ಕರಾವಳಿ

ಮುಂಬಯಿ: ಬಿಲ್ಲವ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀಸ್‌ ನ ಮಾಹಿತಿ ಶಿಬಿರ, ಪ್ರಶಸ್ತಿ ಪ್ರಧಾನ ಸಮಾರಂಭ

Pinterest LinkedIn Tumblr

ಮುಂಬಯಿ: ಬಿಲ್ಲವ ಸಮುದಾಯದ ಉದ್ಯಮಿಗಳು ಸ್ಥಾಪಿಸಿದ ಬಿಲ್ಲವ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀಸ್‌ (ಬಿಸಿಸಿಐ) ವತಿಯಿಂದ ಎಚ್‌ಡಿಎಫ್‌ಸಿ ಬ್ಯಾಂಕ್‌ ನ ಸಹಯೋಗದಲ್ಲಿ ಬಿಸಿಸಿಐ ಅಧ್ಯಕ್ಷ ಎನ್‌. ಟಿ. ಪೂಜಾರಿಯವರ ಅಧ್ಯಕ್ಷತೆಯಲ್ಲಿ ಕುರ್ಲಾ ಪೂರ್ವದ ಬಂಟರ ಭವನದ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಮೈಕ್ರೋ ಸ್ಮಾಲ್‌ ಆ್ಯಂಡ್‌ ಮೀಡಿಯಂ ಎಂಟರ್‌ಪ್ರೈಸಸ್‌ ಕಾಂಕ್ಲೇವ್‌ ವಿಶಯದಲ್ಲಿ ಮಾಹಿತಿ ಶಿಬಿರವು ನಡೆಯಿತು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಎಂ.ವಿ. ಕಿಣಿ ಕಂಪೆನಿ ಅಡ್ವೊಕೇಟ್ಸ್‌ ಆ್ಯಂಡ್‌ ಸಾಲಿಸಿಟರ್ಸ್‌ ಸಂಸ್ಥೆಯ ಮುಖ್ಯಸ್ಥ, ಹಿರಿಯ ನ್ಯಾಯವಾದಿ ಎಂ. ವಿ. ಕಿಣಿಯವರು ಸಣ್ಣ ಉದ್ದಿಮೆಗಳು ಈಗ ಅಭಿವೃದ್ದಿಗೊಳ್ಳುತ್ತಿದ್ದು, ಇದರಿಂದ ದೇಶದ ಆರ್ಥಿಕ ಬೆಳವಣಿಗೆ ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿ ಭಾರತ್‌ ಬ್ಯಾಂಕಿನ ನಿರ್ದೇಶಕ ಎಲ್‌. ವಿ. ಅಮೀನ್‌, ಅತಿಥಿಗಳಾಗಿ ಡಾ| ಶ್ರೀಕಾಂತ್‌ ಕೆ. ಅರಿಮಣಿತ್ತಾಯ, ಡಾ| ರಾಜೇಶ್‌ ನಾಯಕ್‌, ಸಿಎ ಎಸ್‌. ಎಸ್‌. ನಾಯಕ್‌ ಮೊದಲಾದವರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಅಮಿತ್‌ ಖನ್ನಾ, ಡಾ| ಸಿ. ಕೆ. ಅಂಚನ್‌, ಜಸ್ಟೀಸ್‌ ಕೆ. ಎಸ್‌. ಹೆಗ್ಡೆ ಎ.ಪಿ. ಆಚಾರ್‌, ಕೌಶಿಕ್‌ ಚಕ್ರಬೊರ್ತಿ ಉಪಸ್ಥಿತರಿದ್ದು ಸೂಕ್ತ ಮಾಹಿತಿಯಿತ್ತರು.

ಬಿಸಿಸಿಐಯ ಉಪ ಕಾರ್ಯಾಧ್ಯಕ್ಷ ಡಿ. ಬಿ. ಅಮೀನ್‌, ಡಿ. ಎನ್ ಸುವರ್ಣ, ಮಹೇಂದ್ರ ಸೂರು ಕರ್ಕೇರ, ನಿರ್ದೇಶಕರಾದ ಚಂದಯ ಬಿ. ಕರ್ಕೇರ, ಹರೀಶ್‌ ಜಿ. ಅಮಿನ್‌, ಪುರುಷೋತ್ತಮ ಎ ಸ್‌. ಕೋಟ್ಯಾನ್‌, ಅಶ್ಮಿತ್‌ ಬಿ. ಕುಳಾಯಿ, ಗಂಗಾಧರ್‌ ಎನ್‌. ಅಮೀನ್‌, ಹರೀಶ್ ಅಮೀನ್, ಭರತ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಕು| ನಿಖೀತಾ ಪೂಜಾರಿ ಮತ್ತು ಕು| ಅಂಕಿತಾ ಪೂಜಾರಿ ಪ್ರಾರ್ಥನೆಗೈದರು. ಕು| ದೀಪಾ ರೈ ಕಾರ್ಯಕ್ರಮ ನಿರೂಪಿಸಿದರು. ಬಿಸಿಸಿಐ ಕಾರ್ಯದರ್ಶಿ ನ್ಯಾ. ಆನಂದ್‌ ಪೂಜಾರಿ ಸ್ವಾಗತಿಸಿದರು.

ವರದಿ : ಈಶ್ವರ ಎಂ. ಐಲ್  /   ಚಿತ್ರ : ದಿನೇಶ್ ಕುಲಾಲ್

Comments are closed.