ಕರಾವಳಿ

ಮಂಗಳಮುಖಿಯರ ಶವಸಂಸ್ಕಾರ ಮೊದಲು ಶವಕ್ಕೆ ಚಪ್ಪಲಿಯಿಂದ ಹೊಡೆಯುತ್ತಾರೆ ಯಾಕೆ..?

Pinterest LinkedIn Tumblr

ನೀವು ಇರುವ ಊರು ಅಥವಾ ನಿಮ್ಮ ಏರಿಯಾದಲ್ಲಿ, ಯಾರಾದರೂ ತೀರಿಕೊಂಡಿದ್ದಾರೆ ಅವರ ಬಗ್ಗೆ ತಿಳಿಯಲು ನಿಮಗೆ ಕೆಲವೇ ನಿಮಿಷಗಳು ಸಾಕು. ನಿಮ್ಮ ಸ್ನೇಹಿತರ ಮುಖಾಂತರವೋ, ನಿಮ್ಮ ಅಕ್ಕ ಪಕ್ಕದ ಮನೆಯವರ ಮುಖಾಂತವೋ ಅಥವಾ ನಿಮ್ಮ ನೆಂಟರ ಮುಖಾಂತರ ನಿಮಗೆ ಬೇಗ ಯಾರು ತೀರಿ ಹೋಗಿದ್ದಾರೆಂದು ತಿಲಿಸುಬಿದುತ್ತದೆ.

ಹಾಗೂ ಇತ್ತೀಚಿನ ದಿನಗಳಲ್ಲಿ ಸತ್ತವರ ಪೋಟೋವನ್ನು ಬ್ಯಾನರ್ ಮಾಡಿಸಿ ಹಾಕುವುದು ಕೂಡ ರೂಢಿಯಲ್ಲಿದ್ದು ನಿಮಗೆ ಯಾರು ತೀರಿಕೊಂಡಿದ್ದಾರೆ ಎಂದು ಬಹು ಬೇಗ ತಿಳಿದು ಬಿಡುತ್ತದೆ. ಆದರೆ ಮಂಗಳಮುಖಿಯರು ತೀರಿಕೊಂಡಾಗ ಸಾಮಾನ್ಯವಾಗಿ ಅವರನ್ನು ಬಿಟ್ಟು ಬೇರೆಯವರಿಗೆ ತಿಳಿಯುವುದಿಲ್ಲ.

ಮಂಗಳಮುಖಿಯರು ಶವವನ್ನು ಯಾರಿಗೂ ತೋರಿಸುವುದಿಲ್ಲ?
ಏಕೆಂದರೆ ಮಂಗಳಮುಖಿಯರ ಸಮುದಾಯದಲ್ಲಿ ಸತ್ತವರ ಶವವನ್ನು ಮುಚ್ಚಿಡುತ್ತಾರೆ. ಸತ್ತ ಮಂಗಳಮುಖಿಯರನ್ನು ಶವವನ್ನು ಯಾರು ಬೇರೆ ಜನರಿಗೆ ತೋರಿಸುವುದಿಲ್ಲ. ಇದು ವಿಚಿತ್ರ ಆದರು ಸತ್ಯ. ಇದಕ್ಕೆ ಹಲವು ಕಾರಣಗಳು ಇದ್ದು, ಆ ಕಾರಣಗಳು ಏನೆಂದು ಮುಂದೆ ತಿಳಿಯೋಣ.

ಮಂಗಳಮುಖಿಯರಲ್ಲಿ ಯಾರಾದರೊಬ್ಬರು ತೀರಿಕೊಂಡಾಗ ಶವ ಸಂಸ್ಕಾರ ಮಾಡಲು ಆ ಸಮುದಾಯದವರು ಮಾತ್ರ ಭಾಗವಹಿಸುತ್ತಾರೆ. ಈ ಮಂಗಳಮುಖಿಯರಲ್ಲಿ, ಹಲವು ಸಮುದಾಯಗಳಿದ್ದು ಯಾವ ಸಮುದಾಯದಲ್ಲಿ ಮಂಗಳಮುಖಿಯರು ತೀರಿ ಹೋಗಿರುತ್ತಾರೆ ಆ ಸಮುದಾಯದವರು ಮಾತ್ರ ಶವಯಾತ್ರೆಯಲ್ಲಿ ಭಾಗವಹಿಸುತ್ತಾರೆ.

ವಿಚಿತ್ರ ಎಂದರೆ ಬೇರೆ ಸಮುದಾಯದ ಮಂಗಳಮುಖಿಯರು, ತೀರಿಕೊಂಡ ಸಮುದಾಯದ ಶವಯಾತ್ರೆಯಲ್ಲಿ ಭಾಗವಹಿಸುವುದಿಲ್ಲ. ಇದು ಅವರ ಪದ್ಧತಿಯಾಗಿದೆ.ಮತ್ತೆ ಶವಯಾತ್ರೆಯನ್ನು ಅವರು ಮಧ್ಯರಾತ್ರಿಯಲ್ಲಿ ಮಾತ್ರ ಮಾಡಲಿದ್ದು, ಯಾರು ಇಲ್ಲದೆ ಇರೋ ಸಮಯದಲ್ಲಿ ಮಾತ್ರ ಶವಸಂಸ್ಕಾರ ಮಾಡುತ್ತಾರೆ.

