ಕರಾವಳಿ

ಐಎಮ್ಎ ಹಗರಣ; ಕಂಪೆನಿಯಿಂದ ವಂಚಿತೆ ಉಡುಪಿಯ ಮಹಿಳೆಯಿಂದ ಸೆನ್ ಠಾಣೆಗೆ ದೂರು

Pinterest LinkedIn Tumblr

ಉಡುಪಿ: ಬಹುಕೋಟಿ ವಂಚನೆ ಮಾಡಿರುವ ಐಎಂಎ ಕಂಪೆನಿ ಹಗರಣದಲ್ಲಿ ಉಡುಪಿ ಮೂಲದ ಮಹಿಳೆಯೊಬ್ಬರು ವಂಚನೆಗೊಳಗಾಗಿದ್ದು ಈ ಬಗ್ಗೆ ಆ ಮಹಿಳೆ ಉಡುಪಿ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಮೂಲಕ ಐಎಮ್ಐ ಹಗರಣಕ್ಕೆ ಸಂಬಂಧಿಸಿದ ಹಾಗೆ ಉಡುಪಿ ಜಿಲ್ಲೆಯಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ.

ಉಡುಪಿ ಜಿಲ್ಲೆ ಕೆಮ್ಮಣ್ಣು, ತೋನ್ಸೆ ಮೂಲದ ಎಸ್.ಕೆ. ನಾಹಿದಾ (30) ಎನ್ನುವವರಿಗೆ ಸಂಬಂಧಿಕರು IMA (ಐಎಂಐ) ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲೀ. ಬೆಂಗಳೂರು ಎನ್ನುವ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಅಸಲು ಮೊತ್ತದ ಜೊತೆ ತಿಂಗಳಿಗೆ 3.1% ಬಡ್ಡಿ/ಲಾಭಾಂಶ ನೀಡಲಿದ್ದಾರೆಂಬ ಬಗ್ಗೆ ತಿಳಿಸಿದ್ದರು. ಅದರಂತೆ 2018 ರ ಡಿ.31 ರಂದು ಪಾಲು ಬಂಡವಾಳದ (ಶೇರ್) ಆಗಿ 1000 ರೂ. ಹಾಗೂ ಡೆಪೋಸಿಟ್ ಆಗಿ 30,000 ಮತ್ತು 20,000 ಹಣವನ್ನು ನೆಪ್ಟ್ (NEFT) ಮೂಲಕ ಹೂಡಿಕೆ ಮಾಡಿದ್ದು, ಈ ಬಗ್ಗೆ ಶೇರ್ ಸರ್ಟಿಫಿಕೇಟ್ ಮತ್ತು ಪಾಸ್ ಬುಕ್ ಅಂಚೆ ಮುಖೇನ ಬಂದಿತ್ತು. ಅಲ್ಲದೇ 2019ರ ಜ.31 ರಂದು 1,250 ರೂ. ಹಾಗೂ ಫೆ. 28 ರಂದು1,278.13 ಬಡ್ಡಿ/ಲಾಭಾಂಶ ಜಮಾ ಆಗಿತ್ತು.

ಆದರೆ ನಂತರದ ದಿನಗಳಲ್ಲಿ ಆರೋಪಿ ಐಎಂಎ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲೀ. ಬೆಂಗಳೂರು ಇದರ ಸಿ.ಇ.ಓ. ಹಾಗೂ ನಿರ್ದೇಶಕರುಗಳು ಯಾವುದೇ ಬಡ್ಡಿ ಮತ್ತು ಲಾಭಾಂಶ ನೀಡದೇ ಮತ್ತು ಅಸಲು ಹೂಡಿಕೆಯ ಹಣ ಹಿಂದಿರುಗಿಸದೇ ಮೋಸ ಮಾಡಿರುವ ಬಗ್ಗೆ ಎಸ್.ಕೆ. ನಾಹಿದಾ ಅವರು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅದರಂತೆ 406, 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

Comments are closed.