ಕರಾವಳಿ

ಅಲಸಂಡೆ ಕಾಳಿನಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ತಿಳಿಯಿರಿ..!

Pinterest LinkedIn Tumblr

ಉತ್ತಮ ಪ್ರಮಾಣದ ಪೌಷ್ಠಿಕಾಂಶಗಳನ್ನು ಹೊಂದಿರುವ ಅಲಸಂಡೆ ಕಾಳನ್ನು ನಿತ್ಯದ ಆಹಾರದಲ್ಲಿ ಸೇರಿಸಿಕೊಂಡರೆ, ಆರೋಗ್ಯ ಸಮಸ್ಯೆಯಿಂದ ದೂರ ಉಳಿಯಬಹುದು.

ಹೃದಯದ ಆರೋಗ್ಯಕ್ಕೆ ಉತ್ತಮ: ಪೊಟ್ಯಾಶಿಯಂ ಹೆಚ್ಚಿರುವ ಈ ಬೀಜ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಕಡಿಮೆ ಫ್ಯಾಟ್ ಮತ್ತು ಕಡಿಮೆ ಕ್ಯಾಲರಿಯ ಈ ಆಹಾರ ಕೊಲೆಸ್ಟ್ರಾಲನ್ನು ನಿಯಂತ್ರಿಸುತ್ತದೆ.

ಜೀರ್ಣಕ್ರಿಯೆಗೆ ಸಹಾಯಕ: ಅಲಸಂಡೆ ಬೀಜದಲ್ಲಿ ಉತ್ತಮ ಪ್ರಮಾಣದ ಡಯೆಟ್ರಿ ಫೈಬರ್ ಇದೆ. ಇದು ಜೀರ್ಣಾಂಗ ವ್ಯವಸ್ಥೆ ಆರೋಗ್ಯವಾಗಿರಲು ಅತ್ಯಾವಶ್ಯಕ. ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಿ, ದೇಹವನ್ನು ಸ್ವಚ್ಛವಾಗಿಡಲು ಅಲಸಂಡೆ ಬೀಜ ಸಹಾಯ ಮಾಡುತ್ತದೆ.

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ: ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಅಲಸಂಡೆಯಲ್ಲಿರುವ ಪೊಟ್ಯಾಶಿಯಂ ಸಹಾಯಮಾಡುತ್ತದೆ. ಹಾಗಾಗಿ ರಕ್ತದೊತ್ತಡ ಸಮಸ್ಯೆ ಇರುವವರು ನಿಮ್ಮ ಆಹಾರದಲ್ಲಿ ಅಲಸಂಡೆ ಬೀಜವನ್ನು ಸೇರಿಸಿಕೊಂಡರೆ ಉತ್ತಮ.

ಅನೆಮಿಯಾವನ್ನು ತಡೆಯುತ್ತದೆ: ಅಲಸಂಡೆ ಬೀಜದಲ್ಲಿ ಕಬ್ಬಿಣಾಂಶ ಸಮೃದ್ಧವಾಗಿದೆ. ಈ ಮೂಲಕ ಕೆಂಪು ರಕ್ತ ಕಣಗಳನ್ನು ಹೆಚ್ಚಿಸಿ, ಹಿಮೊಗ್ಲೊಬಿನ್ ಪ್ರಮಾಣವನ್ನು ಕೂಡ ಹೆಚ್ಚಿಸುತ್ತದೆ. ಇದರಿಂದ ಅನೆಮಿಯಾ ಸಮಸ್ಯೆಯನ್ನು ತಡೆಯಬಹುದು.

ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ: ಟೈಪ್ 1 ಡಯಾಬಿಟಿಸ್ ಇರುವವರು ಬೇಯಿಸಿದ ಅಲಸಂಡೆ ಬೀಜವನ್ನು ಸೇವಿಸುವುದರಿಂದ ಸಡನ್ ಆಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುವುದನ್ನು ತಡೆಯುತ್ತದೆ. ಜೊತೆಗೆ ಇನ್ಸುಲಿನ್ ಪ್ರಮಾಣ ಹೆಚ್ಚಿಸಲು ಸಹಾಯ ಮಾಡುತ್ತದೆ.

ಗರ್ಭಿಣಿಯರಿಗೂ ಉತ್ತಮ ಅಲಸಂಡೆ : ಅಲಸಂಡೆಯಲ್ಲಿರುವ ಫೈಬರ್, ಪ್ರೊಟೀನ್, ಕಬ್ಬಿಣಾಂಶ, ಬಿ೯ ವಿಟಮಿನ್ ಎಲ್ಲವೂ ಗರ್ಭಿಣಿ ಮಹಿಳೆಯರಿಗೆ ಉತ್ತಮ. ಇದರಿಂದ ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಉಂಟಾಗುವ ಸುಸ್ತು, ಅನೆಮಿಯಾ ಸಮಸ್ಯೆಯನ್ನು ತಡೆಯಬಹುದು.

Comments are closed.