ಕರಾವಳಿ

ತುಳು ಭಾಷೆಯ ಬೆಳವಣಿಗೆಗೆ ಪ್ರತಿಯೊಬ್ಬರು ಶ್ರಮಿಸಬೇಕು -ಆಗ ಮಾತ್ರ ತುಳು ಭಾಷೆಯ ಉಳಿವು ಸಾಧ್ಯ :ಸುಹಾಸಿನಿ ಬಬ್ಬುಕಟ್ಟೆ

Pinterest LinkedIn Tumblr

ಮಂಗಳೂರು : ರಜೆಯ ದಿನಗಳಲ್ಲಿ ಈ ರೀತಿಯಾದ ಕಮ್ಮಟಗಳು ಮಕ್ಕಳಿಗೆ ಮತ್ತಷ್ಟು ಹುಮ್ಮಸ್ಸನ್ನು ಹೆಚ್ಚಿಸುತ್ತದೆ. ತುಳು ನಮ್ಮ ಊರಿನ ಭಾಷೆ ಅದರ ಬೆಳವಣಿಗೆಗಾಗಿ ಎಲ್ಲರೂ ಶ್ರಮಿಸಬೇಕು. ಇಂದಿನ ಈ ತುಳು ಕಮ್ಮಟ ಮಕ್ಕಳಲ್ಲಿ ತುಳು ಭಾಷೆಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸಲು ಸಹಾಯಕಾರಿಯಾಗಿದೆ ಎಂದರು. ತುಳುವಿನಲ್ಲಿ ನಿರರ್ಗಳವಾಗಿ ಎಲ್ಲರೂ ಮಾತನಾಡಬೇಕು ತುಳು ಭಾಷೆಯ ಉಳಿವು ಆಗ ಮಾತ್ರ ಸಾಧ್ಯ ಎಂದು ಸಮಾಜ ಸೇವಕಿ ಶ್ರೀಮತಿ ಸುಹಾಸಿನಿ ಬಬ್ಬುಕಟ್ಟೆ ಹೇಳಿದರು.

ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ರಂಗಚಲನ (ರಿ) ಮಂಗಳೂರು ಆಶ್ರಯದಲ್ಲಿ ತೊಕ್ಕೊಟ್ಟಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಬ್ಬುಕಟ್ಟೆಯಲ್ಲಿ ಆಯೋಜಿಸಲಾದ ತುಳು ಭಾಷಾ ಕಮ್ಮಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎ.ಸಿ.ಭಂಡಾರಿಯವರು ಸಭೆಯನ್ನು ಉದ್ದೇಶಿಸಿ ತುಳುವಿನ ಬೆಳವಣಿಗೆಗಾಗಿ ತುಳು ಅಕಾಡೆಮಿ ಬಹಳಷ್ಟು ಕಾರ್ಯಕ್ರಮಗಳನ್ನು ಮಾಡುತ್ತಲಿದೆ ಅದರಲ್ಲೂ ಶಾಲಾ ಕಾಲೇಜುಗಳಲ್ಲಿ ತುಳು ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದ್ದೇವೆ.

36 ಕಾಲೇಜುಗಳಲ್ಲಿ ತುಳು ಕಾರ್ಯಕ್ರಮ ನಡೆದಿದ್ದು ಮುಂದಿನ ದಿನಗಳಲ್ಲಿ ಮುಂದುವರಿಯಲಿದೆ. ವಿದ್ಯಾರ್ಥಿಗಳು ಮುಂದಿನ ಪೀಳಿಗೆ ಅವರಿಗೆ ನಮ್ಮ ತುಳು ಭಾಷೆ ಮಹತ್ವ ಬೆಳವಣಿಗೆಯ ಅರಿವುಅತ್ಯಗತ್ಯ. ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳೂ ಕೂಡ ತುಳು ವಿಚಾರ ಸಂಕಿರಣ, ಕಮ್ಮಟ, ಸ್ಪರ್ಧೆಗಳಲ್ಲಿ ಬಹಳ ಆಸಕ್ತಿಯಿಂದ ಭಾಗವಹಿಸುವುದು ಸಂತೋಷದ ವಿಷಯ.

ತುಳು ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು, ಅದಕ್ಕೆ ಬಹಳ ಶ್ರೇಷ್ಠವಾದ ಸ್ಥಾನಮಾನವಿದೆ. ಬೇರೆ ಭಾಷೆ ಕೂಡ ನಮ್ಮ ಭಾಷೆ ಎಲ್ಲಾ ಭಾಷೆಗಳಿಗೂ ಅದರದೇ ಆದ ಮಹತ್ವವಿದೆ. ಇಂಗ್ಲಿಷ್ ಭಾಷೆಗೆ ಯಾರೂ ವಿರೋಧಿಯಲ್ಲ ಆದರೆ ನಮ್ಮ ಸಂಸ್ಕೃತಿ ಭಾಷೆಯನ್ನು ಮರೆಯುವುದು ಬೇಡ ಎನ್ನುವುದು ನಮ್ಮೆಲ್ಲರ ಆಶಯವಾಗಿದೆ.

2018-19ನೇ ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು 41 ಶಾಲೆಗಳ್ಲಿ ತುಳುವನ್ನು ತೃತೀಯ ಭಾಷೆಯಾಗಿ ಕಲಿತು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ಒಟ್ಟು 618 ವಿದ್ಯಾರ್ಥಿಗಳಲ್ಲಿ ಎಲ್ಲರೂ ಪಾಸಾಗಿದ್ದು ಶೇ.100% ಫಲಿತಾಂಶ ದಾಖಲಿದ್ದಾರೆ ಈ ಪೈಕಿ 65 ಮಕ್ಕಳು ನೂರಕ್ಕೆ 100 ಅಂಕ ಪಡೆದು ದಾಖಲೆ ನಿರ್ಮಿಸಿರುವುದಾಗಿ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಬಬ್ಬುಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಚಂಚಲಾಕ್ಷಿ, ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ದುರ್ಗಾ ಮೆನನ್ ಕಾರ್ಯಕ್ರಮ ನಿರೂಪಿಸಿದರು,ರಂಗ ಚಲನದ ನಿರ್ದೇಶಕ ದಿನೇಶ್ ಅತ್ತಾವರ ದನ್ಯವಾದಗೈದರು

Comments are closed.