ಕರಾವಳಿ

ಪ್ರಕೃತಿ ವಿಕೋಪದ ಅನುದಾನ : ಕಣ್ಣೂರು ವಾರ್ಡ್ ಚರಂಡಿ ಕಾಮಗಾರಿಗೆ ಗುದ್ದಲಿಪೂಜೆ

Pinterest LinkedIn Tumblr

ಮಂಗಳೂರು ; ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪದ ಅನುದಾನದಡಿಯಲ್ಲಿ 52ನೇ ಕಣ್ಣೂರು ವಾರ್ಡಿನ ವೀರನಗರ ಕಣ್ಣೂರು ಪ್ರದೇಶದಲ್ಲಿ ಸದಾಶಿವರವರ ಮನೆಗೆ ಹೋಗುವ ಕಾಲುದಾರಿಯ ದುರಸ್ತಿ ಹಾಗೂ ಚರಂಡಿ ಕಾಮಗಾರಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರ ಆಶಯದಂತೆ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು ಅವರು ಗುದ್ದಲಿಪೂಜೆ ನೆರವೇರಿಸಿದರು.

ಸ್ಥಳೀಯ ಪ್ರಮುಖರಾದ ವಿಶ್ವನಾಥ, ಗೀತಾನಂದ ಶೆಟ್ಟಿ, ಶೇಖರ್, ದಯಾನಂದ, ವಿದ್ಯಾಶೇಖರ್, ಪ್ರಜ್ವಲ್ ಆರ್ ಸಹಿತ ಹಲವರು ಉಪಸ್ಥಿತರಿದ್ದರು.

Comments are closed.