ಕರಾವಳಿ

ಪೋಕ್ಸೋ ಕಾಯ್ದೆಯಡಿ ಸಾಮಾಜಿಕ ಕಾರ್ಯಕರ್ತ ಕೇಶವ ಕೋಟೇಶ್ವರ ಬಂಧನ

Pinterest LinkedIn Tumblr

ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಸ್ಫೂರ್ತಿ ಸಾಮಾಜಿಕ ಸಂಸ್ಥೆಯ ಕಾರ್ಯದರ್ಶಿ ಕೇಶವ ಕೋಟೇಶ್ವರ ಎನ್ನುವಾತನನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.

ಇದೇ ಮಾರ್ಚ್ 11ರಂದು ಸ್ಫೂರ್ತಿ ಸಂಸ್ಥೆಯ ಹುಡುಗಿಯೊಬ್ಬಳು ನಾಪತ್ತೆಯಾಗಿದ್ದಳು. ಬಳಿಕ ಆಕೆ ಕೋಟ ಸಮೀಪದ ಸಾಸ್ತಾನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಳಲಿದ್ದ ಆಕೆಯನ್ನು ಕಂಡ ಸಾರ್ವಜನಿಕರು ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಅಲ್ಲಿ ವಿಚಾರಿಸಿದಾಗ ಈಕೆ ನೀಡಿದ ಮಾಹಿತಿ ಅನ್ವಯ ಸಂಸ್ಥೆಯ 6 ಮಂದಿ ಹುಡುಗಿಯರನ್ನು ಮಹಿಳಾ ಪೊಲೀಸರು ಕರೆದುಕೊಂಡು ಹೋಗಿ ಅವರನ್ನು ತನಿಖೆಗೊಳಪಡಿಸಿದ್ದಾರೆ.

ಸದ್ಯ ಹುಡುಗಿಯರು ನೀಡಿದ ಮಾಹಿತಿ ಪ್ರಕಾರ ಕೇಶವ ಕೋಟೇಶ್ವರ ಹಾಗೂ ಹನುಮಂತ ಎಂಬವನನ್ನು ವಿಚಾರಣೆ ನಡೆಸಿ, ಪೋಕ್ಸೋ ಕಾಯ್ದೆಯಡಿ ಕೇಶವ್ ಕೋಟೇಶ್ವರ ಹಾಗೂ ಹನುಮಂತ ಎಂಬಿಬ್ಬರನ್ನು ಬಂಧಿಸಲಾಗಿದೆ.ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Comments are closed.