಡಿದರು.

ಕದ್ರಿ ಶಿವಭಾಗ್ ಪ್ರದೇಶದಲ್ಲಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕರ್ತರ ಜೊತೆಯಲ್ಲಿ ಭೇಟಿ ನೀಡಿ ಜನರಿಗೆ ಡೆಂಗ್ಯೂ ರೋಗವನ್ನು ತಡೆಯುವ ನಿಟ್ಟಿನಲ್ಲಿ ಲೋಬೊಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮಂಗಳೂರು ನಗರದಲ್ಲಿ ದಿನೇ ದಿನೇ ಡೆಂಗ್ಯೂ ಕಾಯಿಲೆಯು ಹೆಚ್ಚಾಗುತ್ತಾ ಬಂದಿರುವುದು ನಮಗೆಲ್ಲರಿಗೂ ಬೇಸರವನ್ನು ಉಂಟುಮಾಡಿದೆ. ಕೆಲವೊಂದು ಸಾವಿನ ಪ್ರಕರಣಗಳು ವರದಿಯಾಗಿವೆ. ಇಂತಹ ಅಪಾಯಕಾರಿ ರೋಗವನ್ನು ತಡೆಗಟ್ಟಲು ಈಗಾಗಲೇ ಜಿಲ್ಲಾಡಳಿತವು ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಪೂರಕವಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಬೂತ್‌ಗಳಲ್ಲಿ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರಿಗೆ ಶುಚಿತ್ವ ಬಗ್ಗೆ ಹಾಗೂ ಆ ರೋಗವನ್ನು ತಡೆಗಟ್ಟುವ ಬಗ್ಗೆ ಮಾಹಿತಿಯನ್ನು ನೀಡಲಿದ್ದಾರೆ.

ಸಾಮಾನ್ಯವಾಗಿ ಶುದ್ಧ ತಿಳಿ ನೀರಿನಲ್ಲಿ ಡೆಂಗ್ಯೂ ಲಾರ್ವಗಳು ಕಂಡು ಬರುತ್ತದೆ. ಜನರು ತಮ್ಮ ತಮ್ಮ ಮನೆಯ ಸಮೀಪದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ತೀರಾ ಅವಶ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಸಾಮಾಜಿಕ ಮುಖಂಡ ಎ. ಸುರೇಶ್ ಶೆಟ್ಟಿ, ನಗರ ಬ್ಲಾಕ್ ಅಧ್ಯಕ್ಷ ಶ್ರೀ ವಿಶ್ವಾಸ್ ಕುಮಾರ್ ದಾಸ್, ಕಾಂಗ್ರೆಸ್ ಮುಖಂಡರುಗಳಾದ ಟಿ. ಕೆ. ಸುಧೀರ್, ಜೇಮ್ಸ್ ಪ್ರವೀಣ್, ಮಾಜೀ ಕಾರ್ಪೋರೇಟರ್ ಸಬಿತಾ ಮಿಸ್ಕಿತ್, ಚಂದ್ರಕಲಾ, ಶಾಂತಲಾ ಗಟ್ಟಿ, ರಘುರಾಜ್ ಕದ್ರಿ, ಸಮರ್ಥ್ ಭಟ್, ಉದಯ ಕುಂದರ್, ವಿಜಯ ಕೋಟ್ಯಾನ್, ಲಕ್ಷ್ಮಣ್ ಮೊದಲಾದವರು ಉಪಸ್ಥಿತರಿದ್ದರು.

 

Comments are closed.