ಕರಾವಳಿ

ಚೆಕ್ ಪೋಸ್ಟ್’ನಲ್ಲಿ ಖುದ್ದು ವಾಹನ ತಪಾಸಣೆ ನಡೆಸಿದ ಉಡುಪಿ ಜಿಲ್ಲಾಧಿಕಾರಿ!

Pinterest LinkedIn Tumblr

ಉಡುಪಿ: ಲೋಕಸಭಾ ಚುನಾವಣೆ ಹಿನ್ನೆಲೆ ಮಹಿಳಾಧಿಕಾರಿಗಳಾದ ಉಡುಪಿ ಡಿಸಿ ಮತ್ತು ಉಡುಪಿ ಎಸ್ಪಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ರಿಕ್ಷಾ ಸ್ಟಾಂಡ್ ನಲ್ಲಿ ಜಿಲ್ಲಾಧಿಕಾರಿಯಿಂದ ಮತದಾನ ಅರಿವು
ಅಮಾಸೆಬೈಲು ಗೆ ಸೋಮವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ , ಸಮೀಪದ ರಿಕ್ಷಾ ಸ್ಟ್ಯಾಂಡ್ ನಲ್ಲಿನ ರಿಕ್ಷಾ ಚಾಲಕರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಷಾ ಜೇಮ್ಸ್ ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿಯಿಂದ ವಾಹನ ತಪಾಸಣೆ
ಉಡುಪಿ – ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಸಂಬಂದಿಸಿದಂತೆ , ಅಕ್ರಮ ತಡೆಗಟ್ಟಲು ಶಿರೂರು ನಲ್ಲಿ ಸ್ಥಾಪಿಸಿರುವ ಚೆಕ್ ಪೋಸ್ಟ್ ಗೆ ಸೋಮವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ , ಖುದ್ದು ವಾಹನಗಳ ತಪಾಸಣೆ ನಡೆಸಿದರು.

ಜಿಲ್ಲಾಧಿಕಾರಿಯಿಂದ ಎಎನ್ಎಫ್ ಕ್ಯಾಂಪ್ ಗೆ ಭೇಟಿ
ಜಡ್ಡಿನಗುಡ್ಡೆಯ ಎ.ಎನ್.ಎಫ್ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ , ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿಯಿಂದ ವೋಟರ್ ಸ್ಲಿಪ್ ವಿತರಣೆ
ಕುಂದಾಪುರ ತಾಲೂಕಿನ ಸೂಕ್ಷ್ಮ ಮತಗಟ್ಟೆಗಳಿಗೆ ಸೋಮವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ , ರಟ್ಟಾಡಿಯಲ್ಲಿ ಸಾರ್ವಜನಿಕರಿಗೆ ವೋಟರ್ ಸ್ಲಿಪ್ ಗಳನ್ನು ವಿತರಿಸಿದರು.

ಈ ಎಲ್ಲಾ ಕಾರ್ಯಕ್ರಮ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಷಾ ಜೇಮ್ಸ್ ಉಪಸ್ಥಿತರಿದ್ದರು.

Comments are closed.