ಕರಾವಳಿ

ಮರಳಿಲ್ಲದೇ ಸಾಲ ಕಟ್ಟಲಾಗುತ್ತಿಲ್ಲ; ದಯಾ ಮರಣ ಕೋರಿ ಡಿಸಿಗೆ ಮನವಿ ಮಾಡಿದ ವ್ಯಕ್ತಿ

Pinterest LinkedIn Tumblr

ಉಡುಪಿ: ಬದುಕಿಗೆ ಆಧಾರವಾಗಿದ್ದ ಮರಳುಗಾರಿಕೆ ನಿಂತಿರುವುದರಿಂದ ಜೀವನವೇ ಬೇಡಾಅಗಿದೆ. ಆದ್ದರಿಂದ ಕುಟುಂಬ ಸಮೇತ ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಕಟಪಾಡಿ ಲಾರಿ ಮಾಲಕರ ಸಂಘದ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾಡಳಿತ ನಿರ್ಲಕ್ಷ್ಯ ಧೋರಣೆಯಿಂದ ಕಳೆದ 4 ವರ್ಷಗಳಿಂದ ಮರಳುಗಾರಿಕೆ ಸ್ಥಗಿತವಾಗಿದೆ. ಜಿಲ್ಲೆಯ ಕೆಲವು ಜನಪ್ರತಿನಿಧಿಗಳು ಕೃತಕ ಮರಳಿನ ಅಭಾವ ಸೃಷ್ಟಿಸಿದ್ದಾರೆ. ಬ್ಯಾಂಕ್‌ ಸಾಲ ಮಾಡಿ ಟಿಪ್ಪರ್‌ ಲಾರಿಗಳನ್ನು ಖರೀದಿಸಿದ್ದು, ತಿಂಗಳಿಗೆ 30 ಸಾವಿರ ರೂ. ಸಾಲ ಪಾವತಿಸಬೇಕಿದೆ. ಇದೀಗ ಕೆಲಸವಿಲ್ಲದೆ ಸಾಲ ಮರುಪಾವತಿಯೂ ಅಸಾಧ್ಯವಾಗಿದೆ. ಏನು ಮಾಡಬೇಕು ಎಂದೇ ದಿಕ್ಕು ತೋಚದಂತಾಗಿದ್ದು, ದಯಾಮರಣ ನೀಡಲು ಮನವಿ ಮಾಡಲಾಗಿದೆೆ ಎಂದರು.

ಮರಳು ಹೋರಾಟ ಸಮಿತಿ ಕಾರ್ಯದರ್ಶಿ ಸತ್ಯರಾಜ್‌ ಬಿರ್ತಿ, ಸಮರ್ಥ ಕಟಪಾಡಿ, ಅನ್ಸರ್‌ ಅಹಮದ್‌ ಉಪಸ್ಥಿತರಿದ್ದರು.

Comments are closed.