ಕರಾವಳಿ

ಮಂಗಳೂರು ವಿವಿಗೆ ತುಳು ಭಾಷಿಗ ಕುಲಪತಿ ನೇಮಕ : ತುಳು ಸಾಹಿತ್ಯ ಅಕಾಡೆಮಿಯಿಂದ ಅಭಿನಂದನೆ

Pinterest LinkedIn Tumblr

ಮಂಗಳೂರು : ಇದೇ ಪ್ರಥಮ ಬಾರಿಗೆ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ತುಳು ಮಾತೃ ಭಾಷಿಗ ಕುಲಪತಿ ನೇಮಕ ಗೊಂಡಿರುವು ದನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಭಿನಂದಿಸಿದೆ. ನೂತನ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರನ್ನು ಅಕಾಡೆಮಿ ನಿಯೋಗ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿತು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಅವರ ನೇತೃತ್ವದ ನಿಯೋಗವು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ಕುಲಪತಿಯವರಿಗೆ ಅಭಿನಂದನೆ ಸಲ್ಲಿಸಿತು.

ಮಂಗಳೂರು ವಿಶ್ವವಿದ್ಯಾನಿಲಯವು ಈಗಾಗಲೇ ಸ್ನಾತಕೋತ್ತರ ಪದವಿಯಲ್ಲಿ ತುಳು ಭಾಷೆಯ ವಿಭಾಗವನ್ನು ಆರಂಭಿಸಿರುವುದು ಹಾಗೂ ಪ್ರಸಕ್ತ ಶೆಕ್ಷಣಿಕ ವರ್ಷದಿಂದ ಪದವಿ ತರಗತಿಯಲ್ಲಿ ತುಳು ಪಠ್ಯವನ್ನು ಜಾರಿಗೊಳಿಸಿರುವ ಬಗ್ಗೆ ಕುಲಪತಿಯರೊಂದಿಗೆ ವಿಚಾರ ವಿನಿಮಯ ಮಾಡಲಾಯಿತು.

ತುಳು ಅಕಾಡೆಮಿಯ ಎಲ್ಲಾ ಕಾರ್ಯಗಳಿಗೆ ವಿಶ್ವವಿದ್ಯಾನಿಲಯವು ಸರ್ವ ಪ್ರೋತ್ಸಾಹವನ್ನು ನೀಡಲಿದೆ ಎಂದು ಕುಲಪತಿ ಪ್ರೋ.ಪಿ.ಎಸ್. ಎಡಪಡಿತ್ತಾಯ ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ವಿಶ್ವವಿದ್ಯಾನಿಲಯವು ಪ್ರಾದೇಶಿಕ ಸಂಸ್ಕೃತಿ, ಭಾಷೆ ಹಾಗೂ ಸ್ಥಳೀಯರ ಆಶೋತ್ತರಗಳಿಗೆ ಸ್ಪಂದಿಸಲಿದೆ ಎಂದು ಪ್ರೋ.ಪಿ.ಎಸ್. ಯಡಪಡಿತ್ತಾಯ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿ.ವಿ.ಕುಲಸಚಿವ ಪ್ರೋ.ಎ.ಎಂ.ಖಾನ್ ಉಪಸ್ಥಿತರಿದ್ದರು . ಕುಲಪತಿಯವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಅಕಾಡೆಮಿ ಸದಸ್ಯರಾದ ಶಿವಾನಂದ ಕರ್ಕೇರಾ, ಪ್ರಭಾಕರ್ ನೀರ್ ಮಾರ್ಗ, ಡಾ.ವಾಸುದೇವ ಬೆಳ್ಳೆ, ಬೆನೆಟ್ ಅಮ್ಮನ್ನ, ತಾರಾನಾಥ್ ಗಟ್ಟಿ, ವಿದ್ಯಾಶ್ರೀ ಭಾಗವಹಿಸಿದ್ದರು.

Comments are closed.