ಮಧ್ಯರಾತ್ರಿಯೇ ಸಂಸ್ಕಾರ ಮಾಡಲು ಕಾರಣ?
ಇದಕ್ಕೆ ಹಲವು ಕಾರಣಗಳಿವೆ, ತೀರಿಕೊಂಡ ಮಂಗಳಮುಖಿಯ ಶವವನ್ನು ಬೇರೆ ಸಮುದಾಯದ ಮಂಗಳಮುಖಿಯರೇ ಆಗಿರಲಿ ಅಥವಾ ಗಂಡು ಹೆಣ್ಣಾಗಿರಲಿ ನೋಡಬಾರದು ಎಂಬುದೇ ಇವರ ಮುಖ್ಯ ಉದ್ದೇಶವಾಗಿದೆ. ಈ ರೀತಿ ಶವಯಾತ್ರೆಯನ್ನು ಮುಚ್ಚಿಟ್ಟು ಮಾಡುವುದಕ್ಕೆ ಕಾರಣವಿದ್ಡು,ಯಾರಾದರೂ ಗಂಡಾಗಲಿ ಹೆಣ್ಣಾಗಲಿ ಮಂಗಳಮುಖಿಯರ ಶವಯಾತ್ರೆಯನ್ನು ನೋಡಿದರೆ ಅವರು ಮುಂದಿನ ಜನ್ಮದಲ್ಲಿ ಮಂಗಳಮುಖಿಯಾಗಿ ಹುಟ್ಟುತ್ತಾರೆ ಎಂಬುದು ಇವರ ನಂಬಿಕೆಯಾಗಿದೆ.

ಈ ಕಾರಣದಿಂದಲೇ ಮಂಗಳಮುಖಿಯರ ಶವಯಾತ್ರೆಯಲ್ಲಿ ಮಂಗಳಮುಖಿ ಶವದ ಮುಖವನ್ನು ಯಾರಿಗೂ ತೋರಿಸುವುದಿಲ್ಲ. ಮತ್ತೊಂದು ವಿಚಾರವೆಂದರೆ ಮಂಗಳಮುಖಿಯರು ಸತ್ತಾಗ ಆ ಸಮುದಾಯದ ಯಾವುದೇ ಬೇರೆ ಮಂಗಳಮುಖಿಯರು ಕಣ್ಣೀರು ಹಾಕುವುದಿಲ್ಲ. ತಮ್ಮ ಜೊತೆಗಾರರನ್ನು ಕಳೆದುಕೊಂಡ ನೋವಿದ್ದರೂ, ಅದನ್ನು ಹೊರಗೆ ವ್ಯಕ್ತಪಡಿಸುವುದಿಲ್ಲ.

ಮಂಗಳಮುಖಿಯರು ಸತ್ತಾಗ ಹಣ ಹಂಚುತ್ತಾರೆ!
ಹೌದು,ಇದರಲ್ಲಿ ಕೆಲವರು ಹಣ ಕೂಡ ಹಂಚುತ್ತಾರೆ! ಮಂಗಳಮುಖಿಯರು ಸತ್ತಾಗ ಕೆಲವರು ಹಣ ಹಂಚುವುದಕ್ಕೆ ಒಂದು ಮುಖ್ಯ ಕಾರಣವಿದೆ. ಅದೇನೆಂದರೆ ಮಂಗಳಮುಖಿಯರು ಬದುಕಿದ್ದಾಗ, ಈ ಜಗತ್ತು ಅವರನ್ನು ನೋಡುವ ರೀತಿ, ತಿರಸ್ಕಾರ ಮನೋಭಾವನೆ,ಬೇರೆ ಯಾರಿಗೂ ಹೇಳಿಕೊಳ್ಳಲಾಗದ ಹಿಂಸೆ, ಅವರು ಬದುಕುವುದಕ್ಕೆ ಪಡುವ ನಾನ ರೀತಿಯ ಕಷ್ಟಗಳು ಇವೆಲ್ಲದರಿಂದ ಅವರು ಮುಕ್ತಿ ಪಡೆದಿರುತ್ತಾರೆ.ಈ ಉದ್ದೇಶಕ್ಕಾಗಿಯೇ ಮಂಗಳಮುಖಿಯರು ಸತ್ತಾಗ ಕೆಲವರು ಹಣ ಹಂಚುತ್ತಾರೆ.

ಶವವನ್ನು ಚಪ್ಪಲಿಯಿಂದ ಹೊಡೆಯುತ್ತಾರೆ!
ಹಿಂದೂ ಧರ್ಮದ ಮಂಗಳಮುಖಿಯರು ಶವಯಾತ್ರೆಯಲ್ಲಿ, ತೀರಿಕೊಂಡ ಮಂಗಳಮುಖಿಯ ಶವಕ್ಕೆ ಚಪ್ಪಲಿಯಿಂದ ಹೊಡೆಯುತ್ತಾರೆ. ಇದಕ್ಕೆ ಮೂಲ ಕಾರಣ ಮತ್ತೆ ಮುಂದಿನ ಜನ್ಮದಲ್ಲಿ ನೀನು ಯಾವುದೇ ಕಾರಣಕ್ಕೂ ಮಂಗಳಮುಖಿಯಾಗಿ ಹುಟ್ಟಬಾರದು, ಎಂದು ಚಪ್ಪಲಿಯಿಂದ ಸತ್ತ ಮಂಗಳ ಮುಖಿಯ ಶವಕ್ಕೆ ಹೊಡೆಯುತ್ತಾರೆ. ಮಂಗಳಮುಖಿಯರ ಸತ್ತಾಗ ಯಾವುದೇ ಕಾರಣಕ್ಕೂ ಅವರು ಶವವನ್ನು ಸುಡುವುದಿಲ್ಲ ಮಣ್ಣು ಮಾಡಿ ಸಮಾಧಿ ಮಾಡುತ್ತಾರೆ.

Comments are closed.