ಔಷಧೀಯ ಬಳಕೆಗೆ:
ದೇಹದಿಂದ ಹುಳುಗಳು ಉಚ್ಚಾಟಿಸಲು.ಅಮೀಬಾದಿಂದ ಉಂಟಾದ ಭೇದಿ, ಅತಿಸಾರ, ಜ್ವರ, ಕುಷ್ಠರೋಗ, ಚರ್ಮ ರೋಗಗಳು, ಯಕೃತ್ತು ಕಾಯಿಲೆ, ತಲೆನೋವು , ವಸಡು ರೋಗಗಳು . ಉರಿಯೂತವನ್ನು ಕಡಿಮೆ ಮಾಡಲು.ಜೀರ್ಣಕಾರಕವಾಗಿ ಮತ್ತು ರಕ್ತ ಮತ್ತು ಲುಕೋಡರ್ಮ ಕಾಯಿಲೆಗಳನ್ನು ಗುಣಪಡಿಸಲುಆಯಾಸ, ವಿಸರ್ಪಿ, ಹೀಮೊಲಿಟಿಕ್ ಸ್ಟ್ರೆಪ್ಟೋಕೊಕಸ್ ಸಾಂಕ್ರಾಮಿಕ ಚರ್ಮ ರೋಗ ಗುಣಪಡಿಸಲು, ನೋವು ಕಡಿಮೆ ಮಾಡಲು.ದೇಹದ ಬಣ್ಣ ಕಾಪಾಡಿಕೊಳ್ಳಲು ಮತ್ತು ದೇಹಕ್ಕೆ ಹುರುಪು ನೀಡಲು ,ಸೊಂಟದ ತೀವ್ರವಾದ ನೋವು ,ಶ್ವಾಸನಾಳದ ಕಾಯಿಲೆ, ಕಟಿವಾಯು ಅಥವಾ ನೋವು, ಸ್ನಾಯುಗಳ ನೋವು ತೆಗೆದುಹಾಕಲು, ಹುಣ್ಣು, ಗಾಯಗಳು ಮತ್ತು ಮುಟ್ಟಿನ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಸರ್ವರೋಗಕ್ಕೆ ಪುಷ್ಪ ಕುಟಜ.ಸಹಕಾರಿ
ಬಳಸುವುದು ಹೇಗೆ:
ತೊಗಟೆ, ಹೂವು ಅಥವಾ ಬೀಜಗಳನ್ನು ಕಷಾಯ ಮಾಡಿ ಕುಡಿಯಬೇಕು ಇದರಿಂದ ದೇಹದ ಹುಳುಗಳನ್ನು ಉಚ್ಚಾಟಿಸಬಹುದು.
ತೊಗಟೆಯ ಪುಡಿಯನ್ನು ನೋವಿರುವ ಜಾಗಕ್ಕೆ ಪಟ್ಟಿ ಕಟ್ಟಬೇಕು.
ಹೂವುಗಳ ದ್ರಾವಣವನ್ನು ರಕ್ತ ಮತ್ತು ಲುಕೋಡರ್ಮ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ.
ಜೀರ್ಣಕಾರಕವಾಗಿ ಬಳಸಲಾಗುತ್ತದೆ
ಎಲೆಗಳ ದ್ರಾವಣ ಬಾಣಂತಿಯರಲ್ಲಿ ಹಾಲು ಸ್ರವಿಸುವಿಕೆಯನ್ನು ಹೆಚ್ಚಾಗುತ್ತದೆ ಹಾಗು ಮೇಲೆ ಹೇಳಿದ ಎಲ್ಲ ಸಮಸ್ಯೆಗಳಿಗೆ ಪುಷ್ಪ ಕುಟಿಜ ರಾಮಬಾಣ.