ಕರಾವಳಿ

ಎಪ್ರಿಲ್,28 :ಉಳ್ಳಾಲದ ನವೀಕೃತ ನಾಗಾಲಯದಲ್ಲಿ ಬಿಂಬ ಪುನಃ ಪ್ರತಿಷ್ಠೆ

Pinterest LinkedIn Tumblr

ಮಂಗಳೂರು : ಉಳ್ಳಾಲದ ಮುಖ್ಯರಸ್ತೆಯಲ್ಲಿರುವ ಶ್ರೀ ಶಾರದಾ ನಿಕೇತನದ‌ಆವರಣದಲ್ಲಿರುವ ನಾಗಬ್ರಹ್ಮಾದಿ ಪಂಚ ದೈವಿಕ ಸನ್ನಿಧಿಯನ್ನು ಶಿಲಾಮಯವಾಗಿ ನವೀಕರಿಸಿ ಬಿಂಬ ಪುನಃ ಪ್ರತಿಷ್ಠೆಯನ್ನು‌ ಎಪ್ರಿಲ್ 28ರಂದು ನಡೆಸಲಾಗುವುದು.

ಪೂರ್ವಜರಿಂದ ಆರಾಧಿಸಿಕೊಂಡು ಬಂದಿರುವ ಈ ಸನ್ನಿಧಿಯಲ್ಲಿ ನಾಗಬ್ರಹ್ಮ, ನಂದಿಕೋಣ, ಕ್ಷೇತ್ರಪಾಲ, ರಕ್ತೇಶ್ವರೀ ಗುಡಿಗಳನ್ನು ನಿರ್ಮಿಸಲಾಗಿದ್ದು. ರಾಜ್ಯಧಾರ್ಮಿಕ ಪರಿಷತ್ತಿನ ಆಗಮ ಪಂಡಿತರಾದ ಬ್ರ| ಶ್ರೀ ಕುತ್ಯಾರುಕೇಂಜ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ನವೀಕೃತ ನಾಗಾಲಯದ ನಮರ್ಪಣೆ, ಬಿಂಬ ಪುನಃ ಪ್ರತಿಷ್ಠೆ- ಬ್ರಹ್ಮಕಲಶೋತ್ಸವ ಹಾಗೂ ಆಶ್ಲೇಷಾ ಬಲಿ ಇತ್ಯಾದಿ ಕಾರ್ಯಕ್ರಮಜರಗಲಿರುವುದು.

ಅಲ್ಲದೆ ನಾಗಪಾತ್ರಿ, ವೇದಮೂರ್ತಿ ಬೆಳ್ಳರ್ಪಾಡಿ ರಮಾನಂದ ಭಟ್ಟರಿಂದ ನಾಗದರ್ಶನವಿದ್ದು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶ್ರೀ ಶಾರದಾ ಸೇವಾ ಟ್ರಸ್ಟ್ ಮತ್ತು ಸಾರ್ವಜನಿಕ ನವರಾತ್ರಿ ಶ್ರೀ ಶಾರದೋತ್ಸವ ಸಮಿತಿಯು ಈ ಪುಣ್ಯಕಾರ್ಯದ ಯಶಸ್ವಿಗಾಗಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಿದ್ದು ನಾಗಾಲಯದ ನಿರ್ಮಾಣಕಾರ್ಯಕ್ಕಾಗಿ ಸಾರ್ವಜನಿಕರ ಸಹಕಾರವನ್ನು ಯಾಚಿಸಿದ್ದಾರೆ.

ಎ. 27ರಂದುಧಾರ್ಮಿಕ ವಿಧಿ ವಿಧಾನಗಳು ಜರಗಲಿದ್ದು ಮರುದಿನ ತಾ. 28ರವಿವಾರ ಬೆಳಿಗ್ಗೆ 9.05ಕ್ಕೆ 108 ಕಲಶ ಸಹಿತ ಬ್ರಹ್ಮಕಲಶ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ನಡೆಯಲಿರುವುದೆಂದು ಜೀರ್ಣೊದ್ಧಾರ ಸಮಿತಿಯ ಗೌರವಾಧ್ಯಕ್ಷ ಶ್ರೀಕರ ಕಿಣಿ, ಅಧ್ಯಕ್ಷಯು. ಎಸ್. ಪ್ರಕಾಶ್, ಕಾರ್ಯಾಧ್ಯಕ್ಷ ಸುದೇಶ್ ಮರೋಳಿ, ಪ್ರಧಾನ ಕಾರ್ಯದರ್ಶಿ ಭರತ್‌ಕುಮಾರ್ ಹಾಗೂ ಕೋಶಾಧಿಕಾರಿ ವಿಜಯ ಉಳ್ಳಾಲ್ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.

Comments are closed.