ಕರಾವಳಿ

ಬೆಣ್ಣೆಯೊಡನೆ ಈ ಸೊಪ್ಪನ್ನು ಕಲಸಿ ಗಾಯಕ್ಕೆ ಹಾಕಿದದರೆ ಗಾಯ ಮಾಯ

Pinterest LinkedIn Tumblr

ಜಾಜಿ ಸೊಪ್ಪನ್ನು ಚೆನ್ನಾಗಿ ನುಣ್ಣಗೆ ಅರೆದು ರಸ ತೆಗೆದು ಶುದ್ಧವಾದ ಬೆಣ್ಣೆಯೊಡನೆ ಕಲಸಿ ರಾತ್ರಿ ಇಟ್ಟಿದ್ದು ಬೆಳಗ್ಗೆ ಆ ಬೆಣ್ಣೆಯನ್ನು ಕಾಯಿಸಿ ಆ ತುಪ್ಪವನ್ನು ಹಚ್ಚುತ್ತಿರುವುದರಿಂದ ಗಾಯಗಳು ಮಾಯುತ್ತವೆ.

ಅಡಿಕೆಯನ್ನು ಚೆನ್ನಾಗಿ ಕುಟ್ಟಿ ನಯವಾದ ಪುಡಿ ಮಾಡಿ ವ್ರಣಗಳ ಮೇಲೆ ಹಚ್ಚುವುದರಿಂದ ಗಾಯ ಮಾಯುತ್ತದೆ ಈ ಚಿಕಿತ್ಸೆಯನ್ನು ಗಾಯಗಳು ಸಂಪೂರ್ಣ ಮಾಯುವವರಿಗೆ ಮುಂದುವರಿಸಬಹುದು.

ಕರಿ ಎಳ್ಳನ್ನು ನೀರಿನಲಕ್ಕಿ ನಯವಾಗಿ ಅರೆದು ಅದರಲ್ಲಿ ಶುದ್ಧವಾದ ಜೇನುತುಪ್ಪವನ್ನು ಸೇರಿಸಿ ಅವೆರಡನ್ನು ಚೆನ್ನಾಗಿ ತಿಕ್ಕಿ ಮುಲಾಮು ಮಾಡಿ ಇಟ್ಟುಕೊಂಡು ಲೇಪಿಸುವುದರಿಂದ ಗಾಯ ಬೇಗನೆ ಮಾಯುತ್ತವೆ.

ಕಕ್ಕೆಯ ಚಕ್ಕೆ ಮತ್ತು ಅರಿಶಿನದ ಕೊಂಬನ್ನು ಸಮಪ್ರಮಾಣದಲ್ಲಿ ಕುಟ್ಟಿ ವಸ್ತಗಾಳಿತ ಚೂರ್ಣ ಮಾಡಿಟ್ಟುಕೊಂಡು ಇದನ್ನು ಬೆಣ್ಣೆ ತುಪ್ಪ ಅಥವಾ ಜೇನಿನಲ್ಲಿ ಕಲಸಿ ಲೇಪಿಸುವುದರಿಂದ ಗಾಯ ಮಾಯುತ್ತದೆ.

ಅಳಲೆ ಕಾಯಿಯ ಸಿಪ್ಪೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಕಷಾಯ ಮಾಡಿ ಆ ಕಷಾಯದಿಂದ ಗಾಯಗಳನ್ನು ತೊಳೆಯುತ್ತಿದ್ದರೆ ಗಾಯಗಳು ಬಹು ಬೇಗನೆ ಮಾಯುತ್ತವೆ ಈ ಕ್ರಮವನ್ನು ಅಗತ್ಯ ಕಾಣುವ ತನಕ ಮುಂದುವರಿಸಬಹುದು.

ಜಾಜಿಮಲ್ಲಿಗೆಯ ಸೊಪ್ಪು ಮತ್ತು ಮದರಂಗಿ ಸೊಪ್ಪುಗಳನ್ನು ನುಣ್ಣಗೆ ಅರೆದು ಮೇಲಿಂದ ಮೇಲೆ ಗಾಯಕ್ಕೆ ಲೇಪಿಸಿದರೆ ಗಾಯ ಬೇಗನೆ ಮಾಯುತ್ತವೆ ಇದರಿಂದ ನೋವು ನಿವಾರಣೆಯಾಗುತ್ತದೆ.

ಹೊಲದ ಅವರೇ ಬೀಜವನ್ನು ಎಮ್ಮೆಯ ಹಾಲಿನಲ್ಲಿ ಅರೆದು ಬಿಸಿ ಮಾಡಿ ಹಚ್ಚುವುದರಿಂದ ಸಾಮಾನ್ಯವಾದ ಗಾಯಗಳೆಲ್ಲ ಗುಣವಾಗುತ್ತದೆ, ಸಾಸಿವೆಯನ್ನು ಮಜ್ಜಿಗೆಯಲ್ಲಿ ಅರೆದು ಕಟ್ಟಿದ್ದರು ಸಹ ಗಾಯಗಳು ಬಹು ಬೇಗನೆ ಮಾಯುತ್ತವೆ.

