ಕರಾವಳಿ

ಸಣ್ಣ ಮಕ್ಕಳ ನಿದ್ದೆ ಸಂಬಂಧಿತ ರೋಗಗಳನ್ನು ತಡೆಯಲು ಈ ರೀತಿ ಮಾಡಿ…

Pinterest LinkedIn Tumblr

ಮಗು ಹುಟ್ಟಿದ ಒಂದು ವರ್ಷದವರೆಗೆ ತಂದೆ-ತಾಯಿಯರು ತಮ್ಮ ಕೋಣೆಯಲ್ಲೇ ಮಲಗಿಸಿಕೊಳ್ಳುವುದರಿಂದ ಮಗುವಿನ ನಿದ್ದೆ ಸಂಬಂಧಿತ ರೋಗಗಳನ್ನು ತಡೆಯಬಹುದು ಎಂದು ಹೊಸ ಅಧ್ಯಯನವೊಂದು ಸೂಚಿಸಿದೆ.

ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ನಡೆಸಿದ ಅಧ್ಯಯನದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಮಗು ಹುಟ್ಟಿದ ನಂತರ ಒಂದು ವರ್ಷದವರೆಗೆ ಸೋಫಾ, ಮಂಚ ಅಥವಾ ಮೆತ್ತನೆಯ ಕೂರ್ಚಿ ಮೇಲೆ ಮಲಗಿಸಬಾರದು. ಇದರ ಜತೆಗೆ ಒಂಟಿಯಾಗಿ ಅಥವಾ ಬೇರೆಯವರ ಜತೆಗೂ ಮಲಗಿಸಬಾರದು. ಇದು ಶಿಶುಗಳಿಗೆ ಅತ್ಯಂತ ಅಪಾಯಕಾರಿ.

ಕೆಲವರು ತೊಟ್ಟಿಲಿನಲ್ಲಿ ಆಟಿಕೆ ಹಾಗೂ ದಿಂಬುಗಳನ್ನು ಬಳಕೆ ಮಾಡುತ್ತಾರೆ. ಇದನ್ನು ಬಳಕೆ ಮಾಡದಿದ್ದರೆ ಉತ್ತಮ ಎಂದು ಅಧ್ಯಯನ ತಂಡ ಸೂಚಿಸಿದೆ. ಹೀಗಾಗಿ ಮಗು ಹುಟ್ಟಿದ ನಂತರ ಕನಿಷ್ಠ ಆರು ವರ್ಷ ತೊಟ್ಟಿಲಲ್ಲಿ ಮಲಗಿಸಬೇಕು ಎಂದು ಅಧ್ಯಯನ ತಂಡ ಸೂಚಿಸಿದೆ.

Comments are closed.