ಕರಾವಳಿ

ವಾಲ್‌ನಟ್, ಗ್ರೀನ್ ಟೀ ಸೇವನೆ ಅಲರ್ಜಿ ಸಮಸ್ಯೆಗೆ ಅತೀ ಪ್ರಮುಖ ಪರಿಹಾರ

Pinterest LinkedIn Tumblr

ಅಲರ್ಜಿ ಸಮಸ್ಯೆಯನ್ನು ಎದುರಿಸುವವರಿಗೆ ಲೆಕ್ಕವಿಲ್ಲ. ಪ್ರತಿ ದಿನವೂ ಈ ಅಲರ್ಜಿ ಸಮಸ್ಯೆ ಅಂಥವರನ್ನು ಬಿಟ್ಟು ಕದಲುವುದಿಲ್ಲ. ಸ್ವಲ್ಪ ಜಾಸ್ತಿ ಧೂಳಿರುವ ಪ್ರದೇಶಕ್ಕೆ ಹೋದರೆ ಅಲರ್ಜಿ!
ಸಾಮಾನ್ಯವಾಗಿ ಹಲವರಲ್ಲಿ ಹಲವಾರು ರೀತಿಯ ಅಲರ್ಜಿಗಳು ಕಂಡುಬರುತ್ತಿದೆ. ಅದು ಚರ್ಮದ ಅಲರ್ಜಿ ಇರಬಹುದು, ಶೀತ, ನೆಗಡಿ ಆಗುವಂತದ್ದು, ದಮ್ಮು, ಕೆಮ್ಮು, ಅಸ್ತಮ ಬರುವಂತದ್ದು, ಕೆಲವೊಂದು ಬಾರಿ ಆಹಾರದ ಅಲರ್ಜಿ- ಯಾವೊಂದು ಆಹಾರ ಸೇವಿಸಿದರೆ ಮೈ ಮೇಲೆ ಗುಳ್ಳೆ ಆಗುವಂತದ್ದು ಇಂತವುಗಳು ಕಂಡುಬರುತ್ತಿದೆ.

ಹಾಗಾದ್ರೆ ಅಲರ್ಜಿ ಹೋಗಲು ಏನು ಮಾಡ್ಬೇಕು..?
ಪ್ರತಿದಿನದ ನಿಮ್ಮ ಆಹಾರದಲ್ಲಿ ಅರಿಶಿಣ ಇರಲೇಬೇಕು. ಅರಿಶಿಣ ಅಲರ್ಜಿಕಾರಕವನ್ನು ನಾಶಮಾಡುವ ಸಾಮರ್ಥ್ಯ ಹೊಂದಿದೆ.
ಅಲರ್ಜಿ ಉಂಟಾಗಿದ್ದರೆ ದೊಡ್ಡಪತ್ರೆ ಸೊಪ್ಪಿನ ರಸವನ್ನು ಮಾಡಿಕೊಂಡು ಎರಡು ಚಮಚ ಆಗಾಗ ಸೇವಿಸುತ್ತಿರಿ.
ವಾಲ್‌ನಟ್ ಸೇವನೆಯಿಂದಲೂ ಅಲರ್ಜಿಯನ್ನು ದೂರಮಾಡಬಹುದು.
ಬ್ರುಕೋಲಿ ಮತ್ತು ಕ್ಯಾಬೇಜ್ ಸೇವನೆಯಿಂದ ಅಲರ್ಜಿ ಸಮಸ್ಯೆ ಪರಿಹಾರವಾಗುತ್ತದೆ.
ಗ್ರೀನ್ ಟೀ ಸೇವನೆಯಂತೂ ಅಲರ್ಜಿ ಸಮಸ್ಯೆಗೆ ಅತೀ ಪ್ರಮುಖ ಪರಿಹಾರವೆನ್ನಿಸಿದೆ.
ಕಿವಿ ಹಣ್ಣು ಮತ್ತು ಕಿತ್ತಳೆ ಹಣ್ಣನ್ನು ಸೇವಿಸುವುದರಿಂದಲೂ ಅಲರ್ಜಿ ಸಮಸ್ಯೆ ಪರಿಹಾರವಾಗುತ್ತದೆ.
ನಿಮ್ಮ ಆಹಾರದಲ್ಲಿ ಜೇನುತುಪ್ಪವನ್ನೂ ಬಳಸಿ.
ಸ್ವಲ್ಪವಾದರೂ ಸೂರ್ಯನ ಬೆಳಕಿಗೆ ಮೈಯೊಡ್ಡಿ. ಸೂರ್ಯನ ಬೆಳಕಿನಲ್ಲಿರುವ ವಿಟಾಮಿನ್ ಡಿ ಅಂಶ ಚರ್ಮದ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಹೊಂದಿದೆ.
ಅಲರ್ಜಿಯಾಗಿರುವ ಸಂದರ್ಭದಲ್ಲಿ ನೀವು ತೊಡುತ್ತಿರುವ ಬಟ್ಟೆ ಸ್ವಚ್ಛವಾಗಿದೆಯೇ, ಮಲಗುವ ಹಾಸಿಗೆ ಸ್ವಚ್ಛವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಆ ಸಂದರ್ಭದಲ್ಲಿ ಹೂವು ಅಥವಾ ಇನ್ಯಾವುದೇ ವಸ್ತುವಿನ ವಾಸನೆಯನ್ನು ಆಘ್ರಾಣಿಸುವುದಕ್ಕೆ ಹೋಗಬೇಡಿ.

ಸ್ನಾನ ಮಾಡುವ ನೀರು ಆದಷ್ಟು ಉಗುರು ಬೆಚ್ಚಗಿರಲಿ.
ಅಲರ್ಜಿಯಾದ ಸಂದರ್ಭದಲ್ಲಿ ನಿಮ್ಮ ಉಗುರಿನಿಂದ ಅಲರ್ಜಿಯ ಬೊಬ್ಬೆಗಳನ್ನು ಉಜ್ಜಿಕೊಳ್ಳದಿರಿ. ಇದರಿಂದ ಸಮಸ್ಯೆ ಉಲ್ಬಣಿಸುತ್ತದೆ. ಉಗುರಿನಲ್ಲಿರುವ ನಂಜು ಮತ್ತಷ್ಟು ಸಮಸ್ಯೆಯನ್ನು ಸೃಷ್ಟಿಸುತ್ತದೆ.
ಅಲರ್ಜಿಯಲ್ಲಿ ಹಲವು ವಿಧಗಳಿವೆ. ನಿಮಗೆ ಏತಕ್ಕಾಗಿ ಅಲರ್ಜಿ ಸಮಸ್ಯೆ ಆರಂಭವಾಗಿದೆ ಎಂಬುದನ್ನು ಖಚಿತಪಡಿಸಿಕೊಂಡು ಸೂಕ್ತ ಪರಿಹಾರೋಪಾಯ ಕಂಡುಕೊಳ್ಳಿ.

Comments are closed.