ಕರಾವಳಿ

ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ನಟನೆಗೆ ಪ್ರೋತ್ಸಾಹಿಸಬೇಕು : ಡಾ.ಸದಾನಂದ ಪೆರ್ಲ

Pinterest LinkedIn Tumblr

ಮಂಗಳೂರು : ರಂಗಭೂಮಿ ಹಾಗೂ ಹಿರಿ-ಕಿರುತೆರೆಯ ಖ್ಯಾತ ನಟಿ ಉಷಾ ಭಂಡಾರಿಯವರ ನೇತೃತ್ವದಲ್ಲಿ ಬೆಂಗಳೂರಿನ ಆಪ್ – ಆಕ್ಟಿಂಗ್ ಎಂಡ್ ಪರ್‌ಫಾರ್ಮಿಂಗ್ ಸಂಸ್ಥೆ ಮಂಗಳೂರಿನಲ್ಲಿ ನಡೆಸಿದ ಒಂದು ತಿಂಗಳ ಅಭಿನಯ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಗರದ ಡಾನ್‌ಬೋಸ್ಕೋ ಹಾಲ್‌ನಲ್ಲಿ ನಡೆಯಿತು.

ಇಂದು ಹೆತ್ತವರು ಮಕ್ಕಳನ್ನು ಡಾಕ್ಟರ್, ಇಂಜಿನಿಯರ್ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ, ಒಬ್ಬ ಒಳ್ಳೆ ನಟ, ನಿರ್ದೇಶಕ ಆಗಬೇಕೆಂದು ಯಾರೂ ಚಿಂತನೆ ಮಾಡುವುದಿಲ್ಲ. ಅವರಲ್ಲಿರುವ ಕಲೆಯನ್ನು ಗುರುತಿಸಿ ಉತ್ತಮ ನಟ, ನಟಿಯರನ್ನಾಗಿ ಮಾಡಿದರೆ ಚಿತ್ರರಂಗ ಹಾಗೂ ರಂಗಭೂಮಿಗೆ ಬಹುದೊಡ್ಡ ಆಸ್ತಿ ಯಾಗಲಿದ್ದಾರೆ ಎಂದು ಆಕಾಶವಾಣಿ ನಿರ್ವಾಹಕ ಡಾ. ಸದಾನಂದ ಪೆರ್ಲ ಹೇಳಿದರು.

ರಂಗ ಭೂಮಿ ಹಾಗೂ ಹಿರಿ-ಕಿರುತೆರೆಯ ಖ್ಯಾತ ನಟಿ ಉಷಾ ಭಂಡಾರಿಯವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದ ಒಂದು ತಿಂಗಳ ಅಭಿನಯ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಡಾ. ಸದಾನಂದ ಪೆರ್ಲ ಮುಖ್ಯ ಅತಿಥಿಯಾ ಗಿ ಭಾಗವಹಿಸಿ ಮಾತನಾಡಿದರು.

ಅಭಿನಯ ತರಬೇತಿ ಶಿಬಿರದಲ್ಲಿ ಉಷಾ ಭಂಡಾರಿಯವರಿಂದ 9 ವಿದ್ಯಾರ್ಥಿ ಗಳು ತರಬೇತಿ ಪಡೆದಿದ್ದು, ಇವರಿಂದ ವಾಚಿಕ, ಆಂಗಿಕ ಹಾಗೂ ಕಳರಿ ಪಯಟ್ ಪ್ರದರ್ಶನ ನಡೆಯಿತು.

ಒಂದು ತಿಂಗಳ ಅಭಿನಯ ತರಬೇತಿಯಲ್ಲಿ ತಾವು ಕಲಿತ ನೃತ್ಯ, ಮೂಕಾ ಭಿನಯ, ನಾಟಕವನ್ನು ಪ್ರದರ್ಶಿಸಿದ ನಟ-ನಟಿಯರು ಪ್ರೇಕ್ಷಕರ ಮನ ಗೆದ್ದರು.

ಈ ಸಂದರ್ಭದಲ್ಲಿ ನಟಿ ಉಷಾ ಭಂಡಾರಿ, ನಟ ರೂಪೇಶ್ ಶೆಟ್ಟಿ, ವಿ-೪ ಆಡಳಿತ ನಿರ್ದೇಶಕ ಲಕ್ಷ್ಮಣ್ ಕುಂದರ್, ಚಲನ ಚಿತ್ರ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ಮೊದಲಾದವರು ಉಪಸ್ಥಿತರಿದ್ದರು.

Comments are closed.