ಕರಾವಳಿ

ಕಾಶೀ ಮಠಾಧೀಶರಿಂದ ಇಂದು ವೀರ ವೆಂಕಟೇಶ ದೇವರಿಗೆ ಸ್ವರ್ಣ ಗರುಡ ಸಮರ್ಪಣೆ

Pinterest LinkedIn Tumblr

ಮಂಗಳೂರು : ಇಂದು ಗುರುವಾರ ದಿನಾಂಕ 16-05-2019 ಶ್ರೀ ವ್ಯಾಸ ಜಯಂತಿಯಂದು ಶ್ರೀ ವೆಂಕಟರಮಣ ದೇವಳದ ಪ್ರಧಾನ ಆರಾಧ್ಯ ದೇವರಾದ ಶ್ರೀ ವೀರ ವೆಂಕಟೇಶ್ ದೇವರ ಉತ್ಸವಾದಿ ಕಾರ್ಯಕ್ರಮಗಳಿಗಾಗಿ ನೂತನವಾಗಿ ಶ್ರೀ ದೇವರಿಗೆ ಸ್ವರ್ಣ ಗರುಡ ವಾಹನ ನಿರ್ಮಿಸಲಾಗಿದ್ದು ಇದರ ಸಮರ್ಪಣಾ ಕಾರ್ಯಕ್ರಮವು ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ನೆರವೇರಲಿರುವುದು.

ಗರುಡನ ಬಗ್ಗೆ :

ನಮ್ಮ ಸನಾತನ ಧರ್ಮದಲ್ಲಿ ಪ್ರತಿಯೊಂದು ಜೀವಿ ಹಾಗು ವಸ್ತುವಿನಲ್ಲಿಯು ದೈವತ್ವವನ್ನುಕಾಣುವುದು ಸಾಮಾನ್ಯವಾದುದು. ಗರುಡ ಒಂದು ಜಾತಿಯ ಪಕ್ಷಿ. ಪುರಾಣಗಳ ಪ್ರಕಾರ ಗರುಡ ಶ್ರೀಮಹಾವಿಷ್ಣುವಿನ ವಾಹನ ಎಂದೇ ಗುರುತಿಸಿಕೊಂಡಿದೆ. ಇಲ್ಲಿ ಗರುಡನು ಒಂದು ಕಾಲನ್ನು ಕೆಳಗೆ ಮಡಚಿ, ಮತ್ತೊಂದುಕಾಲಿನ ಮೇಲೆ ನಿಂತು, ಅಷ್ಟೇ ಅಲ್ಲ ಇಲ್ಲಿನ ವಿಗ್ರಹಕ್ಕೆ ಹಾವುಗಳು ಆಭರಣಗಳಾಗಿವೆ. ಗರುಡ ಪಕ್ಷಿಯ ಆಹಾರ ವಿಷಜಂತುಗಳಾಗಿದ್ದು , ಭೂಮಿಯಮೇಲಿರುವ ವಿಷಜಂತುಗಳನ್ನು ಸಂಹರಿಸಿ ನಮ್ಮ ರಕ್ಷಣೆಯನ್ನು ಮಾಡುತದೆ,

ಪುರಾಣಗಳ ಪ್ರಕಾರ ರಾವಣಾಸುರನು ಸೀತಾ ದೇವಿಯನ್ನು ಅಪಹರಿಸುತ್ತಿದ್ದ ಸಮಯದಲ್ಲಿ ಒಂದು ಗರುಡ ಪಕ್ಷಿಯುರಾವಣನ ಜೊತೆ ಹೋರಾಟ ಪ್ರಾರಂಭ ಮಾಡಿ, ಕೊನೆಗೆ ಆಹೋರಾಟದಲ್ಲಿ ಮರಣ ಹೊಂದುತ್ತದೆ. ಗರುಡ ಪಕ್ಷಿಯ ಕೊನೆಯ ಕ್ಷಣದಲ್ಲಿ ರಾಮ… ರಾಮ….ಎಂದು ಕರೆಯಿತಂತೆ. ಈ ವಿಷಯವನ್ನು ದೂರದೃಷ್ಟಿಯಿಂದ ನೋಡಿದ ರಾಮನು ಆ ಗರುಡ ಪಕ್ಷಿಗೆಮೋಕ್ಷವನ್ನು ಪ್ರಸಾದಿಸಿದ್ದಲ್ಲದೆ ಪ್ರಮುಖ ಪುಣ್ಯಕ್ಷೇತ್ರವಾಗಿಕಂಗೊಳಿಸಲಿ ಎಂದು ವರವನ್ನು ನೀಡಿದನಂತೆ. ಅಂದಿನಿಂದ ಗರುಡನಿಗೆ ಪೂಜಾ ಸ್ಥಾನದಲ್ಲಿರಿಸಿ ದೇವರೊಂದಿಗೆ ಪೂಜಿಸಲ್ಪಡುತದೆ. ಭಕ್ತಿ-ಭಾವ ಉಕ್ಕಿಸುವ ಗರುಡನ ವಿಗ್ರಹ . ಈ ದೇವಾಲಯದ ಅವರಣದಲ್ಲಿ ಭಕ್ತಿ-ಭಾವವನ್ನು ಹೆಚ್ಚಿಸುವ ಗರುಡನ ವಿಗ್ರಹವಿದೆ.

ಚಿತ್ರ : ಮಂಜು ನೀರೇಶ್ವಾಲ್ಯ

Comments are closed.