ಕರಾವಳಿ

ಉಡುಪಿ ಜಿಲ್ಲಾಸ್ಪತ್ರೆ ಆವರಣದ ಹತ್ತಾರು ಸಮಸ್ಯೆಗಳ ಪರಿಹಾರಕ್ಕೆ ಜಯಕರ್ನಾಟಕ ಆಗ್ರಹ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಇಲ್ಲಿ ಅನೇಕ ವೈದ್ಯಕೀಯ ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು ಆಸ್ಪತ್ರೆಯ ವಠಾರದ ಪ್ರವೇಶ ದ್ವಾರದ ಬಳಿ ಸಾರಿಗೆ ಬಸ್ಸುಗಳ ಅನಧಿಕೃತ ತಂಗುದಾಣವಾಗಿ ಮಾರ್ಪಟ್ಟಿದೆ. ಅಲ್ಲದೆ ಈ ಪ್ರದೇಶವು ಅನೇಕ ರಸ್ತೆಗಳು ಸಂಧಿಸುವ ಸ್ಥಳದಲ್ಲಿ ಇದ್ದು ಅಪಘಾತಕ್ಕೆ ಆಹ್ವಾನ ನೀಡುವಂತಿದೆ. ಅಲ್ಲದೇ ಆಸ್ಪತ್ರೆಯ ವಠಾರವು ಸಾರ್ವಜನಿಕ ರಸ್ತೆಯಂತೆ ಉಪಯೋಗಿಸಲ್ಪಡುತ್ತಿದೆ.

ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆ ಉಂಟಾಗುತ್ತಿದ್ದು ಈ ಬಗ್ಗೆ ಉಡುಪಿ ಜಿಲ್ಲಾ ಜಯಕರ್ನಾಟಕ ಸಂಘಟನೆಯು ಜಿಲ್ಲಾಧ್ಯಕ್ಷರಾದ ಸತೀಶ್ ಪೂಜಾರಿ ಅವರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ವಿಧ್ಯಾ ಕುಮಾರಿ ಅವರನ್ನು ಭೇಟಿಯಾಗಿ ಶೀಘ್ರವಾಗಿ ಸಮಸ್ಯೆಯನ್ನು ಪರಿಹರಿಸುವಂತೆ ನಗರಸಭೆಗೆ ಸೂಚನೆ ನೀಡಬೇಕಾಗಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗೌರವ ಸಲಹೆಗಾರರಾದ ಸುಧಾಕರ ರಾವ್ ಬಾರ್ಕೂರು, ಜಿಲ್ಲಾ ಮುಖಂಡರಾದ ಎಸ್ ಎಸ್ ತೋನ್ಸೆ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಅಮೀನ್, ಕಾರ್ಯಾಧ್ಯಕ್ಷ ಶರತ್ ಶೆಟ್ಟಿ, ಹೋರಾಟ ಸಮಿತಿ ಅಧ್ಯಕ್ಷ ಕರುಣಾಕರ ಪೂಜಾರಿ, ಜಿಲ್ಲಾ ಸಂಚಾಲಕ ಅಣ್ಣಪ್ಪ ಕುಲಾಲ್, ಮಣಿಪಾಲ ಘಟಕದ ಲೂವಿಸ್ ಮಣಿಪಾಲ, ಉಪಾಧ್ಯಕ್ಷ ಮಹೇಶ್ ಉಪ್ಪೂರು, ಜಿಲ್ಲಾ ಸಮಿತಿಯ ವಿಶ್ವನಾಥ ವಾರಂಬಳ್ಳಿ, ನಿತಿನ್, ಪವನ ಶೆಟ್ಟಿ ಬೈಕಾಡಿ ಉಪಸ್ಥಿತರಿದ್ದರು

Comments are closed.