ಕರಾವಳಿ

ದೇಹದಲ್ಲಿ ಕಡಿಮೆ ಹಿಮೋಗ್ಲೋಬಿನ್ ಸಮಸ್ಯೆ ಇದ್ದವರು ಸೇವಿಸಬೇಕಾದ ಆಹಾರಗಳು

Pinterest LinkedIn Tumblr

ಹೌದು ನಿಮ್ಮ ದೇಹಕ್ಕೆ ಹಿಮೋಗ್ಲೋಬಿನ್ ತುಂಬಾ ಮುಖ್ಯ, ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದ್ರೆ ಹಲವು ರೀತಿಯ ಸಮಸ್ಯೆಗಳು ಕಂಡುಬರುತ್ತವೆ, ನಿಮ್ಮ ದೇಹದಲ್ಲಿ ಆಮ್ಲಜನಕ ಕಡಿಮೆಯಾಗಿ ನಿಮ್ಮ ದೇಹದಲ್ಲಿ ಕೆಂಪು ಜೀವಕೋಶಗಳು ಕಡಿಮೆಯಾದಾಗ ಇಂತಹ ಸಮಸ್ಯೆಗಳು ಕಂಡುಬರುತ್ತವೆ.

ಈ ರೀತಿಯಾಗಿ ಹಿಮೋಗ್ಲೋಬಿನ್ ಸಮಸ್ಯೆ ಇದ್ದರೆ ಈ ಕೆಳಗೆ ಹೇಳಿರುವ ಆಹಾರಗಳನ್ನು ಸೇವಿಸಿ ನಿಮ್ಮ ಹಿಮೋಗ್ಲೋಬಿನ್ ಸಮಸ್ಯೆಯನ್ನು ಸರಿಪಡಿಸಿಕೊಳ್ಳಿ.

ಸೇಬು : ನಿಮ್ಮ ದೇಹದಲ್ಲಿನ ರಕ್ತ ಹೀನತೆಯನ್ನು ಕಡಿಮೆ ಮಾಡಲು ಈ ಸೇಬು ತುಂಬ ಸಹಕಾರಿಯಾಗುತ್ತದೆ, ನೀವು ಪ್ರತಿದಿನ ಒಂದು ಸೇಬು ತಿನ್ನಿ ನಿಮ್ಮ ಹಿಮೋಗ್ಲೋಬಿನ್ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಿ.

ಪೇರಳೆ ಹಣ್ಣು : ನೀವು ವಾರಕ್ಕೆ ಮೂರು ಪೇರಳೆ ಹಣ್ಣು ಸೇವನೆಯಿಂದ ನಿಮ್ಮ ಹಿಮೋಗ್ಲೋಬಿನ್ ಸಮಸ್ಯೆಯನ್ನು ದೂರ ಮಾಡಿಕೊಳ್ಳಿ.

ಬೀಟ್ರೋಟ್ : ನೀವು ಪ್ರತಿದಿನ ಅಥವಾ ಊಟದಲ್ಲಿ ಬೀಟ್ರೋಟ್ ಸೇವಿಸುವುದು ತುಂಬ ಒಳಿತು ಬೀಟ್ರೋಟ್ ಜ್ಯೂಸ್ ಅಥವಾ ಬೀಟ್ರೋಟ್ ಪಲ್ಯ ಸೇವಿಸಿ ಹಿಮೋಗ್ಲೋಬಿನ್ ಸಮಸ್ಯೆಯಿಂದ ದೂರವಿರಿ.

ದಾಳಿಂಬೆ : ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಸಮಸ್ಯೆ ಕಂಡುಬಂದರೆ ದಾಳಿಂಬೆ ಸೇವನೆ ಮಾಡಿದ್ರೆ ತುಂಬ ಒಳಿತು ಇದು ನಿಮ್ಮ ಆರೋಗ್ಯಕ್ಕೆ ತುಂಬ ಸಹಾಯ ಮಾಡಲಿದೆ.

ನೆಲಗಡಲೆ,ಬೆಲ್ಲ : ನೆಲಗಡಲೆ ಜೊತೆ ಬೆಲ್ಲವನ್ನು ಸೇರಿಸಿ ತಿಂದರೆ ನಿಮ್ಮಲ್ಲಿರುವ ಹಿಮೋಗ್ಲೋಬಿನ್ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು.

Comments are closed.