ಕರಾವಳಿ

ಮೆದುಳಿನ ಆರೋಗ್ಯ ಕೆಟ್ಟರೆ ನಮ್ಮ ದೇಹಕ್ಕೆ ಹಲವು ರೀತಿಯ ಕಾಯಿಲೆ ಕಟ್ಟಿಟ ಬುತ್ತಿ

Pinterest LinkedIn Tumblr

ಮೆದುಳು ಮಾನವನ ಅತ್ಯಂತ ಪ್ರಮುಖವಾದ ಅಂಗ. ಮಾನವ ಎಲ್ಲಾ ಮಾನಸಿಕ ಹಾಗೂ ದೈಹಿಕ ಚಟುವಟಿಕೆಗಳು ನಡೆಯುವುದು ಮೆದುಳಿನಿಂದಲೇ..ಮೆದುಳಿನ ಆರೋಗ್ಯ ಕೆಟ್ಟರೆ ಅನೇಕ ರೀತಿಯ ಕಾಯಿಲೆಗಳನ್ನು ನಾವು ಎದುರಿಸಬೇಕಾಗುತ್ತದೆ. ಅಲ್ಲದೆ ಇದರಿಂದ ಮಾನಸಿಕ ಸ್ವಸ್ಥತೆ ಕೂಡ ಹದಗೆಡುತ್ತದೆ.

ನಾವು ನಮ್ಮ ಮೆದುಳು ಚುರುಕಾಗಿ ಕೆಲಸ ಮಾಡಲು, ಬುದ್ಧಿ ಶಕ್ತಿ ಹೆಚ್ಚಲು, ನೆನಪಿನ ಶಕ್ತಿ ಹೆಚ್ಚಲು ಹಲವು ಪ್ರಯತ್ನ ಮಾಡುತ್ತೇವೆ. ಆದರೆ ನಮ್ಮ ಕೆಲವು ಅಭ್ಯಾಸಗಳು, ಪದ್ದತಿಗಳು, ಜೀವನ ಶೈಲಿ ನಮ್ಮ ಮೆದುಳಿನ ಆರೋಗ್ಯಕ್ಕೆ ಮಾರಕವಾಗಿದೆ ಎಂಬುದನ್ನೂ ತಿಳಿದುಕೊಳ್ಳುವುದು ಸೂಕ್ತ.

ಹಾಗಾದರೆ ಯಾವ ಅಭ್ಯಾಸಗಳು ನಮ್ಮ ಮೆದುಳಿನ ಆರೋಗ್ಯ ಹಾಳುಮಾದುತ್ತವೆ ತಿಳಿದುಕೊಳ್ಳೋಣ…

1. ಬೆಳಗ್ಗೆ ತಿಂಡಿ ತಿನ್ನದೇ ಇರುವುದು.
ನಮ್ಮ ಮೆದುಳು ನಾವು ನಿದ್ರಿಸುವಾಗ ವಿಶ್ರಾತಿಯನ್ನು ಪಡೆದುಕೊಳ್ಳುತ್ತದೆ. ಬೆಳ್ಳಗ್ಗೆ ಎದ್ದಮೇಲೆ ಅದು ಕ್ರಿಯಾಶೀಲವಾಗುತ್ತದೆ. ಆ ಸಮಯದಲ್ಲಿ ಮೆದುಳಿನ ಆರೋಗ್ಯ ದೃಷ್ಟಿಯಿಂದ ನಾವು ಏನನ್ನಾದರೂ ಆಹಾರ ಸೇವಿಸಲೀ ಬೇಕು. ಹಣ್ಣಿನ ರಸ, ನೀರು ಹೀಗೆ ಏನನ್ನಾದರೂ ಮೊದಲು ನಾವು ಸೇವಿಸಬೇಕು. ನಂತರ ತಿಂಡಿ ತಿನ್ನಬೇಕು. ಇಲ್ಲವಾದರೆ ಮೆದುಳು ಚೆನ್ನಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ.

