ಕರಾವಳಿ

ಹರಿದ್ವಾರದಲ್ಲಿ ಸುಧೀಂದ್ರ ಸ್ವಾಮೀಜಿ ಸನ್ಯಾಸ ದೀಕ್ಷಾ ಅಮೃತ ಮಹೋತ್ಸವ

Pinterest LinkedIn Tumblr

ಮಂಗಳೂರು : ಶ್ರೀ ಕಾಶಿ ಮಠ ಸಂಸ್ಥಾನದ ಪರಮ ಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಸನ್ಯಾಸ ದೀಕ್ಷಾ ಅಮೃತ ಮಹೋತ್ಸವವು ಹರಿದ್ವಾರದ ಶ್ರೀ ವ್ಯಾಸ ಮಂದಿರದಲ್ಲಿ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು.

ಈ ಪ್ರಯುಕ್ತ ದೇಶಾದ್ಯಂತ ಸುಮಾರು 5000ಕ್ಕೂ ಅಧಿಕ ಶ್ರೀ ಕಾಶಿ ಮಠದ ಅನುಯಾಯಿಗಳುಪಾಲ್ಗೊಂಡರು. ಮಂಗಳೂರು ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು1200 ಭಜಕರು ಮುಂಬೈಯಿಂದ 1000 ಭಜಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು

ಹರಿದ್ವಾರದ ಶ್ರೀ ವ್ಯಾಸ ಮಂದಿರದ ಆವರಣದಲ್ಲಿ ದಿನಾಂಕ 5ರಂದು ವಿಶೇಷ ಹೋಮ- ಹವನಗಳು , ಶ್ರೀ ವ್ಯಾಸ ಮಂದಿರದಲ್ಲಿ ವೇದವ್ಯಾಸ ದೇವರಿಗೆ ಹಾಗೂ ವೃನ್ದಾವನದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಮುಖ್ಯಪ್ರಾಣ ದೇವರಿಗೆ ವಿಶೇಷ ಒಂದು ಸಹಸ್ರ ಪವಮಾನ ಅಭಿಷೇಕ ಶ್ರೀಗಳವರ ದಿವ್ಯ ಹಸ್ತಗಳಿಂದ ನಡೆದವು.

ಬಳಿಕ ಸಾಯಂಕಾಲ ಸಭಾ ಕಾರ್ಯಕ್ರಮ ಶ್ರೀಗಳವರಿಂದ ಆಶೀರ್ವಚನ ನಡೆಯಿತು. ಖ್ಯಾತ ಅಂತಾರಾಷ್ಟ್ರೀಯ ಸ್ಯಾಕ್ಸಾಫೋನ್ ವಾದಕ ಕದ್ರಿ ಗೋಪಾಲನಾಥ್ ರವರಿಂದ ಸಂಗೀತ ಕಚೇರಿ ನಡೆಯಿತು.

ಸನ್ಯಾಸ ದೀಕ್ಷಾ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ರಾಜಸ್ಥಾನದಲ್ಲಿ ಅಮೃತ ಶಿಲೆಯಲ್ಲಿ ನಿರ್ಮಿಸಲಾದಶ್ರೀ ಸುಧೀಂದ್ರ ಶ್ರೀ ಗುರು ದರ್ಶನಂ -3( ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಭಾವ ಚಿತ್ರಗಳ ಪುಸ್ತಕ ) ಕಾಶಿಮಠಾಧೀಶರ ದಿವ್ಯ ಹಸ್ತಗಳಿಂದ ಬಿಡುಗಡೆಯಾಯಿತು.

ಈ ಪುಸ್ತಕವನ್ನು ಶ್ರೀಗಳವರಿಂದ ಪ್ರಾರಂಭಿಸಲ್ಪಟ್ಟಬಸ್ರುರು ಶ್ರೀ ಭುವನೇಂದ್ರ ಬಾಲಕಾಶ್ರಮದ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಮುದ್ರಿಸಲಾಗಿದೆ .ರಾಜಸ್ಥಾನದ ಜೈಪುರದಲ್ಲಿ ಅಮೃತ ಶಿಲೆಯಲ್ಲಿ ಬ್ರಹತ್ ಗಾತ್ರದ ನಿರ್ಮಿಸಿಲಾದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿ ಯವರ ವಿಗ್ರಹ ಪ್ರತಿಷ್ಠಾಪನೆ ಗಂಗಾ ತಟದಲ್ಲಿ ಇಂದು ನೆರವೇರಲಿರುವುದು

ಚಿತ್ರ : ಮಂಜು ನೀರೇಶ್ವಾಲ್ಯ

Comments are closed.