ಬೆಳ್ಳುಳ್ಳಿಯನ್ನು ನಯವಾಗಿ ಅರೆದು ಹಚ್ಚುವುದರಿಂದ ಗಾಯ ದಲ್ಲಿನ ಹುಳುಗಳೆಲ್ಲ ಸತ್ತು ಬಿದ್ದು ಹೋಗುತ್ತವೆ, ಗಾಯ ಆಳವಾಗಿದ್ದರೆ ಅದಕ್ಕೆ ಅರೆದ ಬೆಳ್ಳುಳ್ಳಿಯ ರಸವನ್ನು ತುಂಬಬೇಕು ನಯವಾಗಿ ಅರೆದ ಬೆಳ್ಳುಳ್ಳಿ ಮೆತ್ತುವುದರಿಂದ ಗಾಯವು ಬೇಗನೆ ಗುಣವಾಗುತ್ತದೆ.

ನೇರಳೆಯ ಎಲೆಯನ್ನು ನೀರಿನಲ್ಲಿ ನುಣ್ಣಗೆ ಅರೆದು ಹಚ್ಚುವುದರಿಂದ ಸುಟ್ಟ ಗಾಯದ ಕಲೆ ಪರಿಹಾರವಾಗುತ್ತದೆ ಈ ಚಿಕಿತ್ಸೆಯನ್ನು ಕನಿಷ್ಠ ಎರಡರಿಂದ ಮೂರು ವಾರ ಅಥವಾ ಅಗತ್ಯ ಕಾಣುವ ತನಕ ಮುಂದುವರಿಸಬಹುದು.

ಅರಳಿ ಮರದ ಒಣಗಿದ ಎಲೆಗಳನ್ನು ಸುಟ್ಟು ಬಸ್ಮ ಮಾಡಿಟ್ಟುಕೊಳ್ಳಿ, ಈ ಬಸ್ಮವನ್ನು ಬಎಂದ ಗಾಯದ ಮೇಲೆ ಉದುರಿಸುತ್ತಿದ್ದಾರೆ ಗಾಯ ಬಹು ಬೇಗನೆ ಮಾಯುತ್ತವೆ ಈ ಭಸ್ಮವನ್ನು ಕೊಬ್ಬರಿ ಎಣ್ಣೆಯಲ್ಲಿ ಕಲಸಿಯು ಗಾಯಕ್ಕೆ ಹಚ್ಚಬಹುದು.

ಮಾವಿನ ಬೇರಿನ ರಸದೊಡನೆ ಸ್ವಲ್ಪ ಆರತಿ ಕರ್ಪೂರವನ್ನು ಮತ್ತು ಸ್ವಲ್ಪ ತುಪ್ಪವನ್ನು ಸೇರಿಸಿ ನುಣ್ಣಗೆ ಅರೆದು ಹಚ್ಚುವುದರಿಂದ ಗಾಯದಿಂದ ಸುರಿಯುವ ರಕ್ತವು ನಿಲ್ಲುತ್ತದೆ ಮತ್ತು ಗಾಯವು ಬಹು ಬೇಗನೇ ಮಾಯುತ್ತದೆ.

ಹೆಬ್ಬೆಟ್ಟಿನಷ್ಟು ತೇಯ್ದು ಶ್ರೀಗಂಧವನ್ನು ಶುದ್ಧವಾದ ಹಸುವಿನ ಹಾಲಿನಲ್ಲಿ ಬೆರೆಸಿ ಚೆನ್ನಾಗಿ ಕಲಕಿ ಪ್ರತಿನಿತ್ಯ ಬೆಳಗ್ಗೆ ಕುಡಿಯುವುದರಿಂದ ಎಲ್ಲ ಬಗೆಯ ಸಾಮಾನ್ಯ ಗಾಯಗಳು ಬಹು ಬೇಗನೆ ಮಾಯುತ್ತವೆ ಹೀಗೆ ಕನಿಷ್ಠ ನಾಲ್ಕಾರು ದಿನ ಅಥವಾ ಅಗತ್ಯ ಕಾಣುವ ತನಕ.

ಅಡಿಕೆಯ ನಯವಾದ ಚೂರ್ಣವನ್ನು ಗಾಯದ ಮೇಲೆ ಲೇಪಿಸುತ್ತಿದ್ದರೆ ಗಾಯ ಬೇಗನೆ ಮಾಯುತ್ತದೆ ದಾಳಿಂಬೆ ಚಕ್ಕೆ ಚೂರ್ಣದ ಲೇಪನವು ಗಾಯ ಚಿಕಿತ್ಸೆಗೆ ಉಪಯುಕ್ತ.

ಸೀತಾಫಲದ ಹಣ್ಣಿನ ಎಲೆಗಳನ್ನು ಬಾಣಲೆಯಲ್ಲಿ ಹಾಕಿ ಸೀರೆ ಹೋಗುವಂತೆ ಚೆನ್ನಾಗಿ ಹುರಿದು ಕರುಕು ಮಾಡಿ ಚೂರ್ಣ ಮಾಡಿಟ್ಟುಕೊಳ್ಳಿ ಈ ಚೂರ್ಣವನ್ನು ಕೊಬ್ಬರಿ ಎಣ್ಣೆಯಲ್ಲಿ ಕಲಸಿ ಹಚ್ಚುತ್ತಿದ್ದರೆ ಎಲ್ಲ ಬಗೆಯ ಗಾಯಗಳು ಮಾಯುತ್ತದೆ, ಅಗತ್ಯ ಕಂಡಷ್ಟು ದಿನ.

Comments are closed.