2. ಸರಿಯಾಗಿ ನಿದ್ರೆ ಮಾಡದೇ ಇರುವುದು.
ಪ್ರತಿಯೊಬ್ಬ ವ್ಯಕ್ತಿಗೂ ಅವನ ವಯ್ಯಸ್ಸಿಗೆ ಅನುಗುಣವಾಗಿ ಇಂತಿಷ್ಟು ಗಂಟೆ ನಿದ್ರಿಸಬೀಕಾಗುತ್ತದೆ. ಅದರಲ್ಲೂ ಚಿಕ್ಕ ಮಕ್ಕಳು ಹೆಚ್ಚು ನಿದ್ರಿಸಬೇಕು. ಮಕ್ಕಳು ಕನಿಷ್ಠ 8 ರಿಂದ 10 ಗಂಟೆಗಳ ಕಾಲ ನಿದ್ರಿಸಬೇಕು. ಇನ್ನು ವಯಸ್ಕರು 6 ರಿಂದ 8 ಗಂಟೆಗಳ ಕಾಲ ನಿದ್ರಿಸಬೇಕು. ಆದರೆ ಇಂದಿನ ದಿನಗಳಲ್ಲಿ ಕೆಲಸದ ಒತ್ತಡದಿಂದ, ವಿಧ್ಯಾಭ್ಯಾಸದ ಕಾರಣ ಅಥವಾ ಟೀವಿ, ಫೋನ್, ಸಾಮಾಜಿಕ ಮಾಧ್ಯಮಗಳಿಗೆ ಮಾರು ಹೋದ ಕಾರಣ ರಾತ್ರಿಯಲ್ಲ ನಿದ್ರಿಸುವುದಿಲ್ಲ. ಇದು ಮೆದುಳಿನ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಈ ಮೂಲಕ ಹಲವು ದೈಹಿಕ ಹಾಗೂ ಮಾನಸಿಕ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಹಾಗೆ ಅಗ್ಯತ್ಯಕ್ಕಿಂತ ಹೆಚ್ಚು ನಿದ್ದೆ ಮಾಡುವುದು ಒಳ್ಳೆಯದಲ್ಲ.

3.ಅತಿಯಾದ ಸಕ್ಕರೆ ಸೇವನೆ.
ಅತಿಯಾದ ಸಕ್ಕರೆ ಸೇವನೆ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದಷ್ಟು ಕಡಿಮೆ ಸಕ್ಕರೆಯನ್ನು ಮತ್ತು ಕಡಿಮೆ ಸಿಹಿ ಪದಾರ್ಥಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಬೇಕು.

4. ಬೆಳಗ್ಗಿನ ಸಮಯದಲ್ಲಿ ನಿದ್ರೆ ಮಾಡುವುದು.
ನಮ್ಮ ದೇಹವನ್ನು ಬೆಳಗ್ಗಿನ ಸಮಯದಲ್ಲಿ ಕೆಲಸಮಾಡಲು, ರಾತ್ರಿ ಸಮಯ ವಿಶ್ರಾಂತಿ ತೆಗೆದುಕೊಳ್ಳಲು ಅನುಗುಣವಾಗಿ ಸೃಷ್ಟಿಸಲಾಗಿದೆ. ಇದಕ್ಕೆ ವಿರುದ್ಧವಾಗಿ ಬೆಳಗ್ಗಿನ ಸಮಯ ಹೆಚ್ಚು ನಿದ್ರೆ ಮಾಡುವುದರಿಂದ ಮೆದುಳಿಗೆ ಹಾನಿಯುಂಟುಮಾಡುತ್ತದೆ.

5. ಊಟವನ್ನು ಸರಿಯಾದ ಪದ್ಧತಿಯಲ್ಲಿ ಮಾಡದೇ ಇರುವುದು.
ಟೀವಿ ನೋಡಿಕೊಂಡು ಊಟ ಮಾಡುವುದು, ಊಟಮಾಡುವಾಗ ಮಾತನಾಡುವುದು, ಕೈಯಲ್ಲಿ ಫೋನ್ ಹಿಡಿದು ಊಟ ಮಾಡುವುದು ಈ ರೀತಿ ಊಟದ ಸಮಯದಲ್ಲಿ ನಮ್ಮ ಗಮನವನ್ನು ಬೇರೆ ಕಡೆ ಹರಿ ಬಿಡುವುದು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಲ್ಲದೆ ಇದು ಮಾರಕ ರೋಗಗಳಿಗೂ ಕಾರಣವಾಗಿದೆ. ಆದ್ದರಿಂದ ಊಟ ಮಾಡುವಾಗ ನಮ್ಮ ಗಮನವೇನಿದ್ದರು ಊಟದ ಕಡೆ ಮಾತ್ರವಿರಬೇಕು.

6. ಮಲಗುವ ಸಮಯದಲ್ಲಿ ಕಡಿಮೆ ಗಾಳಿಯ ಸೇವನೆ.
ನಾವು ಸೇವಿಸುವ ಆಕ್ಸಿಜೆನ್ ನಮ್ಮ ಮೆದುಳಿನ ವರೆಗೂ ಸಾಗುತ್ತದೆ. ನಾವು ಮಲಗಿರುವಾಗ ಹೆಚ್ಚು ಶುದ್ಧ ಗಾಳಿಯನ್ನು ಸೇವಿಸಬೇಕು. ಹಾಗಾಗಿ ಮಲಗುವ ಮುನ್ನ ನಮ್ಮ ಕೋಣೆ ಶುಚಿಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಮುಖಕ್ಕೆ ಹೊದಿಕೆಯನ್ನು ಮುಚ್ಚಿಕೊಂಡು ಮಲಗುವ ಅಭ್ಯಾಸ ಒಳ್ಳೆಯದಲ್ಲ.

Comments are closed.