ಕುಂದಾಪುರ: ಆಕಸ್ಮಾತ್ ಆಗಿ ನದಿಗೆ ಬಿದ್ದು ಕೊಚ್ಚಿ ಹೋಗಿ ಸಮುದ್ರ ಪಾಲಾಗಲಿದ್ದ ಗೋವನ್ನು ಮಧ್ಯ ಹೊಳೆಯಿಂದ ರಕ್ಷಿಸಿದ ಘಟನೆ ಗಂಗೊಳ್ಳಿ-ಕೋಡಿ ಹೊಳೆಯಲ್ಲಿ ಬುಧವಾರ ನಡೆದಿದೆ.
ಹೊಳೆಗೆ ಬಿದ್ದ ಗೋವನ್ನು ಕಂಡ ಸ್ಥಳೀಯರು ಗಂಗೊಳ್ಳಿಯ ಕೆಲವರಿಗೆ ಮಾಹಿತಿ ನೀಡಿದ್ದು ರಾಮ ಖಾರ್ವಿ, ರಾಜ ಮಲ್ಯರಬೆಟ್ಟು ಹಾಗೂ ಅಣ್ಣಪ್ಪ ಎನ್ನುವರು ದೋಣಿ ಮೂಲಕ ಹೊಳೆಯಲ್ಲಿ ಸಾಗಿ ಗೋವನ್ನು ಸುರಕ್ಷಿತವಾಗಿ ರಕ್ಷಿಸಿದ್ದು ಈ ಭಾಗದ ಇನ್ನೊಂದಷ್ಟು ಮಂದಿ ಅವರಿಗೆ ಸಹಕಾರ ನೀಡಿದರು.
ಸದ್ಯ ಗೋವಿನ ರಕ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Comments are closed.