ಕರಾವಳಿ

ಬುಲೇಟ್ ಹಾಗೂ ಬೈಕ್ ಡಿಕ್ಕಿ: ಉಡುಪಿ ಎಸ್ಪಿ ಕಚೇರಿ ಸಿಬ್ಬಂದಿ ಮಹಿಳೆ ಸಾವು, ಪತಿ ಗಂಭೀರ

Pinterest LinkedIn Tumblr

ಕುಂದಾಪುರ: ಬೈಕ್ ಹಾಗೂ ಬುಲೆಟ್ ಬೈಕ್ ನಡುವೆ ಸಂಭವಿಸಿದ ಢಿಕ್ಕಿಯಲ್ಲಿ ಬೈಕ್‌ನ ಹಿಂಬದಿ ಸವಾರೆಯಾಗಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಬೈಕ್ ಸವಾರ ಮಹಿಳೆಯ ಪತಿಯೂ ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಂಭಾಸಿ ಆನೆಗುಡ್ಡೆ ಸ್ವಾಗತ ಗೋಪುರದ ಎದುರು ಬುಧವಾರ ರಾತ್ರಿ ನಡೆದಿದೆ.

ಉಡುಪಿ ಎಸ್ಪಿ ಕಚೇರಿಯಲ್ಲಿ ಸಿಬ್ಬಂದಿಯಾಗಿದ್ದ ಹೇಮಾ(32) ಅಪಘಾತದಲ್ಲಿ ಸಾವನ್ನಪ್ಪಿದ ಮಹಿಳೆ. ಬೈಕ್ ಸವಾರ ಹೇಮಾ ಅವರ ಪತಿ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ದ್ವಿತೀಯ ದರ್ಜೆಯ ಸಹಾಯಕ ಬೈಂದೂರು ನಿವಾಸಿ ನಾಗರಾಜ್ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾರ್ಯಕ್ರಮವೊಂದರ ನಿಮಿತ್ತ ನಾಗರಾಜ್ ಹಾಗೂ ಹೇಮಾ ಕುಂಭಾಸಿಗೆ ಆಗಮಿಸಿದ್ದು ಕಾರ್ಯಕ್ರಮ ಮುಗಿಸಿ ಕುಂಭಾಸಿಯ ಆನೆಗುಡ್ಡೆ ದೇವಸ್ಥಾನದ ಸ್ವಾಗತ ಗೋಪುರ ಸಮೀಪ ಏಕಮುಖ ರಸ್ತೆಯಲ್ಲಿ ಬರುತ್ತಿರುವಾಗ ಎದುರಿನಿಂದ ಶ್ರೀಶ ಎನ್ನುವಾತ ಚಲಾಯಿಸಿ ಬಂದ ಬುಲೆಟ್ ಇವರ ಬೈಕಿಗೆ ಡಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಬೈಕಿನಲ್ಲಿದ್ದ ಹೇಮ ನೇರವಾಗಿ ರಸ್ತೆಗೆಸೆಯಲ್ಪಟ್ಟಿದ್ದು ಅವರ ತಲೆಗೆ, ಹಣೆಗೆ ಗಂಭೀರ ರಕ್ತಗಾಯವಾಗಿದೆ. ನಾಗರಾಜ ಎದೆಗೆ, ಕೈ ಕಾಲುಗಳಿಗೆ ಗಾಯವಾಗಿದ್ದು, ಹಾಗೂ ಶ್ರೀಶನ ಬಲ ಕಣ್ಣಿಗೆ, ಎಡಕೈಗೆ ಹಾಗೂ ಮೈ ಕೈಗೆ ಗಾಯವಾಗಿದ್ದು, ಮೂವರಿಗೂ ಸ್ಥಳೀಯ ಆಸ್ಪತ್ರೆಗಳಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಣಿಪಾಲ KMC ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿತ್ತದರೂ ಕೂಡ ಗಂಭೀರ ಗಾಯಗೊಂಡ ಹೇಮಾ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಎಸ್ಪಿ ನಿಶಾ ಜೇಮ್ಸ್ ಹಾಗೂ ಕಚೇರಿಯ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಗುರುವಾರ ಬೈಂದೂರಿನಲ್ಲಿ ಹೇಮಾ ಅಂತ್ಯಸಂಸ್ಕಾರ ನಡೆದಿದೆ.

(ವರದಿ-ಯೋಗೀಶ್ ಕುಂಭಾಸಿ)

Comments are closed.