ಕರಾವಳಿ

ಕುದ್ರೋಳಿಯಲ್ಲಿ ಚರಂಡಿ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿ ಪೂಜೆ

Pinterest LinkedIn Tumblr

ಮಂಗಳೂರು ಮಹಾನಗರ ಪಾಲಿಕೆಯ ಕುದ್ರೋಳಿ ವಾರ್ಡಿನಲ್ಲಿ ಚರಂಡಿ ನಿರ್ಮಾಣ ಮತ್ತು ಅಭಿವೃದ್ಧಿ ಕಾಮಗಾರಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಗುದ್ದಲಿಪೂಜೆ ನೆರವೇರಿಸಿದರು.

ನಂತರ ಈ ಕುರಿತು ಮಾತನಾಡಿದ ಶಾಸಕರು, ನಲ್ವತ್ತಮೂರನೇ ಕುದ್ರೋಳಿ ವಾರ್ಡಿನ ಮಿಲ್ಲತ್ ನಗರದ ಸಿಪಿಸಿ ಕಂಪೌಂಡಿನ ಪ್ರದೇಶದಲ್ಲಿ ಚರಂಡಿ ನಿರ್ಮಿಸಲು ಸ್ಥಳೀಯರು ಮನವಿ ಮಾಡುತ್ತಲೇ ಬಂದಿದ್ದರು. ಆ ಪ್ರಕಾರವಾಗಿ ಶಾಸಕ ನಿಧಿಯಿಂದ ಹತ್ತು ಲಕ್ಷ ಹಾಗೂ ಸ್ಥಳೀಯ ಪಾಲಿಕೆ ಸದಸ್ಯರ ನಿಧಿಯಿಂದ ಹದಿನೈದು ಲಕ್ಷ ರೂಪಾಯಿ ವೆಚ್ಚದಲ್ಲಿ ಚರಂಡಿ ನಿರ್ಮಾಣ ಮತ್ತು ಅಭಿವೃದ್ಧಿ ಕಾಮಗಾರಿ ನಡೆಯಲಿದೆ.

ಮನಪಾ ಸದಸ್ಯರ ನಿಧಿಯಿಂದ ನಡೆಯುತ್ತಿರುವ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದ್ದು, ಶಾಸಕ ನಿಧಿಯ ಹತ್ತು ಲಕ್ಷದ ಕಾಮಗಾರಿಗಳನ್ನು ಅದರೊಂದಿಗೆ ಜೋಡಿಸಲಾಗುತ್ತದೆ. ಕಾಮಗಾರಿ ನಡೆಯುವಾಗ ನಾಗರಿಕರಿಗೆ ಒಂದಿಷ್ಟು ತೊಂದರೆ ಆದರೂ ಸಹಕರಿಸಬೇಕು ಎಂದು ಹೇಳಿದರು.

ಶಾಸಕರೊಂದಿಗೆ ಸ್ಥಳೀಯ ಪಾಲಿಕೆ ಸದಸ್ಯ ಅಝೀಜ್ ಕುದ್ರೋಳಿ, ಮಂಗಳೂರು ನಗರ ದಕ್ಷಿಣ ಬಿಜೆಪಿ ಉಪಾಧ್ಯಕ್ಷ ಜಗದೀಶ್ ಶೆಟ್ಟಿ ಬೋಳಾರ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಸಂತ ಜೆ ಪೂಜಾರಿ, ಕುದ್ರೋಳಿ ವಾರ್ಡ್ ಬಿಜೆಪಿ ಕಾರ್ಯದರ್ಶಿ ಅರ್ಷದ್, ಬಿಜೆಪಿ ಮುಖಂಡರಾದ ಭವಾನಿಶಂಕರ್, ದೇವದಾಸ್ ಕರ್ಕೇರಾ, ಭತೀಶ್, ಸುಧೀರ್ ಸಹಿತ ಸ್ಥಳೀಯರು ಉಪಸ್ಥಿತರಿದ್ದರು.

Comments are closed.